ಕರ್ನಾಟಕ

karnataka

ETV Bharat / business

ಏರ್​​ ಇಂಡಿಯಾಕ್ಕೆ ಹೊಸ ಲೋಗೋ.. ಇದನ್ನು ಡಿಸೈನ್​​ ಮಾಡಿದ್ದು ಯಾರು ಗೊತ್ತಾ? - ಅಸ್ನೀಮ್ ಅಲಿ ವಿನ್ಯಾಸ

Air India New Logo: ಏರ್​ ಇಂಡಿಯಾ ಮತ್ತೆ ಬದಲಾಗಿದೆ. ಹೊಸ ಲೋಗೊ ಅನಾವರಣಗೊಂಡಿದೆ.

Etv Bharatnew logo for Air India
Etv Bharatಏರ್​​ ಇಂಡಿಯಾಕ್ಕೆ ಹೊಸ ಲೋಗೋ.. ಇದನ್ನು ಡಿಸೈನ್​​ ಮಾಡಿದ್ದು ಯಾರು ಗೊತ್ತಾ?

By

Published : Aug 11, 2023, 7:46 AM IST

Updated : Aug 11, 2023, 10:08 AM IST

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ಸ್ ಏರ್ ಇಂಡಿಯಾ ತನ್ನ ಹೊಸ ಲೋಗೋವನ್ನು ಅನಾವರಣಗೊಳಿಸಿದೆ. ಏರ್​ ಇಂಡಿಯಾ ತನ್ನ ನೂತನ ಲೋಗೋದ ಭಾಗವಾಗಿ ಕೆಂಪು ಮತ್ತು ಬಿಳಿ ಬಣ್ಣವನ್ನು ಹಾಗೇ ಉಳಿಸಿಕೊಂಡಿದೆ. ನೇರಳೆ ಬಣ್ಣದ ಡ್ಯಾಶ್‌ ಸೇರಿಸಲಾಗಿದೆ. ಹೊಸ ಲೋಗೋವನ್ನು 'ದಿ ವಿಸ್ಟಾ' ಎಂದು ಕರೆದಿದೆ.

New logo for Air India ಲೋಗೋ ಬಿಡುಗಡೆಯ ಭಾಗವಾಗಿ ಏರ್‌ಲೈನ್ಸ್​​ ತನ್ನ ಹೊಸ ಟೈಲ್ ವಿನ್ಯಾಸ ಮತ್ತು ಥೀಮ್ ಸಾಂಗ್ ಅನ್ನು ಕೂಡಾ ಬಿಡುಗಡೆ ಮಾಡಿದೆ. ನೂತನ ಲಾಂಛನವು ಅಪರಿಮಿತ ಸಾಧ್ಯತೆಗಳು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.

ಲೋಗೋ ಅನಾವರಣದ ವೇಳೆ ಮಾತನಾಡಿದ ಚಂದ್ರಶೇಖರನ್​, ನೀವು ಈಗ ಕಾಣುವ ಹೊಸ ಲೋಗೋ, ಐತಿಹಾಸಿಕವಾಗಿ ಬಳಸಿದ ಕಿಟಕಿಯಿಂದ ಸೂಚಿಸಲಾದ ವಿಸ್ಟಾ (ಚಿನ್ನದ ಕಿಟಕಿ) ಮಿತಿಯಿಲ್ಲದ ಸಾಧ್ಯತೆಗಳು, ಪ್ರಗತಿ, ಆತ್ಮವಿಶ್ವಾಸ ಮತ್ತು ಎಲ್ಲವನ್ನೂ ಸಂಕೇತಿಸುತ್ತದೆ ಎಂದು ಚಂದ್ರಶೇಖರನ್ ಬಣ್ಣಿಸಿದ್ದಾರೆ.

ಮಾನವ ಸಂಪನ್ಮೂಲಗಳನ್ನು ಹೆಚ್ಚಿನ ರೀತಿ ಬಳಸಿಕೊಳ್ಳುವತ್ತ ಗಮನ ಹರಿಸಿದ್ದೇವೆ. ದೇಶದ ಜನರಿಗೆ, ಪ್ರಯಾಣಿಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಹೊಸ ವಿಮಾನಗಳ ಖರೀದಿಗೆ ಆರ್ಡರ್​ ಕೊಟ್ಟಿದ್ದೇವೆ. ಇದು ಬಹಳಷ್ಟು ಕಠಿಣ ಕೆಲಸವಾಗಿದೆ. ಆದರೆ, ನಮ್ಮ ದಾರಿ ಸ್ಪಷ್ಟವಾಗಿದೆ. ಹೊಸ ಲೋಗೋ ನಮ್ಮ ದಿಟ್ಟ ದೃಷ್ಟಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.

ಲೋಗೋ ಅನಾವರಣ ಮಾಡಿ ಮಾತನಾಡಿದ ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಬಣ್ಣಗಳು, ನಮೂನೆಗಳು, ಆಕಾರಗಳು ನಾವು ಪ್ರತಿನಿಧಿಸುವ ವಸ್ತುಗಳನ್ನು ಸೂಚಿಸುತ್ತವೆ. ನಮ್ಮ ಕ್ರಿಯೆಗಳು ತುಂಬಾ ಜೋರಾಗಿ ಮಾತನಾಡುತ್ತವೆ. ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯ ಪಾತ್ರವನ್ನು ದೇಶ ಸೇವೆಯ ಭಾಗವಾಗಿ ಮತ್ತಷ್ಟು ಹೆಚ್ಚಿಸಲು, ಈಗಿನ ಕೆಲಸವನ್ನು ಮರುರೂಪಿಸಲು ಸಂಪೂರ್ಣ ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎಂದು ಅವರು ಬಣ್ಣಿಸಿದ್ದಾರೆ.

