ನವದೆಹಲಿ:ಹಿಂಡನ್ಬರ್ಗ್ ವರದಿ ಬಳಿಕ ನಿರಂತರವಾಗಿ ಕುಸಿಯುತ್ತಾ ಸಾಗಿದ್ದ ಅದಾನಿ ಕಂಪನಿ ಷೇರುಗಳ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ಮುಂಬೈ ಷೇರುಪೇಟೆಯ ಬೆಳಗಿನ ವ್ಯವಹಾರದಲ್ಲಿ ಇಂದು ಶೇ 13 ರಷ್ಟು ಚೇತರಿಕೆ ಕಂಡು ಬಂದಿದೆ ಎಂದು ಷೇರುಪೇಟೆ ಮೂಲಗಳು ತಿಳಿಸಿವೆ. ಬಹುತೇಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಲಾಭ ಗಳಿಸಿದ್ದು, ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಶೇ.13ರಷ್ಟು ಏರಿಕೆ ದಾಖಲಿಸಿದೆ.
ಎಂಟು ಅದಾನಿ ಗ್ರೂಪ್ ಸಂಸ್ಥೆಗಳು ಸಕಾರಾತ್ಮಕವಾಗಿ ವಹಿವಾಟು ನಡೆಸುತ್ತಿದ್ದರೆ, ಎರಡು ಷೇರುಗಳು ಇನ್ನೂ ಚೇತರಿಕೆ ಕಂಡಿಲ್ಲ. ಬಿಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ ಸ್ಕ್ರಿಪ್ 13.07 ಪ್ರತಿಶತ ಏರಿಕೆ ಕಾಣುವ ಮೂಲಕ 2,038 ರೂಗಳೊಂದಿಗೆ ವಹಿವಾಟು ನಡೆಸಿತು. ಈ ಮೂಲಕ ಅದರ ಮಾರುಕಟ್ಟೆ ಬಂಡವಾಳವು 2.32 ಲಕ್ಷ ಕೋಟಿಗೆ ಏರಿಕೆ ಕಂಡಿತು ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ ಷೇರುಗಳ ಬೆಲೆಯಲ್ಲಿ ಶೇ.7.24ರಷ್ಟು ಹೆಚ್ಚಳ ಕಂಡು 593.35ಕ್ಕೆ ತಲುಪಿದ್ದು, ಮಾರುಕಟ್ಟೆ ಮೌಲ್ಯ ರೂ.1.28 ಲಕ್ಷ ಕೋಟಿಗೆ ಏರಿಕೆ ದಾಖಲಿಸಿದೆ.
ಇದನ್ನು ಓದಿ:ಅಡೆತಡೆಗಳ ನಡುವೆ.. ಅದಾನಿ ಬಂದರುಗಳು - ಎಸ್ಇಜೆಡ್ ಕಂಪನಿ ಆದಾಯ ಶೇ.18ರಷ್ಟು ಏರಿಕೆ..
ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 5 ರಷ್ಟು ಏರಿಕೆಯಾಗಿ 1,314.25 ರೂ.ಗೆ ಹಾಗೂ ಅದಾನಿ ಪವರ್ ಶೇಕಡಾ 4.99 ರಷ್ಟು ಏರಿಕೆಯಾಗಿ 182 ರೂಪಾಯಿಗಳೊಂದಿಗೆ ವಹಿವಾಟು ನಡೆಸುತ್ತಿದೆ. ಅದಾನಿ ವಿಲ್ಮರ್ ಶೇಕಡಾ 4.99 ರಷ್ಟು ಏರಿಕೆಯಾಗಿ 419.35 ಕ್ಕೆ ತಲುಪಿದೆ. ಇನ್ನು ಎನ್ಡಿಟಿವಿ ಶೇ.3.94ರಷ್ಟು ಏರಿಕೆಯಾಗಿ ರೂ.225.50 ರೂ ಗಳೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಅಂಬುಜಾ ಸಿಮೆಂಟ್ಸ್ ಶೇ.1.15ರಷ್ಟು ಏರಿಕೆಯಾಗಿ ರೂ.388.10ಕ್ಕೆ ಮತ್ತು ಎಸಿಸಿ ಶೇ.0.43ರಷ್ಟು ಏರಿಕೆ ಕಂಡು ರೂ.2,004ಕ್ಕೆ ತಲುಪಿದೆ.