ನವದೆಹಲಿ: ಕಳೆದ ಒಂಬತ್ತು ವರ್ಷಗಳಲ್ಲಿ ಜೋಳ, ಸಜ್ಜೆ ಮತ್ತು ರಾಗಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್ಪಿ) ಶೇ 100ರಿಂದ ಶೇ 150ರಷ್ಟು ಹೆಚ್ಚಳವಾಗಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2014-15 ಮತ್ತು 2023-24ರ ನಡುವೆ ಜೋಳದ ಎಂಎಸ್ಪಿ ಶೇಕಡಾ 108 ರಷ್ಟು ಹೆಚ್ಚಾಗಿದೆ.
2014-15ರಲ್ಲಿ ಜೋಳದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ 1,550 ರೂ.ಗಳಷ್ಟಿತ್ತು. ಇದು 2023-24ರಲ್ಲಿ ಪ್ರತಿ ಕ್ವಿಂಟಾಲ್ಗೆ ಶೇ 108ರಷ್ಟು ಏರಿಕೆಯಾಗಿ 3,225 ರೂ. ಗೆ ತಲುಪಿದೆ. ಅದೇ ರೀತಿ ಸಜ್ಜೆಗೆ ಎಂಎಸ್ಪಿ 2014-15ರಲ್ಲಿ ಪ್ರತಿ ಕ್ವಿಂಟಾಲ್ಗೆ ಇದ್ದ ಎಂಎಸ್ಪಿ ದರ 1,250 ರೂ.ಗಳಿಂದ 2023-24ರಲ್ಲಿ ಪ್ರತಿ ಕ್ವಿಂಟಾಲ್ಗೆ 2,500 ರೂ.ಗೆ ಏರಿದೆ.
ಇದೇ ಅವಧಿಯಲ್ಲಿ ರಾಗಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ 1,550 ರೂ.ಗಳಿಂದ 3,846 ರೂ.ಗೆ ಅಂದರೆ ಶೇ 148 ರಷ್ಟು ಏರಿಕೆಯಾಗಿದೆ. ಮೆಕ್ಕೆಜೋಳದ ಕನಿಷ್ಠ ಬೆಂಬಲ ಬೆಲೆ 2014-15ರಲ್ಲಿ ಪ್ರತಿ ಕ್ವಿಂಟಾಲ್ಗೆ 1,310 ರೂ.ಗಳಷ್ಟಿತ್ತು. ಇದು 2023-24ರಲ್ಲಿ ಶೇಕಡಾ 59 ರಷ್ಟು ಏರಿಕೆಯಾಗಿ ಪ್ರತಿ ಕ್ವಿಂಟಾಲ್ಗೆ 2,090 ರೂ.ಗೆ ಏರಿದೆ.
ಬಾರ್ಲಿಯ ಎಂಎಸ್ಪಿ 2014-15 ರಲ್ಲಿ ಪ್ರತಿ ಕ್ವಿಂಟಾಲ್ಗೆ 1,150 ರೂ.ಗಳಷ್ಟಿತ್ತು. ಇದು 2023-24 ರಲ್ಲಿ ಪ್ರತಿ ಕ್ವಿಂಟಾಲ್ಗೆ 1,735 ರೂ.ಗೆ ಅಂದರೆ ಶೇಕಡಾ 50 ರಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ ಪ್ರಮುಖ ಆಹಾರ ಧಾನ್ಯಗಳು ಮತ್ತು ರಾಗಿಯ ಎಂಸ್ಪಿ 2018-19ರಲ್ಲಿ ಪ್ರತಿ ಕ್ವಿಂಟಾಲ್ಗೆ 2,897 ರೂ.ಗಳಿಂದ 2022-23ರಲ್ಲಿ ಪ್ರತಿ ಕ್ವಿಂಟಾಲ್ಗೆ 3,578 ರೂ.ಗೆ ಅಂದರೆ ಶೇಕಡಾ 20 ರಷ್ಟು ಹೆಚ್ಚಾಗಿದೆ.