ನವದೆಹಲಿ: ಈಗಾಗಲೇ ಭಾರತದಲ್ಲಿ ಯುಪಿಐ ಡಿಜಿಟಲ್ ಪಾವತಿಗಳು ಜನಪ್ರಿಯಗೊಂಡಿದೆ. ಭಾರತೀಯ ಚಿಲ್ಲರೆ ಮಾರಾಟದಲ್ಲಿ ಅತ್ಯಂತ ಯಶಸ್ವಿಯಾಗಿರುವ ಈ ಯುಪಿಐ ವಹಿವಾಟನ್ನು ಇದೀಗ ಹೊರ ದೇಶಗಳೊಂದಿಗೆ ನಡೆಸಬಹುದಾಗಿದೆ. ಇದೇ ಮೊದಲ ಬಾರಿಗೆ ಇಂತಹ ವರ್ಗಾವಣೆ ಭಾರತ ಮತ್ತು ಸಿಂಗಾಪೂರದ ನಡುವೆ ನಡೆಯಲಿದೆ. ಎರಡು ದೇಶಗಳ ಸಹಕಾರದಿಂದಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪೇನೌ (Paynow) ಮೂಲಕ ಎರಡು ದೇಶಗಳ ನಡುವೆ ಯುಪಿಐ ಬಳಕೆ ಮಾಡಿ ಹಣದ ವಹಿವಾಟು ಮಾಡಬಹುದಾಗಿದೆ.
ಪ್ರಧಾನಿ ಚಾಲನೆ: ಅಂತರ ದೇಶಗಳ ಮಧ್ಯೆ ಆರಂಭವಾಗಿತುವ ಈ ವಹಿವಾಟಿಗೆ ವರ್ಚುಯಲ್ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪೂರ್ ತಮ್ಮ ಸಹವರ್ತಿ ಲೀ ಹಸೀನ್ ಲೂನ್ಗ್ ಅವರೊಂದಿಗೆ ಚಾಲನೆ ನೀಡಿದರು. ಈ ವ್ಯವಸ್ಥೆ ಬಳಸಿಕೊಂಡು ಎರಡು ದೇಶಗಳ ನಡುವೆ ಸುಲಭ ವ್ಯವಹಾರಗಳನ್ನು ನಡೆಸಬಹುದಾಗಿದೆ. ಎರಡು ದೇಶದ ಜನರು ಶೀಘ್ರಮ ಮತ್ತು ಸುಲಭ ವೆಚ್ಚದಲ್ಲಿ ಹಣದ ವರ್ಗಾವಣೆ ಮಾಡಬಹುದಾಗಿದೆ. ಎರಡು ದೇಶಗಳ ಜನರು ಕ್ಯೂಆರ್ ಕೋಡ್ ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಹಣದ ವಹಿವಾಟು ಮಾಡಬಹುದಾಗಿದೆ.
ಎರಡು ದೇಶಗಳ ನಡುವೆ ಸಹಕಾರ ಸಂಪರ್ಕ:ಇನ್ನು ಭಾರತ ಮತ್ತು ಸಿಂಗಾಪೂರದ ನಡುವೆ ಈ ಹಣದ ವಾಹಿವಾಟಿಗೆ ಫಿನ್‌ಟೆಕ್ ಸರ್ವಿಸ್ ಕಾರ್ಯ ನಿರ್ವಹಿಸಿದ್ದು, ಇದು ತಂತ್ರಜ್ಞಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಕಡಿಮೆ ವೆಚ್ಚದಲ್ಲಿ ಎರಡು ದೇಶಗಳ ಜನರು ರಿಯಲ್ ಟೈಮ್ನಲ್ಲಿ ಹಣದ ವಹಿವಾಟು ಮಾಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟನೆ ವೇಳೆ ತಿಳಿಸಿದ್ದಾರೆ.