ಕರ್ನಾಟಕ

karnataka

ETV Bharat / business

ಸತತ 2ನೇ ದಿನವೂ ಗೂಳಿ ಓಟ.. 740 ಅಂಕ ಏರಿಕೆ ಕಂಡ ಸೆನ್ಸೆಕ್ಸ್​, ನಿಫ್ಟಿಗೆ 170 ಅಂಶಗಳ ಲಾಭ - ಸತತ ಎರಡನೇ ದಿನವೂ ಲಾಭದತ್ತ ಮುಂಬೈ ಷೇರುಪೇಟೆ

ಮುಂಬೈ ಷೇರುಪೇಟೆ ಸೂಚ್ಯಂಕ ಸತತ ಎರಡನೇ ದಿನವೂ ಏರಿಕೆಯತ್ತ ಸಾಗಿದೆ. ಇಂದಿನ ತನ್ನ ವಹಿವಾಟಿನ ಮುಕ್ತಾಯಕ್ಕೆ 740 ಅಂಶಗಳ ಹೆಚ್ಚಳ ದಾಖಲಿಸಿದೆ. ಇದು ಷೇರುದಾರರ ಹೂಡಿಕೆಯನ್ನು ಲಾಭದತ್ತ ಕೊಂಡೊಯ್ಯುತ್ತಿದೆ.

mumbai-share
ಸೆನ್ಸೆಕ್ಸ್

By

Published : Mar 30, 2022, 5:25 PM IST

ಮುಂಬೈ:ರಷ್ಯಾ- ಉಕ್ರೇನ್​ ಯುದ್ಧ ಜಾಗತಿಕ ಮಾರುಕಟ್ಟೆ ಸೇರಿದಂತೆ ಮುಂಬೈ ಷೇರುಪೇಟೆ ಮೇಲೆಯೂ ಭಾರೀ ಪ್ರಭಾವ ಬೀರಿತ್ತು. ಇದೀಗ ನಡೆಯುತ್ತಿರುವ ಸಂಧಾನ ಮಾತುಕತೆಗಳು ಫಲ ಕೊಡುತ್ತಿರುವ ಕಾರಣ ಅದು ಷೇರು ಮಾರುಕಟ್ಟೆಗಳ ಪ್ರಗತಿಗೆ ಕಾರಣವಾಗುತ್ತಿದೆ. ಬಿಎಸ್​ಇ ಸೆನ್ಸೆಕ್ಸ್​ ಇಂದಿನ ತನ್ನ ವಹಿವಾಟಿನ ಅಂತ್ಯಕ್ಕೆ 740 ಅಂಕಗಳ ಏರಿಕೆ ಕಂಡಿದೆ. ನಿನ್ನೆ ಅದು 350 ಅಂಶಗಳ ಹೆಚ್ಚಳ ಕಂಡಿತ್ತು.

ದಿನದ ಆರಂಭದಿಂದಲೂ ಏರಿಕೆ ಗತಿಯಲ್ಲೇ ಸಾಗಿದ ಬಿಎಸ್‌ಇ ಸೂಚ್ಯಂಕವು ದಿನದ ಮುಕ್ತಾಯಕ್ಕೆ 740.34 ಪಾಯಿಂಟ್‌(ಶೇ.1.28) ಏರಿಕೆ ಕಂಡು 58,683.99 ಕ್ಕೆ ಸ್ಥಿರವಾಯಿತು. ದಿನದ ಆರಂಭಿಕ ಅವಧಿಯಲ್ಲಿ ಸೆನ್ಸೆಕ್ಸ್​ 784.13 ಪಾಯಿಂಟ್‌ಗಳು (ಶೇ.1.35) ರಷ್ಟು ಜಿಗಿತ ಕಂಡು 58,727.78 ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 172.95 ಪಾಯಿಂಟ್‌ ಗಳಿಸುವ ಮೂಲಕ ಶೇ.1 ರಷ್ಟು ಏರಿಕೆ ಕಂಡು 17,498.25 ಕ್ಕೆ ತಲುಪಿದೆ.

ಯಾರಿಗೆಲ್ಲಾ ಲಾಭ, ನಷ್ಟ:ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಇಕ್ವಿಟಿ ಸೂಚ್ಯಂಕಗಳು ಸತತ ಮೂರನೇ ದಿನವೂ ಲಾಭದತ್ತ ಸಾಗಿವೆ. ಇದಲ್ಲದೇ, ಬಜಾಜ್ ಫಿನ್‌ಸರ್ವ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಪವರ್ ಗ್ರಿಡ್, ನೆಸ್ಲೆ, ಮಾರುತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಲಾಭ ಪಡೆದಿವೆ. ಮತ್ತೊಂದೆಡೆ ಐಟಿಸಿ, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್ ಮತ್ತು ಟೈಟಾನ್ ಷೇರುಗಳಲ್ಲಿ ಕುಸಿತ ಕಂಡಿವೆ.

ರಷ್ಯಾದ ತೈಲ ಸಾಗಣೆ ಮೇಲೆ ನಿರ್ಬಂಧ ಮುಂದುವರಿದ ಕಾರಣ ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡಾ 2.25 ಏರಿಕೆ ಕಂಡು 112.7 ಕ್ಕೆ ಜಿಗಿದಿದೆ.

4 ಪೈಸೆ ಇಳಿದ ರೂಪಾಯಿ ದರ:ಷೇರು ಮಾರುಕಟ್ಟೆಯಲ್ಲಿ ಆಶಾದಾಯಕ ಎಂಬಂತೆ ಏರಿಕೆ ಕಾಣುತ್ತಿದ್ದರೂ ಇನ್ನೊಂದೆಡೆ ಡಾಲರ್​ ಎದುರು ರೂಪಾಯಿ ದರ ಕುಸಿತ ಕಾಣುತ್ತಲೇ ಇದೆ. ಇಂಟರ್​ ಬ್ಯಾಂಕ್​ ವಿದೇಶಿ ವಿನಿಮಯದಲ್ಲಿ ಡಾಲರ್​ ಮುಂದೆ 75.65 ಇದ್ದ ರೂಪಾಯಿ ದರ 4 ಅಂಶ ಇಳಿಕೆ ಕಂಡು ಅದು 75.69 ಕ್ಕೆ ತಲುಪಿದೆ.

ಓದಿ:9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್​​​- ಡೀಸೆಲ್​ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ದರ?

ABOUT THE AUTHOR

...view details