ನವದೆಹಲಿ : ಫೋರ್ಬ್ಸ್ ಬಿಲಿಯನೇರ್ಗಳ ಪಟ್ಟಿಯಲ್ಲಿ ಹೆಸರು ದಾಖಲಿಸಲು ವಿಶ್ವದ ಕೋಟ್ಯಧಿಪತಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ನಂಬರ್ ಒನ್ ಸ್ಥಾನವನ್ನು ಪಡೆಯಲು ಬರ್ನಾರ್ಡ್ ಅರ್ನಾಲ್ಟ್‌ಗೆ ಮತ್ತೆ ಕಠಿಣ ಪೈಪೋಟಿ ನೀಡುತ್ತಿದ್ದರೆ, ಮತ್ತೊಂದೆಡೆ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಎಲೋನ್ ಮಸ್ಕ್‌ನನ್ನು ಹಿಂದೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲದರ ನಡುವೆ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಫೋರ್ಬ್ಸ್ ಬಿಲಿಯನೇರ್ ಟಾಪ್-10 ಪಟ್ಟಿಯಿಂದ ಹೊರಗುಳಿದಿದ್ದಾರೆ.
ಹಿಂಡನ್ ಬರ್ಗ್ ವರದಿ ಬಂದ ನಂತರ ಗೌತಮ್ ಅದಾನಿ ಭಾರಿ ನಷ್ಟ ಅನುಭವಿಸಿದ್ದಾರೆ. ಅವರ ಸಂಪತ್ತಿನ ನಿವ್ವಳ ಮೌಲ್ಯ ಅರ್ಧಕ್ಕೆ ಇಳಿದಿದೆ. ಈ ಕಾರಣದಿಂದಾಗಿ ಅವರು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಿಂದ 37 ನೇ ಸ್ಥಾನಕ್ಕೆ ಕುಸಿದರು. ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ ಕುಸಿದಿದ್ದರ ನೇರ ಲಾಭವನ್ನು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಪಡೆದರು. ಅವರು ಫೋರ್ಬ್ಸ್ ಬಿಲಿಯನೇರ್ ಟಾಪ್-10 ಪಟ್ಟಿಗೆ ಸೇರಿಕೊಂಡರು ಮತ್ತು ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
ಆದಾಗ್ಯೂ, ಫೆಬ್ರವರಿಯಿಂದ ಅಂಬಾನಿ ಟಾಪ್-10 ಪಟ್ಟಿಯಿಂದ ಹೊರಗುಳಿದಿದ್ದಾರೆ. ಫೋರ್ಬ್ಸ್ ಬಿಲಿಯನೇರ್ ಪಟ್ಟಿಯ ಇತ್ತೀಚಿನ ಶ್ರೇಯಾಂಕದಲ್ಲಿ, ಮುಕೇಶ್ ಅಂಬಾನಿ 87.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ 13 ನೇ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ಗೌತಮ್ ಅದಾನಿ ನಿವ್ವಳ ಮೌಲ್ಯವು ಭಾರಿ ನಷ್ಟದ ನಂತರ 45.5 ಶತಕೋಟಿಗೆ ಇಳಿಕೆಯಾಗಿದೆ. ಅವರು ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದಾರೆ.