ಕರ್ನಾಟಕ

karnataka

ETV Bharat / business

ಡಿಜಿಟಲ್ ಪೇಮೆಂಟ್ ಸಿಸ್ಟಂ ಆರಂಭಿಸಿದ ಟ್ವಿಟರ್​: ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮಸ್ಕ್​ ಕಸರತ್ತು - ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮಸ್ಕ್​ ಕಸರತ್ತು

ಬುಧವಾರ ತಡರಾತ್ರಿ ಜಾಹೀರಾತುದಾರರೊಂದಿಗಿನ ಆನ್‌ಲೈನ್ ಸಭೆಯಲ್ಲಿ, ಮಸ್ಕ್ ಅವರು ಬ್ಲೂ​ ಸಬ್​ಸ್ಕ್ರಿಪ್ಷನ್ ಸೇವೆಯ ಮೂಲಕ ಪೇಡ್ ವೆರಿಫಿಕೇಶನ್ ಮತ್ತು ಕ್ರಿಯೇಟರ್ ಪರಿಸರ ವ್ಯವಸ್ಥೆಗೆ ಹೇಗೆ ಟ್ವಿಟರ್‌ನಲ್ಲಿ ಪಾವತಿಗಳನ್ನು ಮಾಡಬಹುದು ಎಂಬುದನ್ನು ತಿಳಿಸಿದರು.

ಡಿಜಿಟಲ್ ಪೇಮೆಂಟ್ ಸಿಸ್ಟಂ ಆರಂಭಿಸಿದ ಟ್ವಿಟರ್​: ಜಾಹೀರಾತುದಾರರನ್ನು ಉಳಿಸಿಕೊಳ್ಳಲು ಮಸ್ಕ್​ ಕಸರತ್ತು
Musk will let Twitter users make digital payments, earn more

By

Published : Nov 10, 2022, 4:16 PM IST

ಸ್ಯಾನ್ ಫ್ರಾನ್ಸಿಸ್ಕೋ: ಹೆಚ್ಚೆಚ್ಚು ಜಾಹೀರಾತುದಾರರು ಟ್ವಿಟರ್​ನಲ್ಲಿ ಜಾಹೀರಾತು ನೀಡುವುದನ್ನು ಕಡಿಮೆಗೊಳಿಸುತ್ತಿದ್ದಂತೆಯೇ ಎಲೊನ್ ಮಸ್ಕ್ ತಮ್ಮ ಡಿಜಿಟಲ್ ಪಾವತಿ (ಪೇಮೆಂಟ್ ಸಿಸ್ಟಂ) ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.

ಟ್ವಿಟರ್ ಬಳಕೆದಾರರು ಚೀನಾದ WeChat ನಂಥ ಇತರ ಆ್ಯಪ್ ಬಳಕೆದಾರರಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಹಣ ಕಳುಹಿಸಲು ಸಾಧ್ಯವಾಗಲಿದೆ. ಜಾಹೀರಾತುದಾರರೊಂದಿಗೆ ಲೈವ್-ಸ್ಟ್ರೀಮ್ ಸಭೆ ನಡೆಸಿದ ಮಸ್ಕ್, ಟ್ವಿಟರ್ ಡಿಜಿಟಲ್ ಪಾವತಿ ಮಾರುಕಟ್ಟೆಯನ್ನು ಪ್ರವೇಶಿಸುವ ಯೋಜನೆಯನ್ನು ವಿವರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ತಡರಾತ್ರಿ ಜಾಹೀರಾತುದಾರರೊಂದಿಗಿನ ಆನ್‌ಲೈನ್ ಸಭೆಯಲ್ಲಿ, ಮಸ್ಕ್ ಅವರು ಬ್ಲೂ​ ಸಬ್​ಸ್ಕ್ರಿಪ್ಷನ್ ಸೇವೆಯ ಮೂಲಕ ಪೇಡ್ ವೆರಿಫಿಕೇಶನ್ ಮತ್ತು ಕ್ರಿಯೇಟರ್ ಪರಿಸರ ವ್ಯವಸ್ಥೆಗೆ ಹೇಗೆ ಟ್ವಿಟರ್‌ನಲ್ಲಿ ಪಾವತಿಗಳನ್ನು ಮಾಡಬಹುದು ಎಂಬುದನ್ನು ತಿಳಿಸಿದರು. ಟ್ವಿಟರ್ ಬ್ಲೂಟಿಕ್​ ಚಂದಾದಾರರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಸೈನ್ ಅಪ್ ಮಾಡುವ ಮತ್ತು ಅಪ್ಲಿಕೇಶನ್ ಸ್ಟೋರ್‌ಗಳ ಅಪ್ಲಿಕೇಶನ್‌ನಲ್ಲಿನ ಖರೀದಿ ವ್ಯವಸ್ಥೆಯ ಮೂಲಕ ತಮ್ಮ ಪಾವತಿಗಳನ್ನು ಪ್ರಕ್ರಿಯೆಗೊಳಿಸುವ ವ್ಯವಸ್ಥೆಯ ಬಗ್ಗೆ ಅವರು ತಿಳಿಸಿದರು.

ಈಗ ಟ್ವಿಟರ್ ಬಳಕೆದಾರರ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೆ ಅವರು ಅದನ್ನು ಬೇರೆ ಟ್ವಿಟರ್ ಬಳಕೆದಾರರಿಗೆ ಕಳುಹಿಸಬಹುದು. ಅಲ್ಲದೆ ಟ್ವಿಟರ್​ನಿಂದ ಹಣವನ್ನು ತಮ್ಮ ಅಧಿಕೃತ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು. ಈ ವ್ಯವಹಾರಗಳಿಂದ ಬಳಕೆದಾರರು ಹೆಚ್ಚಿನ ಬಡ್ಡಿ ಹೇಗೆ ಪಡೆಯಬಹುದು. ನಂತರ ಇದು ತುಂಬಾ ಆಕರ್ಷಕವಾದ ಹಣದ ಮಾರುಕಟ್ಟೆಯಾಗಲಿದೆ. ಇಲ್ಲಿ ನಿಮ್ಮ ಬ್ಯಾಲೆನ್ಸ್​ ಮೇಲೆ ನೀವು ತುಂಬಾ ಉತ್ತಮವಾದ ಪ್ರತಿಫಲವನ್ನು ಪಡೆಯುವಿರಿ ಎಂದು ಮಸ್ಕ್​ ಹೇಳಿದ್ದಾರೆ.

ಇದನ್ನೂ ಓದಿ: ಟ್ವಿಟರ್​​ ಆದಾಯದಲ್ಲಿ ಗಣನೀಯ ಕುಸಿತ.. ಸ್ವತಃ ಟ್ವೀಟ್​ ಮಾಡಿ ಅಳಲು ತೋಡಿಕೊಂಡ ಮಸ್ಕ್​

ABOUT THE AUTHOR

...view details