ಕರ್ನಾಟಕ

karnataka

By

Published : Feb 11, 2023, 11:55 AM IST

ETV Bharat / business

ಯುವಕರೇ ಎಚ್ಚರ! ತ್ವರಿತ ಸಾಲಗಳ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್​ರವರಿಂದ ಮೋಸ ಹೋಗಬೇಡಿ

ತ್ವರಿತ ಸಾಲದ ಹೆಸರಲ್ಲಿ ವಂಚನೆಗೆ ಒಳಗಾಗಬೇಡಿ-ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಜಾಲದಿಂದ ಪಾರಾಗಲು ಇಲ್ಲಿದೆ ದಾರಿ-

Micro lenders
ಮೈಕ್ರೋ ಫೈನಾನ್ಸ್

ಹೈದರಾಬಾದ್: ಆರ್ಥಿಕ ಕೊರತೆ ಪ್ರತಿಯೊಬ್ಬರಿಗೂ ಎದುರಾಗುವ ಸಮಸ್ಯೆಯೇ. ಹಣಕಾಸಿನ ತೊಂದರೆಯುಂಟಾದಾಗ ಬಗೆಹರಿಸಲು ಹಲವಾರು ದಾರಿಗಳನ್ನು ಹುಡುಕುತ್ತೇವೆ. ಇಂಥಹ ಸಂದರ್ಭದಲ್ಲಿ ಆತುರದ ನಿರ್ಧಾರವು ಮುಂದೆ ನಿಮಗೆ ಹೆಚ್ಚಿನ ಸಂಕಷ್ಟಕ್ಕೆ ಕಾರಣವಾಗಬಹುದು. ಹೆಚ್ಚಿನದಾಗಿ ನಿಯಮಿತ ಆದಾಯವನ್ನು ಮತ್ತು ಉದ್ಯೋಗ ಕಳೆದುಕೊಂಡವರೇ ತಪ್ಪು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಇಂಥಹ ಸಂದರ್ಭದಲ್ಲಿ ಹಣದ ದಾರಿ ಹುಡುಕುವ ಅಸಹಾಯಕತೆಯ ಜನರನ್ನು ಬೇಟೆಯಾಡಲೆಂದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹೊಂಚು ಹಾಕುತ್ತಿರುತ್ತಾರೆ. ಆದರೆ ಇಂಥಹ ಮೋಸದ ಬಲೆಗೆ ಬೀಳದೆ ಫೈನಾನ್ಸ್ ವಿಷಯದಲ್ಲಿ ಬಹಳ ಎಚ್ಚರದಿಂದಿರಿ. ಹಾಗಾದರೆ ನಿರುದ್ಯೋಗಿ ಯುವಕರಲ್ಲದೆ ವಿದ್ಯಾರ್ಥಿಗಳು ಇಂಥಹ ಮೈಕ್ರೋ ಲೆಂಡರ್‌ಗಳ ಬಲೆಗೆ ಬೀಳುವುದನ್ನು ತಪ್ಪಿಸಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳೋಣ ಬನ್ನಿ.

ಪ್ರಸ್ತುತ ಡಿಜಿಟಲೀಕರಣ ಹಳ್ಳಿಯಿಂದ ಹಿಡಿದು ಪಟ್ಟಣದವರೆಗೆ ವ್ಯಾಪಕವಾಗಿ ಬಳಕೆಯಲ್ಲಿದೆ. ಯುವಕರಂತು ಇದಕ್ಕೆ ಅವಲಂಬಿತರಾಗಿರುವುದು ಹೆಚ್ಚು. ಇದೇ ಅಂಶವನ್ನು ಇಟ್ಟುಕೊಂಡು ಸ್ಮಾರ್ಟ್​ಫೋನ್​ನನ್ನೆ ಸಾಧನವಾಗಿ ಈ ತ್ವರಿತ ಸಾಲ ನೀಡುವವರು ಅಗತ್ಯವಿರುವ ಯುವಕರ ಗಮನವನ್ನು ಸೆಳೆಯುವಲ್ಲಿ ಪ್ರಯತ್ನಶೀಲರಾಗಿರುತ್ತಾರೆ. ಸಾಮಾನ್ಯವಾಗಿ ಮಾನ್ಯ ದಾಖಲೆಗಳಿಲ್ಲದೆ ಎಂಥಹದೇ ಬ್ಯಾಂಕ್​ಗಳಾಗಿರಬಹುದು, ಸಾಮಾನ್ಯ ಹಣಕಾಸು ಸಂಸ್ಥೆಯೇ ಆಗಿರಬಹುದು ಒಂದು ಸಾಲ ನೀಡಲು ನಿರಾಕರಿಸುತ್ತದೆ, ಅದು ಅಸಾಧ್ಯ ಕೂಡ.

