ಕರ್ನಾಟಕ

karnataka

ETV Bharat / business

ಸಾಮಾನ್ಯ UPI ಆಧರಿತ ಡಿಜಿಟಲ್ ಪೇಮೆಂಟ್​ಗಳಿಗೆ ಯಾವುದೇ ಶುಲ್ಕವಿರಲ್ಲ: NPCI ಸ್ಪಷ್ಟನೆ

ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಯುಪಿಐ ಮೂಲಕ ಮಾಡಲಾಗುವ ಪಾವತಿಗಾಗಿ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಎನ್​ಪಿಸಿಐ ಸ್ಪಷ್ಟಪಡಿಸಿದೆ.

By

Published : Mar 29, 2023, 3:33 PM IST

No charges for normal UPI-based digital payments, clarifies NPCI
No charges for normal UPI-based digital payments, clarifies NPCI

ನವದೆಹಲಿ : ಯುಪಿಐ ಆಧರಿತ ವ್ಯವಹಾರಗಳಿಗೆ ವಿಧಿಸಲಾಗಿದೆ ಎನ್ನಲಾದ ಇಂಟರ್‌ಚೇಂಜ್ ಶುಲ್ಕಗಳ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸ್ಪಷ್ಟೀಕರಣ ನೀಡಿದೆ. ಈ ಶುಲ್ಕಗಳು ಪ್ರಿಪೇಯ್ಡ್ ಪಾವತಿ ವ್ಯವಹಾರ (ಪಿಪಿಐ) ಗಳಿಗೆ ಮಾತ್ರ ಅನ್ವಯಿಸುತ್ತವೆ. ಆದರೆ ಗ್ರಾಹಕರಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಪಿಪಿಐ ಹೇಳಿದೆ. ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಯುಪಿಐ ಮೂಲಕ ಹಣ ಕಳುಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಗಿಫ್ಟ್​ ಕಾರ್ಡ್​ಗಳು, ವ್ಯಾಲೆಟ್​ಗಳು, ಹಾಗೂ ಇನ್ನಿತರ ಪ್ರಿಪೇಡ್ ಸಾಧನಗಳ ಮೂಲಕ ಪ್ರಿಪೇಡ್​ ವಹಿವಾಟು ನಡೆಸಿದರೆ ಏಪ್ರಿಲ್ 1 ರಿಂದ ಶೇ 1.1 ರವರೆಗೆ ಇಂಟರಚೇಂಜ್ ಶುಲ್ಕ ವಿಧಿಸಲಾಗುವುದು ಎಂದು ಎನ್​ಸಿಪಿಐ ಸುತ್ತೋಲೆಯಲ್ಲಿ ಹೇಳಿದೆ ಎಂದು ವರದಿಯಾಗಿತ್ತು. 2,000 ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಇತ್ತೀಚಿನ ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ ಪ್ರಿಪೇಯ್ಡ್ ಪಾವತಿ ಉಪಕರಣಗಳು (PPI ವ್ಯಾಲೆಟ್‌ಗಳು) ಇಂಟರ್‌ಆಪರೇಬಲ್ ಯುಪಿಐ ಪರಿಸರ ವ್ಯವಸ್ಥೆಯ ಭಾಗವಾಗಲು ಅನುಮತಿ ನೀಡಲಾಗಿದೆ. ಈ ದೃಷ್ಟಿಯಿಂದ ಎನ್​ಪಿಸಿಐ ಈಗ ಪಿಪಿಐ ವ್ಯಾಲೆಟ್‌ಗಳನ್ನು ಇಂಟರ್‌ಆಪರೇಬಲ್ ಯುಪಿಐ ಪರಿಸರ ವ್ಯವಸ್ಥೆಯ ಭಾಗವಾಗಲು ಅನುಮತಿ ನೀಡಿದೆ. ಇದರಲ್ಲಿ ಪರಿಚಯಿಸಲಾದ ಇಂಟರ್‌ಚೇಂಜ್ ಶುಲ್ಕಗಳು ಪಿಪಿಐ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತವೆ ಮತ್ತು ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ. ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಯುಪಿಐ ಪಾವತಿಗಳಿಗೆ (ಅಂದರೆ ಸಾಮಾನ್ಯ ಯುಪಿಐ ಪಾವತಿಗಳಿಗೆ) ಯಾವುದೇ ಶುಲ್ಕಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಎನ್‌ಪಿಸಿಐ ಬುಧವಾರ ತಿಳಿಸಿದೆ.

