ಹೈದರಾಬಾದ್:ಪ್ರಸ್ತುತ ಆರ್ಥಿಕ ವರ್ಷದಲ್ಲಿ 7 ತಿಂಗಳಲ್ಲಿ ಮೊಬೈಲ್ ರಫ್ತು ವಹಿವಾಟು 8 ಬಿಲಿಯನ್ ತಲುಪಿದೆ. ಕಳೆದ ವರ್ಷ ಇದೇ 7 ತಿಂಗಳ ಅವಧಿಗೆ ಹೋಲಿಕೆ ಮಾಡಿದಾಗ 4.97 ಬಿಲಿಯನ್ ಹೆಚ್ಚಿದ್ದು ಸರಾಸರಿ 1 ಬಿಲಿಯನ್ಗೂ ಹೆಚ್ಚಿನ ಮೊಬೈಲ್ ಈ ತಿಂಗಳಲ್ಲಿ ರಫ್ತಾಗಿದೆ ಎಂದು ಸಂವಹನ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಈ ಪ್ರಸ್ತುತ ವರ್ಷದಲ್ಲಿ ಮೊಬೈಲ್ ರಫ್ತು 8 ಬಿಲಿಯನ್ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಬೆಳವಣಿಗೆ ದರ 4.97ಬಿಲಿಯನ್ ಡಾಲರ್ ಇದೆ ಎಂದು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಮಾತನಾಡಿದ್ದ ಅಶ್ವಿನ್ ವೈಷ್ಣವ್, ಭಾರತದಲ್ಲಿನ ಟೆಲಿಕಾಂ ಉದ್ಯಮವೂ ಬಂಡಾವಾಳ ಆಧಾರಿತವಾಗುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. 2022-23ರ ಆರ್ಥಿಕ ವರ್ಷದಲ್ಲಿ ಮೊಬೈಲ್ ರಫ್ತಿನ ಮಾರುಕಟ್ಟೆ 10 ಬಿಲಿಯನ್ ಅಮೆಕನ್ ಡಾಲರ್ ತಲುಪಲಿದೆ ಎಂದಿದ್ದರು.
ಎಲ್ಲ ಘಟಕ ವ್ಯವಸ್ಥೆಗಳು ಭಾರತದಲ್ಲಿವೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆ, ಟೆಲಿಕಾಂ ಉತ್ಪಾದನೆಯು ವೇಗವಾಗಿ ಬೆಳೆಯುತ್ತದೆ ಎಂದು ಸಚಿವರು ತಿಳಿಸಿದರು. ಆತ್ಮನಿರ್ಭರ್ ಯೋಜನೆಯ ಭಾಗವಾಗಿ ಸರ್ಕಾರ ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ಹೂಡಿಕೆಗಳನ್ನು ಆಕರ್ಷಿಸಲು, ರಫ್ತುಗಳನ್ನು ಹೆಚ್ಚಿಸಲು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸಂಯೋಜಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ವಿವಿಧ ವಲಯಗಳಲ್ಲಿ ಉತ್ಪಾದನಾ ಸಂಬಂಧಿ ಪ್ರೋತ್ಸಾಹಕ ಯೋಜನೆಗಳನ್ನು ಪ್ರಾರಂಭಿಸಿತು.