ಆದರೆ ಇಲ್ಲಿ ಗಮನಿಸಬೇಕಾದುದು ಫ್ರಾಡ್​ ಮೈಕ್ರೋ ಸಾಲದಾತರು ಯಾವುದೇ ದಾಖಲೆಗಳನ್ನು ಅಥವಾ ಸಾಲಗಾರರ ಸಹಿಯನ್ನು ಕೂಡ ಕೇಳುವುದಿಲ್ಲ. ಅವರು ಅಗತ್ಯವಿರುವ ಸಾಲಗಾರರಲ್ಲಿ ಅವರ ಸಂಕಷ್ಟದ ಸಂದರ್ಭವನ್ನು ಉಪಯೋಗಿಸಿಕೊಂಡು ತ್ವರಿತ ಸಾಲದ ಕುರಿತು ಆಕರ್ಷಿಸುತ್ತಾರೆ ಅಲ್ಲದೆ ಡಿಜಿಟಲ್ ಸಾಲಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ.

ನೀವು ಯಾವತ್ತಾದರು ಈ ರೀತಿಯ ಸಾಲ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ಮಾಡಬೇಕಾದ ಮೊದಲ ಪ್ರಮುಖ ಕೆಲಸವೆಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಲೋನ್​ ಅಪ್ಲಿಕೇಶನ್​ ನೀಡುವ ಸಂಸ್ಥೆಯು ಯಾವುದಾದರು ಭೌತಿಕ ವಿಳಾಸವನ್ನು ಹೊಂದಿದೆಯೆ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಇನ್ನು ಮೈಕ್ರೋ ಫೈನಾನ್ಸ್‌ನಲ್ಲಿ ಏನಾದರು ವ್ಯಾಪಾರ ಮಾಡಲು ಸಹ ಆ ಸಂಸ್ಥೆಯಯು ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮುಖ್ಯವಾಗಿ ಆ ಸಂಸ್ಥೆ ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾದಿಂದ (RBI) ಮೊಬೈಲ್​ ಬ್ಯಾಂಕಿಂಗ್​ (NBFC) ಪರವಾನಿಗೆಯನ್ನು ಸಹ ತೆಗಕೊಂಡಿರಬೇಕು.

ಒಂದು ಸಂಸ್ಥೆಯು ಆರ್‌ಬಿಐ ಪರವಾನಿಗೆ ಇಲ್ಲದೆ ಮೈಕ್ರೋ ಲೋನ್‌ಗಳನ್ನು ನೀಡಿದರೆ, ಅದು ನಂಬಿಕೆಗೆ ಅರ್ಹವಲ್ಲ ಬದಲಾಗಿ ಯಾವುದೋ ವಂಚನೆಯ ಉದ್ದೇಶ ಹೊಂದಿದೆ ಎಂದರ್ಥ. ಹಾಗಾಗಿ ತ್ವರಿತ ಸಾಲ ತೆಗೆದುಕೊಳ್ಳಲು ಬಯಸುವರು ಭವಿಷ್ಯದಲ್ಲಿ ಇದರಿಂದಾಗುವ ಸಮಸ್ಯೆಯನ್ನು ಆಲೋಚಿಸಿ, ಮೋಸದ ಬಲೆಗೆ ಬೀಳದೆ ಇದ್ದು ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದೇ ಉತ್ತಮ. ಇನ್ನೂ ಸಾಧ್ಯವಾದರೆ ಮೈಕ್ರೋ ಸಾಲದಾತರು ಸಂಪರ್ಕಕ್ಕಾಗಿ ಫೋನ್​ ನಂಬರ್​ ಮತ್ತು ಆನ್‌ಲೈನ್‌ನಲ್ಲಿ ಪಾಸಿಟಿವ್​ ರಿವ್ಯೂವನ್ನು ಪಡೆದಿದ್ದಾರೆಯೇ ಎಂಬುದನ್ನು ಗಮನಿಸಬೇಕು.

