ಸ್ಯಾನ್ ಫ್ರಾನ್ಸಿಸ್ಕೋ:ಕೋವಿಡ್ ವಕ್ಕರಿಸಿದ ಬಳಿಕ ಔದ್ಯೋಗಿಕ ವಲಯ ಮಹತ್ತರ ಬದಲಾವಣೆ ಕಂಡಿದೆ. ವರ್ಕ್ ಫ್ರಂ ಹೋಮ್ ವಿಧಾನ ಹೆಚ್ಚು ಮುನ್ನೆಲೆಗೆ ಬಂತು. ಇದು ಉದ್ಯೋಗಿಗಳ ಸಮಯ ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡಿದೆ. ಆದರೆ, ಈ ಬಗ್ಗೆ ಉದ್ಯೋಗಿಗಳ ಮೇಲಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಅವರ ಉತ್ಪಾದಕತೆ ಸಾಕಾಗದು ಎಂದು ಅನುಮಾನಿಸಿದ್ದಾರೆ.
ಇದು ಮೂನ್ಲೈಟಿಂಗ್ಗೂ ದಾರಿ ಮಾಡಿಕೊಟ್ಟಿದ್ದು, ಗೂಢಾಚಾರಿಕೆ ನಡೆಸಲಾಗುತ್ತಿದೆ. ಇದನ್ನು ಮೈಕ್ರೋಸಾಫ್ಟ್ ಸಿಇಒ, ಭಾರತ ಮೂಲದ ಸತ್ಯ ನದೆಲ್ಲಾ ಟೀಕಿಸಿದ್ದಾರೆ. ಉದ್ಯೋಗಿಗಳನ್ನು ಶಂಕಿಸುವುದು ಉಚಿತವಲ್ಲ. ಮನೆಕೆಲಸ ನಿಜಕ್ಕೂ ಉತ್ಪಾದಕ ಹೆಚ್ಚುತ್ತದೆ. ಅವರ ಮೇಲೆ ತೀವ್ರ ನಿಗಾ ವಹಿಸುವುದು ಉತ್ಪಾದಕತೆ ಹೆಚ್ಚಿಸುವ ಸೂಕ್ತ ಕ್ರಮವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮೂನ್ಲೈಟಿಂಗ್ ಕಾರಣಕ್ಕಾಗಿ ಉದ್ಯೋಗಿಗಳ ಮೇಲೆ ಗೂಢಾಚಾರಿಕೆ ನಡೆಸುವುದು ಉತ್ಪಾದಕತಾ ಭ್ರಮೆಯಾಗಿದೆ. ಇದು ಉದ್ಯೋಗಿಗಳ ಕಾರ್ಯತತ್ಪರತೆಯನ್ನು ಹೆಚ್ಚಿಸದು. ಇದರಿಂದ ಅವರು ಆ ಕಂಪನಿ ಮೇಲೆ ಅನುಮಾನ ವ್ಯಕ್ತಪಡಿಸಬೇಕಾಗುತ್ತದೆ.
ಮೈಕ್ರೋಸಾಫ್ಟ್ ಸಮೀಕ್ಷೆಯ ಪ್ರಕಾರ ಶೇ.80 ರಷ್ಟು ಮ್ಯಾನೇಜರ್ಗಳು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದರ ಮೇಲೆ ಗೂಢಾಚಾರಿಕೆ ನಡೆಸುತ್ತಾರೆ. ಹೀಗೆ ಮಾಡಿ ಉದ್ಯೋಗಿಗಳ ಉತ್ಪಾದಕತೆ ಸಾಕಾಗುತ್ತಿಲ್ಲ ಎಂದು ಹೇಳುತ್ತಾರೆ ಎಂದು ನಾದೆಲ್ಲಾ ಅಭಿಪ್ರಾಯಪಟ್ಟಿದ್ದಾರೆ.