ಕರ್ನಾಟಕ

karnataka

ETV Bharat / business

ಮ್ಯೂಚುವಲ್​ ಫಂಡ್​ ಹೂಡಿಕೆದಾರರು ಗಮನಿಸಿ: SEBIಯಿಂದ ಮಹತ್ವದ ಸುತ್ತೋಲೆ - ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸೆಬಿ(SEBI) ಮಹತ್ವದ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದೆ.

Mutual Fund  mutual fund nominee naming last Date  mutual fund nominee  ಮ್ಯೂಚುವಲ್​ ಫಂಡ್​ ಹೂಡಿಕೆದಾರರು ನಾಮಿನಿ ಘೋಷಿಸಿ  ಇಲ್ಲವಾದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು  ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸೆಬಿ ಸುತ್ತೋಲೆ  ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಶಾಕಿಂಗ್​ ಸುದ್ದಿ  ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ  ಮ್ಯೂಚುಯಲ್ ಫಂಡ್ ಗ್ರಾಹಕರು
ಮ್ಯೂಚುವಲ್​ ಫಂಡ್​ ಹೂಡಿಕೆದಾರರು ನಾಮಿನಿ ಘೋಷಿಸಿ

By

Published : Mar 27, 2023, 1:11 PM IST

ನವದೆಹಲಿ:ಮ್ಯೂಚುವಲ್ ಫಂಡ್ ಹೂಡಿಕೆದಾರರಿಗಿದು ಮಹತ್ವದ ಸುದ್ದಿ. ಮಾರ್ಚ್ 31 ರೊಳಗೆ ಮ್ಯೂಚುವಲ್ ಫಂಡ್‌ಗೆ ಸಂಬಂಧಿಸಿದ ಪ್ರಮುಖ ಕೆಲಸವನ್ನು ನೀವು ಮಾಡಿ ಮುಗಿಸಬೇಕಿದೆ. ಇಲ್ಲವಾದಲ್ಲಿ ನಿಮ್ಮ ಖಾತೆಯನ್ನು ಮುಚ್ಚಬಹುದು ಅಥವಾ ಮ್ಯೂಚುವಲ್​ ಫಂಡ್​ನಲ್ಲಿರುವ ಹಣವನ್ನೂ ಕಳೆದುಕೊಳ್ಳುವಿರಿ.

ಮ್ಯೂಚುವಲ್ ಫಂಡ್‌ಗಳ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಘೋಷಣೆ ಫಾರ್ಮ್ ಸಲ್ಲಿಸುವ ಮೂಲಕ ನಾಮನಿರ್ದೇಶನದಿಂದ ಹೊರಗುಳಿಯಲು ಮಾರ್ಚ್ 31 ರವರೆಗೆ ಸಮಯ ಹೊಂದಿದ್ದಾರೆ. ಹಾಗೆ ಮಾಡಲು ವಿಫಲವಾದರೆ ಅವರ ಖಾತೆಗಳನ್ನು ಮುಚ್ಚಲಾಗುತ್ತದೆ. ಮತ್ತು ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನಾಮನಿರ್ದೇಶನ ಮಾಡಲು ಬಯಸದವರು ಅವರು ಯಾವುದೇ ನಾಮಿನಿ ಹೊಂದಿಲ್ಲ ಎಂದು ಫಂಡ್ ಹೌಸ್‌ಗಳಿಗೆ ಮಾಹಿತಿ ನೀಡಬೇಕು. ಇದರಿಂದಾಗಿ ಅವರು ನಾಮನಿರ್ದೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸೆಬಿ ಸುತ್ತೋಲೆಯಲ್ಲಿ ಹೇಳಿದೆ.

SEBI ಸುತ್ತೋಲೆ ಹೀಗಿದೆ..: ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಜೂನ್ 15, 2022 ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಮ್ಯೂಚುವಲ್ ಫಂಡ್ ಗ್ರಾಹಕರು ಆಗಸ್ಟ್ 1, 2022 ರಂದು ಅಥವಾ ನಂತರ ನಾಮಿನಿ ವಿವರ ಭರ್ತಿ ಮಾಡಲು ಅಥವಾ ಅದರಿಂದ ಹೊರಗುಳಿಯುವಿಕೆಯನ್ನು ಘೋಷಿಸುವುದನ್ನು ಕಡ್ಡಾಯ ಮಾಡಿದೆ. ಇದಾದ ನಂತರ ಕೊನೆಯ ದಿನಾಂಕವನ್ನು ಅಕ್ಟೋಬರ್ 1, 2022 ಕ್ಕೆ ಬದಲಾಯಿಸಲಾಗಿತ್ತು. ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುವಲ್ ಫಂಡ್ ಖಾತೆಗಳಿಗೆ (ಜಂಟಿ ಖಾತೆಗಳನ್ನು ಒಳಗೊಂಡಂತೆ) ಕಟ್-ಆಫ್ ದಿನಾಂಕವನ್ನು ಮಾರ್ಚ್ 31, 2023 ರವರೆಗೆ ವಿಸ್ತರಿಸಲಾಗಿದೆ. ನಂತರ ಖಾತೆಗಳಿಂದ ಹಿಂಪಡೆಯುವಿಕೆ ನಿರ್ಬಂಧಿಸಲಾಗುತ್ತದೆ ಎಂದು ಸೆಬಿ ಎಚ್ಚರಿಸಿದೆ.

ತಜ್ಞರ ಅಭಿಪ್ರಾಯವೇನು?: ಈ ಕ್ರಮದ ಹಿಂದಿನ ಸೆಬಿ ಉದ್ದೇಶ ವಿವರಿಸಿದ ಆನಂದ್ ರಾಠಿ ವೆಲ್ತ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ನಿರಂಜನ್ ಬಾಬು ರಾಮಾಯಣಂ, ಈ ಹಿಂದೆ ಅನೇಕ ಹೂಡಿಕೆ ಖಾತೆಗಳನ್ನು ನಾಮನಿರ್ದೇಶನ ಮಾಡದೆ ತೆರೆಯಲಾಗಿದೆ. ಖಾತೆದಾರರಿಗೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದ್ರೆ ಅವರ ಆಸ್ತಿಯನ್ನು ನಾಮಿನಿಗೆ ವರ್ಗಾಯಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:ರಿಲಯನ್ಸ್​ ಕಂಪನಿಯಿಂದ ಜಾಗತಿಕ ಹೆಲ್ತ್ ವಿಮೆ.. ಆರೋಗ್ಯ ಕ್ಷೇತ್ರದಲ್ಲಿ ಇದು ಗೇಮ್​ ಚೇಂಜರ್​

For All Latest Updates

ABOUT THE AUTHOR

...view details