ನವದೆಹಲಿ:ಫೇಸ್ಬುಕ್, ವಾಟ್ಸ್ಆ್ಯಪ್ಗಳ ಒಡೆತನ ಹೊಂದಿರುವ ಮೆಟಾ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೇರೊಂದು ಅವಕಾಶ ಅರಸಿ ಬಂದಿದ್ದಕ್ಕೆ ಮೋಹನ್ ಅವರು ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ತೊರೆದಿದ್ದಾಗಿ ತಿಳಿದುಬಂದಿದೆ.
ಅಜಿತ್ ಮೋಹನ್ ಅವರ ರಾಜೀನಾಮೆ ದೃಢಪಡಿಸಿರುವ ಮೆಟಾ, ಮೋಹನ್ ಅವರು ಕಳೆದ 4 ವರ್ಷಗಳಿಂದ ಕಂಪನಿಯ ಪರವಾಗಿ ಭಾರತದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಂಪನಿಯ ನೀತಿ ನಿರೂಪಣೆ ಅನುಷ್ಠಾನ, ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಇದರಿಂದಾಗಿ ಲಕ್ಷಾಂತರ ಭಾರತೀಯ ವ್ಯಾಪಾರಿಗಳು, ಪಾಲುದಾರರು ಮತ್ತು ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದು ಎಂದು ಮೆಟಾ ಹೇಳಿದೆ.