ಡೆಟ್ರಾಯಿಟ್(ಅಮೆರಿಕ):ಎಲೋನ್ ಮಸ್ಕ್ 4 ಬಿಲಿಯನ್ ಡಾಲರ್ ಮೌಲ್ಯದ ಟೆಸ್ಲಾ ಸ್ಟಾಕ್‌ನ 4.4 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇತ್ತೀಚೆಗಷ್ಟೇ ಟ್ವಿಟರ್ ಖರೀದಿ ಒಪ್ಪಂದ ಮಾಡಿಕೊಂಡಿರುವ ಮಸ್ಕ್, ಟ್ವಿಟರ್ಗೆ ಹಣ ಸಂದಾಯ ಮಾಡುವ ದೃಷ್ಟಿಯಿಂದ ಈ ಷೇರು ಮಾರಾಟ ಮಾಡಿರುವ ಸಾಧ್ಯತೆ ಇದೆ.
ಗುರುವಾರ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಮಸ್ಕ್ ಟೆಸ್ಲಾ ಷೇರುಗಳ ಮಾರಾಟದ ವರದಿ ಮಾಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ 872.02 ರಿಂದ 999.13 ಡಾಲರ್ ವರೆಗಿನ ಬೆಲೆಗಳಲ್ಲಿ ಷೇರು ಮಾರಾಟ ಮಾಡಲಾಗಿದೆ. ಆದರೆ, ಇನ್ಮುಂದೆ ಕಂಪನಿ ಷೇರುಗಳ ಮಾರಾಟ ಮಾಡುವುದಿಲ್ಲ ಎಂದು ಟ್ವೀಟ್ನಲ್ಲಿ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಷೇರುಗಳ ಮಾರಾಟದಿಂದ ಒಂದೇ ದಿನ ಟೆಸ್ಲಾ ಷೇರುಗಳ ಬೆಲೆ ಶೇ 12 ರಷ್ಟು ಕುಸಿತ ಕಂಡಿವೆ.