ಹೈದರಾಬಾದ್: ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ 5 ಲಕ್ಷದವರೆಗೆ ಗುಂಪು ಆರೋಗ್ಯ ವಿಮಾ ಪಾಲಿಸಿ ಮೂಲಕ ರಕ್ಷಣೆ ನೀಡುತ್ತದೆ. ಈ ಸಂದರ್ಭದಲ್ಲಿ ಉದ್ಯೋಗಿ ಮತ್ತೊಂದು ಪಾಲಿಸಿ ತೆಗೆದುಕೊಳ್ಳಬೇಕೇ? ಅಥವಾ ಟಾಪ್ ಅಪ್ ಸಾಕೇ? ಎಂಬುದನ್ನು ಅಗತ್ಯವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ. ಗುಂಪು ಆರೋಗ್ಯ ವಿಮೆ ಕೇವಲ ಹೆಚ್ಚುವರಿ ರಕ್ಷಣೆಯಾಗಿದೆ. ಕೆಲಸದಲ್ಲಿರುವಾಗ ಇದು ಉಪಯುಕ್ತವಾಗಿದೆ. ಅಗತ್ಯ ಇದ್ದರೆ ಟಾಪ್-ಅಪ್ ಪಾಲಿಸಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
75 ಸಾವಿರ ಸಂಬಳ ಪಡೆಯುವವರು 50 ಲಕ್ಷದ ಟರ್ಮ್ ಪಾಲಿಸಿ ಮಾಡಿಸಬಹುದೇ?:45 ವರ್ಷದ ವ್ಯಕ್ತಿಯೊಬ್ಬರು ನಾಲ್ಕು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ 50 ಲಕ್ಷ ರೂ.ಗಳ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಂಡಿದ್ದರು. ಈಗ ಅವರು 50 ಲಕ್ಷದವರೆಗೆ ಮತ್ತೊಂದು ಪಾಲಿಸಿ ತೆಗೆದುಕೊಳ್ಳಬಹುದೇ? ತಿಂಗಳಿಗೆ 75 ಸಾವಿರ ರೂಪಾಯಿವರೆಗೆ ಅವರು ಸಂಬಳ ಪಡೆಯುತ್ತಿದ್ದಾರೆ ಎಂದು ಇಟ್ಟುಕೊಂಡರೆ, ಅವರು 50 ಲಕ್ಷ ರೂ.ಗಳ ಹೆಚ್ಚುವರಿ ಪಾಲಿಸಿ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ. ವಿಮಾ ಕಂಪನಿಗಳು ಸಾಮಾನ್ಯವಾಗಿ ಪಾಲಿಸಿದಾರರ ವಯಸ್ಸಿನ ಆಧಾರದ ಮೇಲೆ ವಾರ್ಷಿಕ ಆದಾಯದ 10 - 22 ಪಟ್ಟು ಜೀವ ವಿಮೆಯನ್ನು ನೀಡುತ್ತವೆ.
ನಿಮ್ಮ ವಾರ್ಷಿಕ ಆದಾಯದ 10-12 ಪಟ್ಟು ವಿಮೆ ಮಾಡಿಸುವುದು ಸುರಕ್ಷಿತವಾದ ಕ್ರಮವಾಗಿದೆ. ಹೊಸ ಪಾಲಿಸಿ ತೆಗೆದುಕೊಳ್ಳುವಾಗ ಹಳೆಯ ಪಾಲಿಸಿ ವಿವರ, ಆದಾಯ ಮತ್ತು ಆರೋಗ್ಯದ ಮಾಹಿತಿಯನ್ನು ಕಡ್ಡಾಯ ನೀಡುವುದು ಅಗತ್ಯವಾಗಿದೆ. ಪ್ರೀಮಿಯಂ ಮರುಪಾವತಿ ನೀತಿಗಳು ಸಾಕಷ್ಟು ದುಬಾರಿಯಾಗಿದೆ. ಆದ್ದರಿಂದ, ಬದಲಿಗೆ ನಿಯಮಿತ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳಿ. ಉತ್ತಮ ಪಾವತಿ ಇತಿಹಾಸ ಹೊಂದಿರುವ ಕಂಪನಿಯಿಂದ ವಿಮಾ ಪಾಲಿಸಿಯನ್ನು ಪಡೆಯುವುದು ಉತ್ತಮ.
10 ವರ್ಷದ ಮಗಳಿಗೆ ತಿಂಗಳಿಗೆ 15 ಸಾವಿರ ಹೂಡಿಕೆ ಮಾಡಿದರೆ, 15 ವರ್ಷದಲ್ಲಿ ಎಷ್ಟು ಹಣ ಕೂಡಿಡಬಹುದು?:ಒಬ್ಬ ಬಾಲಕಿಗೆ 10 ವರ್ಷ ಎಂದು ಇಟ್ಟುಕೊಂಡರೆ, ಆಕೆಯ ಪೋಷಕರು ಬಾಲಕಿ ಹೆಸರಿನಲ್ಲಿ ತಿಂಗಳಿಗೆ 15,000 ರೂ.ವರೆಗೆ ಹೂಡಿಕೆ ಮಾಡಲು ಸಿದ್ದರಿದ್ದಾರೆ ಎಂದುಕೊಂಡರೆ, ನೀವು ಎಲ್ಲಿ ಹೂಡಿಕೆ ಮಾಡುತ್ತೀರೋ, ಹಣದುಬ್ಬರದ ವೆಚ್ಚವನ್ನು ಪೂರೈಸಲು ನೀವು ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವೇ ಎಂಬುದನ್ನು ಖಚಿತ ಪಡಿಸಿಕೊಂಡ ಮೇಲೆ ಹೂಡಿಕೆ ಮಾಡುವುದು ಉತ್ತಮ ಕ್ರಮವಾಗಿದೆ. ಇದಕ್ಕಾಗಿ ವೈವಿಧ್ಯಮಯ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ತಿಂಗಳಿಗೆ 15 ಸಾವಿರ ರೂ.ನಂತೆ 10 ವರ್ಷಗಳ ಕಾಲ ಸರಾಸರಿ ಶೇ.12 ಆದಾಯದೊಂದಿಗೆ ಹೂಡಿಕೆ ಮಾಡಿದರೆ ಸುಮಾರು 31,58,772 ರೂ. ಆದಾಯಗಳಿಸಬಹುದು. ಆದರೆ ಇಂತಹ ಹೂಡಿಕೆ ಮಾಡುವ ಮೊದಲು ಮಗುವಿನ ಭವಿಷ್ಯದ ಅಗತ್ಯಗಳಿಗಾಗಿ ಏನು ಮಾಡಬೇಕು, ಈ ಹೂಡಿಕೆಯಿಂದ ರಕ್ಷಣೆ ಸಿಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.