ಹೊಸ ಲೋಗೋ ಯಾರ ಕಲ್ಪನೆ: ಏರ್ ಇಂಡಿಯಾಗಾಗಿ ಹೊಸ ಲೋಗೋವನ್ನು ಅಸ್ನೀಮ್ ಅಲಿ ವಿನ್ಯಾಸಗೊಳಿಸಿದ್ದಾರೆ. ಇವರು ಫ್ಯೂಚರ್ ಬ್ರಾಂಡ್ ಇಂಡಿಯಾದ ಮುಖ್ಯ ಸೃಜನಾತ್ಮಕ ಅಧಿಕಾರಿಯಾಗಿದ್ದಾರೆ. ತಮ್ಮ ವಿನ್ಯಾಸದ ಬಗ್ಗೆ ಮಾತನಾಡಿರುವ ಅಸ್ನೀಮ್​ ಅಲಿ, ನಾವು ಬ್ರ್ಯಾಂಡ್ ಅನ್ನು ಮರು -ಕಲ್ಪನೆ ಮಾಡಿದ್ದೇವೆ. ಈ ಬ್ರಾಂಡ್ ಬದಲಾವಣೆ ವೇಳೆ ನಾವು ನಿಜವಾಗಿ ಏರ್ ಇಂಡಿಯಾ ಬ್ರ್ಯಾಂಡ್ ಪ್ರಪಂಚದಲ್ಲಿ ಮಿನುಗಬೇಕಾದರೆ ಏನು ಮಾಡಬೇಕು ಎಂಬ ಅಂಶಗಳ ಆಧಾರದ ಮೇಲೆ ರಚನೆ ಮಾಡಿದ್ದೇವೆ ಎಂದು ಅಸ್ನೀಮ್​​ ವಿವರಿಸಿದ್ದಾರೆ.

ವಿಮಾನದಲ್ಲಿ ಯಾವಾಗಲೂ ಇರುವ ಕಿಟಕಿ, ಹೊರಗೆ ಹಾಗೂ ಮೆನು ಕಾರ್ಡ್‌ನ ಒಳಗಡೆ, ವಿಮಾನದಲ್ಲಿರುವ ಪ್ರತಿ ವಸ್ತುವಿನೊಂದಿಗೆ ನಿರಂತರ ವಿನ್ಯಾಸದ ಸಂಕೇತವಾಗಿರುವ ಐಕಾನಿಕ್ ಆಗಿ ಏರ್ ಇಂಡಿಯಾ ವಿಂಡೋ ವನ್ನು ರಚನೆ ಮಾಡಿದ್ದೇವೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಾವು ಅದನ್ನು ಮರು - ವಿನ್ಯಾಸಗೊಳಿಸಿದ್ದೇವೆ. ನಮ್ಮ ಈ ಕೆಲಸ ದೇಶವು ಅಧಿಕೃತವಾಗಿ ಗುರುತಿಸಬಹುದಾದ ಭಾರತೀಯತೆಯನ್ನು ಪ್ರಚುರ ಪಡಿಸುತ್ತದೆ. ಹಾಗೂ ಅತ್ಯಂತ ಸಮಕಾಲೀನ ವಿಶ್ವ ದರ್ಜೆಯ ಗುಣಮಟ್ಟವನ್ನು ಅದು ಪ್ರತಿನಿಧಿಸುತ್ತದೆ ಎಂದು ಅಸ್ನೀಮ್​ ಬಣ್ಣಿಸಿದ್ದಾರೆ.

ಜನವರಿ 27, 2022 ರಂದು ಟಾಟಾ ಸನ್ಸ್ರ್ ಏರ್​ ಇಂಡಿಯಾವನ್ನು ಭಾರತ ಸರ್ಕಾರದಿಂದ ವಶಕ್ಕೆ ತೆಗೆದುಕೊಂಡಿತು. ಈ ಸ್ವಾಧೀನದ ನಂತರ, ಟಾಟಾ ಸನ್ಸ್ ಏರ್ ಇಂಡಿಯಾ ಮತ್ತು ವಿಸ್ತಾರಾವನ್ನು ಒಂದೇ ಏಕೀಕೃತ ಘಟಕವಾಗಿ ವಿಲೀನಗೊಳಿಸುವ ಉದ್ದೇಶವನ್ನು ಬಹಿರಂಗಪಡಿಸಿತು. ಈ ವಿಲೀನ ಪ್ರಕ್ರಿಯೆ ಮಾರ್ಚ್ 2024 ರೊಳಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ:ಏರ್​ ಇಂಡಿಯಾ -2021: ಆಗಸದಲ್ಲಿ ಸ್ವದೇಶಿ ನಿರ್ಮಿತ ಯುದ್ಧವಿಮಾನಗಳ ತಾಕತ್ತು ಅನಾವರಣ

Last Updated : Aug 11, 2023, 10:08 AM IST

ABOUT THE AUTHOR

...view details