ಮುಂಬೈ: ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕ್ರಿಕೆಟ್ ಲೆಜೆಂಡ್ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದಾಗಿ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿದ ಎಸ್ಬಿಐ ಅಧ್ಯಕ್ಷ ದಿನೇಶ್ ಖರಾ, "ಎಂಎಸ್ ಧೋನಿ ಅವರನ್ನು ಎಸ್ಬಿಐನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿರುವುದನ್ನು ತಿಳಿಸಲು ನಮಗೆ ಸಂತೋಷವಾಗುತ್ತಿದೆ. ಎಸ್ಬಿಐನ ಸಂತೃಪ್ತ ಗ್ರಾಹಕರಾಗಿ ಬ್ಯಾಂಕ್ನೊಂದಿಗೆ ಧೋನಿ ಒಡನಾಟ ಹೊಂದಿದ್ದು, ಈಗ ಅವರನ್ನು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದ್ಧೇವೆ. ಈ ಪಾಲುದಾರಿಕೆಯೊಂದಿಗೆ ನಂಬಿಕೆ, ಸಮಗ್ರತೆ ಮತ್ತು ಅಚಲ ಸಮರ್ಪಣೆಯೊಂದಿಗೆ ರಾಷ್ಟ್ರ ಮತ್ತು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ." ಎಂದು ಹೇಳಿದರು.
ಎಸ್ಬಿಐನ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಸಂಯಮ ಕಾಪಾಡಿಕೊಳ್ಳುವ ಅವರ ಗಮನಾರ್ಹ ಸಾಮರ್ಥ್ಯ, ಸ್ಪಷ್ಟ ಚಿಂತನೆ ಮತ್ತು ಒತ್ತಡದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವ ಅವರ ಸಾಮರ್ಥ್ಯವು ದೇಶಾದ್ಯಂತದ ತನ್ನ ಗ್ರಾಹಕರು ಮತ್ತು ಮಧ್ಯಸ್ಥಗಾರರೊಂದಿಗೆ ಸಂಪರ್ಕ ಸಾಧಿಸಲು ಎಸ್ಬಿಐಗೆ ಸಹಾಯಕವಾಗಲಿದೆ ಎಂದು ಬ್ಯಾಂಕ್ ಹೇಳಿದೆ.