ಯುಪಿಐ ಎಂಬುದು ಒಂದು ತ್ವರಿತ ಪಾವತಿ ವ್ಯವಸ್ಥೆಯಾಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. ಇದು ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ ಆಗಿ ಬಳಸುವ ಅವಕಾಶ ನೀಡುತ್ತದೆ ಹಾಗೂ ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳನ್ನು ವಿಲೀನಗೊಳಿಸುತ್ತದೆ. ಇದು ತಡೆರಹಿತ ವ್ಯಾಪಾರಿ ಪಾವತಿಗಳನ್ನು ಸುಗಮಗೊಳಿಸುತ್ತದೆ.

ಸಾಂಪ್ರದಾಯಿಕವಾಗಿ, ಯುಪಿಐ ವಹಿವಾಟುಗಳ ಅತ್ಯಂತ ಆದ್ಯತೆಯ ವಿಧಾನವೆಂದರೆ ಪಾವತಿಗಳನ್ನು ಮಾಡಲು ಯಾವುದೇ ಯುಪಿಐ ಸಕ್ರಿಯಗೊಳಿಸಿದ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು. ಈ ಮಾದರಿಯಲ್ಲಿಯೇ ಸುಮಾರು ಶೇಕಡಾ 99.9 ರಷ್ಟು ಯುಪಿಐ ವಹಿವಾಟುಗಳು ನಡೆಯುತ್ತಿವೆ. ಹೀಗೆ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಹಣ ಕಳುಹಿಸುವ ವ್ಯವಸ್ಥೆ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಉಚಿತವಾಗಿಯೇ ಮುಂದುವರಿಯಲಿದೆ.

ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅನ್ನು 2008 ರಲ್ಲಿ ಭಾರತದಲ್ಲಿ ಚಿಲ್ಲರೆ ಪಾವತಿಗಳು ಮತ್ತು ಸೆಟ್ಲಮೆಂಟ್ ವ್ಯವಸ್ಥೆಗಳನ್ನು ನಿರ್ವಹಿಸುವ ಒಂದು ಸಂಸ್ಥೆಯಾಗಿ ಆರಂಭಿಸಲಾಯಿತು. ಎನ್​ಪಿಸಿಐ ತಂತ್ರಜ್ಞಾನದ ಬಳಕೆಯ ಮೂಲಕ ಚಿಲ್ಲರೆ ಪಾವತಿ ವ್ಯವಸ್ಥೆಗಳಲ್ಲಿ ಆವಿಷ್ಕಾರಗಳನ್ನು ತರಲು ಗಮನಹರಿಸಿದೆ ಮತ್ತು ಭಾರತವನ್ನು ಡಿಜಿಟಲ್ ಆರ್ಥಿಕತೆಯಾಗಿ ಪರಿವರ್ತಿಸಲು ನಿರಂತರ ಕೆಲಸ ಮಾಡುತ್ತಿದೆ.

ಇದನ್ನೂ ಓದಿ : UPI ವಂಚನೆ ಬಗ್ಗೆ ಇರಲಿ ಎಚ್ಚರ! ಪಿನ್​ ಸೆಟ್​ ಮಾಡುವುದಕ್ಕೆ ಅಸಡ್ಡೆ ಬೇಡ

ABOUT THE AUTHOR

...view details