ಹಾಗೆ ನೀವು ಸಾಲದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಒಂದೆರಡು ಬಾರಿ ಯೋಚಿಸಬೇಕು. ಯಾಕೆಂದರೆ ಒಂದು ಬಾರಿ ನೀವು ಌಪ್​ನ್ನು ಡೌನ್​ಲೋಡ್​ ಮಾಡಿದಾಗ ಅವರು ನಿಮ್ಮ ವೈಯಕ್ತಿಕ ಡೇಟಾವನ್ನು ಬಳಸಲು ಅನುಮತಿ ಕೇಳುದಲ್ಲದೆ, ನಿಮ್ಮ ಫೋನ್ ಸಂಖ್ಯೆ ಮತ್ತು ಫೋಟೋದ ದುರ್ಬಳಕೆಯು ಆಗುತ್ತದೆ. ನಿಮ್ಮ ನಿಖರವಾದ ಮೊಬೈಲ್​ ಸಂಖ್ಯೆ ನೀಡುವುದರಿಂದ ಸಂಪರ್ಕ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಅಲ್ಲದೆ ಸೂಕ್ಷ್ಮ ಸಾಲದಾತರು ಸಾಲಗಾರನ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಿರಿ ಕಿರಿ ತೊಂದರೆ ಉಂಟು ಮಾಡುವ ಸಾಧ್ಯತೆ ಕೂಡ ಇದೆ.

ತ್ವರಿತ ಸಾಲದ ಸಾಲಗಾರರು ಬಳಸಬಹುದಾದ ಮತ್ತೊಂದು ತಂತ್ರವೆಂದರೆ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳ ಬಳಕೆ. ನಿಮ್ಮ ಈ ವೈಯಕ್ತಿಕ ಡೇಟಾವನ್ನು ಬಳಸಿಕೊಂಡು ವಂಚನೆಗೆ ಗುರಿಯಾಗಿಸಬಹುದು. ಆದ್ದರಿಂದ ಗ್ರಾಹಕರು ಮೈಕ್ರೋ ಫೈನಾನ್ಸ್ ನಂತಹ ಸಂಸ್ಥೆಗಳಿಂದ ಬಹಳ ಎಚ್ಚರವಹಿಸಿ. ಒಂದು ವೇಳೆ ತ್ವರಿತ ಸಾಲದ ಮೊರೆ ಹೋದ ಪಕ್ಷದಲ್ಲಿ ಮೊಬೈಲ್ ಲೋನ್ ಅಪ್ಲಿಕೇಶನ್‌ನ ರುಜುವಾತುಗಳನ್ನು, ನೀವು ಒಳಗೊಂಡಿರುವ ಗುಪ್ತ ಶುಲ್ಕವನ್ನು ಪರಿಶೀಲಿಸಿ. ಹಾಗೆ ತ್ವರಿತ ಸಾಲದಾತರು ಸಂಗ್ರಹಿಸುವ ಅತಿಯಾದ ಬಡ್ಡಿದರಗಳ ವಿರುದ್ಧವೂ ಎಚ್ಚರಿಕೆ ವಹಿಸಿ.

ಇದನ್ನೂ ಓದಿ:ಹೈದರಾಬಾದ್​ನಲ್ಲಿಂದು ಕಾರು​ಗಳ ರೊಯ್​ ರೊಯ್​ ಸದ್ದು, ಫಾರ್ಮುಲಾ-ಇ ಚಾಂಪಿಯನ್​ಶಿಪ್​ ಸ್ಪರ್ಧೆ

ABOUT THE AUTHOR

...view details