ನವದೆಹಲಿ: ಇ-ಕಾಮರ್ಸ್ ದೈತ್ಯಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂತ್ರಾ ಮತ್ತು ಮೀಸೋ ಸೇರಿದಂತೆ ಇತರ ಆನ್‌ಲೈನ್ ಸೇಲ್ ಕಂಪನಿಗಳು ಭಾನುವಾರದಿಂದ ದೇಶದಲ್ಲಿ ಹಬ್ಬದ ಮಾರಾಟ ಶುರು ಮಾಡಿವೆ. ಭರ್ಜರಿ ಆಫರ್ಗಳನ್ನು ನೀಡಿದ್ದು, ನಾಮುಂದು- ತಾಮುಂದು ಎಂಬಂತೆ ಕೊಡುಗೆಗಳನ್ನು ಘೋಷಿಸಿದ್ದು, ಭರ್ಜರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿವೆ. ಹಬ್ಬದ ತಿಂಗಳಲ್ಲಿ ಸರಿ ಸುಮಾರು 90,000 ಕೋಟಿ ಮೌಲ್ಯದ ಆನ್‌ಲೈನ್ ಸರಕುಗಳನ್ನು ಮಾರಾಟ ಮಾಡುವ ನಿರೀಕ್ಷೆ ಇಟ್ಟುಕೊಂಡಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಈ ಮಾರಾಟ ಸುಮಾರು ಶೇ 18-20 ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಸುಮಾರು 140 ಮಿಲಿಯನ್ ಶಾಪರ್‌ಗಳು, ಆನ್‌ಲೈನ್ ಮಾರಾಟಗಾರರು, ವಿಶೇಷವಾಗಿ ಸಣ್ಣ ಮಾರಾಟಗಾರರು, ವರ್ಷದಿಂದ ವರ್ಷಕ್ಕೆ ಅಂದರೆ ಹಬ್ಬದ ಮಾರಾಟದಲ್ಲಿ ಕನಿಷ್ಠ 10ರಿಂದ 15 ರಷ್ಟು ಪ್ರತಿಶತದಷ್ಟು ಹೆಚ್ಚಳವನ್ನು ನಿರೀಕ್ಷೆ ಮಾಡುತ್ತಾರಂತೆ. ಈ ಬಾರಿಯ ಅಂದಾಜಿನಂತೆ ಸುಮಾರು ಶೇ. 26 ರಷ್ಟು ಮಾರಾಟ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಮಾರುಕಟ್ಟೆ ಗುಪ್ತಚರ ಸಂಸ್ಥೆ ರೆಡ್‌ಸೀರ್ ತಿಳಿಸಿದೆ.
ಒಂದು ಲಕ್ಷ ತಾತ್ಕಾಲಿಕ ಹುದ್ದೆ ಸೃಷ್ಟಿ:ಅಮೆಜಾನ್ ಇಂಡಿಯಾ ಹಬ್ಬದ ಋತುವಿಗಾಗಿ ಸುಮಾರು 1 00,000 ಕ್ಕೂ ಹೆಚ್ಚು ತಾತ್ಕಾಲಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ, ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಲಕ್ನೋ ಮತ್ತು ಚೆನ್ನೈನಂತಹ ನಗರಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಈ ಅಂದಾಜಿನಲ್ಲಿ ಸೇರಿವೆ. 23 ಲಕ್ಷಕ್ಕೂ ಹೆಚ್ಚು ಫ್ಯಾಷನ್, ಸೌಂದರ್ಯ ಮತ್ತು ಜೀವನಶೈಲಿ ಉತ್ಪನ್ನಗಳೊಂದಿಗೆ 6,000 ಪ್ರಮುಖ ಅಂತಾರಾಷ್ಟ್ರೀಯ, ದೇಶೀಯ ಮತ್ತು D2C ಬ್ರ್ಯಾಂಡ್‌ಗಳೊಂದಿಗೆ Myntra's Big Fashion Festival ಆರಂಭಿಸಿದೆ.
ಯಾವ್ಯಾವ ಕಾರ್ಡ್ಗಳ ಮೇಲೆ ರಿಯಾಯಿತಿ:ಈ ಈವೆಂಟ್‌ನಲ್ಲಿ ಗ್ರಾಹಕರು, ಸಾವಿರಾರು ದೇಶೀಯ ಮತ್ತು ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳಲ್ಲಿ ನಾನಾ ಬಗೆಯ ಕೊಡುಗೆಗಳನ್ನು ಪಡೆದುಕೊಳ್ಳಲಿದ್ದಾರೆ. ಜೊತೆಗೆ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಸಹಯೋಗದೊಂದಿಗೆ Myntra ನ ಸಹ-ಬ್ರಾಂಡ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚುವರಿ 15 ಶೇಕಡಾ ರಿಯಾಯಿತಿ ನೀಡುತ್ತಿದೆ. ಇನ್ನು ಹೆಚ್ಚುವರಿಯಾಗಿ, ICICI, Kotak, Paytm ಮತ್ತು Cred ನಂತಹ ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ಮೂಲಕ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಸ್ನಾಪ್‌ಡೀಲ್ ಭರ್ಜರಿ ಕೊಡುಗೆ:ಮತ್ತೊಂದು ಕಡೆ, ಸ್ನಾಪ್‌ಡೀಲ್ ಅಕ್ಟೋಬರ್ 8-15 ರವರೆಗೆ 'ತೂಫಾನಿ ಸೇಲ್-ಫೆಸ್ಟಿವ್ ಧಮಾಕಾ' ಎಂಬ ಘೋಷಣೆಯೊಂದಿಗೆ ಮಾರಾಟ ಪ್ರಾರಂಭಿಸಿದೆ. ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಬಹು ನಿರೀಕ್ಷಿತ ಹಬ್ಬದ ಋತುವಿಗಾಗಿ ತನ್ನ ವ್ಯಾಪಕ ಶ್ರೇಣಿಯ ಟೆಲಿವಿಷನ್‌ಗಳಲ್ಲಿ ಮೆಗಾ ಡೀಲ್ಗಳೊಂದಿಗೆ ಹೊರ ತಂದಿದೆ.