ಕರ್ನಾಟಕ

karnataka

ETV Bharat / business

ಲಾಭದ ಷೇರು ಮಾರಾಟ; ಸೆನ್ಸೆಕ್ಸ್​​ 259 ಅಂಕ ಕುಸಿತ.. ಹೆಚ್​ಡಿಎಫ್​ಸಿ, ಆರ್​ಐಎಲ್​ಗೆ ನಷ್ಟ - ದಿನದ ಸೆನ್ಸೆಕ್ಸ್​ ಮಾಹಿತಿ

ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ ದಾಖಲಿಸಿದರೂ ಭಾರತೀಯ ಮಾರುಕಟ್ಟೆ ಸತತ ಏರಿಕೆ ದಾಖಲಿಸಿತ್ತು. ಆದರೆ, ಹೌಸಿಂಗ್​ ಡೆವಲಪ್​ಮೆಂಟ್​ ಫೈನಾನ್ಸ್​ ಕಾರ್ಪೋರೇಷನ್​ ಅನ್ನು ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ವಿಲೀನ ಮಾಡುವ ಘೋಷಣೆಯ ಬಳಿಕ 200 ಅಂಕಗಳಿಗಿಂತಲೂ ಅಧಿಕ ಇಳಿಕೆ ಕಂಡಿದೆ.

Sensex
ಸೆನ್ಸೆಕ್ಸ್

By

Published : Apr 5, 2022, 3:16 PM IST

ಮುಂಬೈ:ಜಾಗತಿಕ ಬಿಕ್ಕಟ್ಟಿನ ಮಧ್ಯೆಯೂ ಸತತ ಏರಿಕೆ ಕಂಡಿದ್ದ ಸೆನ್ಸೆಕ್ಸ್​ ಇಂದು ಅಲ್ಪ ಅಂಕಗಳ ಕುಸಿತ ಕಂಡಿದೆ. ಹೆಚ್​ಡಿಎಫ್​ಸಿ ಲಿಮಿಟೆಡ್​ ಅನ್ನು ಹೆಚ್​ಡಿಎಫ್​ಸಿ ಬ್ಯಾಂಕ್​ ಜೊತೆಗೆ ವಿಲೀನ ಮಾಡುವ ಘೋಷಣೆಯ ಬಳಿಕ ಷೇರುಗಳು ಅಲ್ಪ ಇಳಿಕೆ ಕಂಡಿದೆ. ಇದರಿಂದ ಮುಂಬೈ ಬಿಎಸ್​ಸಿ ಸೆನ್ಸೆಕ್ಸ್​ 269 ಅಂಕ ಕುಸಿದು 60341 ಅಂಶದೊಂದಿಗೆ ವಹಿವಾಟು ನಡೆಸುತ್ತಿದೆ.

ಇದಕ್ಕೂ ಮೊದಲು ಮುಂಬೈ ಸೆನ್ಸೆಕ್ಸ್​ ದಿನದ ಆರಂಭಿಕ ವಹಿವಾಟಿನಲ್ಲಿ 60,786 ಪಾಯಿಂಟ್‌ಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಧನಾತ್ಮಕ ಸೂಚನೆ ನೀಡಿತ್ತು. ಬಳಿಕ ಷೇರುದಾರರು ತಮ್ಮ ಷೇರುಗಳಲ್ಲಿನ ಲಾಭ ಮಾರಾಟದಿಂದಾಗಿ ಸೂಚ್ಯಂಕ ಇಳಿಕೆ ಕಂಡು, 60,227.36 ಪಾಯಿಂಟ್‌ಗಳಿಗೆ ಕುಸಿದಿತ್ತು. ಬಳಿಕ ಅಲ್ಪ ಚೇತರಿಕೆ ಕಂಡು ಇದೀಗ 60,341 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಇದೇ ವೇಳೆ, ನಿಫ್ಟಿ ಕೂಡ 49.15 ಅಂಕ ಇಳಿಕೆ ದಾಖಲಿಸುವ ಮೂಲಕ 18004 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

ಇನ್ನು ನಿನ್ನೆಯಷ್ಟೇ ಹೆಚ್‌ಡಿಎಫ್‌ಸಿ ಲಿಮಿಟೆಡ್​ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್​ನಲ್ಲಿ ವಿಲೀನ ಮಾಡುವ ಘೋಷಣೆಯ ಬಳಿಕ ಸೆನ್ಸೆಕ್ಸ್ 1335.05 ಪಾಯಿಂಟ್‌ಗಳು ಅಥವಾ ಶೇಕಡಾ 2.25 ರಷ್ಟು ಏರಿಕೆ ಕಂಡಿತ್ತು. ಹೌಸಿಂಗ್​ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಹೆಚ್‌ಡಿಎಫ್‌ಸಿ) ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮಾರುಕಟ್ಟೆಯ ಏರಿಳಿತಕ್ಕೆ ಕಾರಣವಾಗಿದೆ. ಷೇರುದಾರರು ಪ್ರಾಫಿಟ್ ಬುಕಿಂಗ್​ನಲ್ಲಿ ಮಾರಾಟ ಮಾಡಿದ್ದರಿಂದ ಹೆಚ್‌ಡಿಎಫ್‌ಸಿ ಬ್ಯಾಂಕ್​​ನ ಷೇರುಗಳು ಶೇ.2.60ರಷ್ಟು ಕುಸಿದಿವೆ. ಇನ್ನು ಹೆಚ್‌ಡಿಎಫ್‌ಸಿ ಶೇ.1.63ರಷ್ಟು ಕುಸಿದಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಕೋಟಕ್ ಬ್ಯಾಂಕ್, ವಿಪ್ರೋ ಮತ್ತು ಇನ್ಫೋಸಿಸ್ ನಷ್ಟಕ್ಕೊಳಗಾಗಿವೆ. ITC, ಟೈಟಾನ್, ಟಿಸಿಎಸ್, ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ನೆಸ್ಲೆ ಇಂಡಿಯಾ ಸ್ವಲ್ಪ ಮಟ್ಟಿನ ಏರಿಕೆ ದಾಖಲಿಸಿವೆ.

ಓದಿ:ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಹೆಚ್ಚಳ: 15 ದಿನಗಳಲ್ಲಿ 13ನೇ ಏರಿಕೆ

ABOUT THE AUTHOR

...view details