ಕರ್ನಾಟಕ

karnataka

ETV Bharat / business

ಮಾರುತಿ ಸುಜುಕಿಯ ಹೊಸ ಎರ್ಟಿಗಾ ಕಾರು ಬಿಡುಗಡೆ: ಬೆಲೆ, ವಿಶೇಷತೆಗಳು.. - New model car from Maruti Suzuki

ಮಾರುತಿ ಸುಜುಕಿ ಕಂಪನಿಯು ಹೊಸ ಮಾದರಿಯ ಎರ್ಟಿಗಾ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪೆಟ್ರೋಲ್​ ಮತ್ತು ಸಿಎನ್​ಜಿ ಮಾದರಿಯ ಚಾಲಿತ ಕಾರು ಇದಾಗಿದೆ.

maruti-suzuki
ಹೊಸ ಎರ್ಟಿಗಾ

By

Published : Apr 15, 2022, 10:42 PM IST

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ತನ್ನ ಎರ್ಟಿಗಾದ ಹೊಸ ಆವೃತ್ತಿಯನ್ನು ಪರಿಚಯಿಸಿದೆ. ಈ ಕಾರು ಎಕ್ಸ್​ ಶೋರೂಂನಲ್ಲಿ 8.35 ಲಕ್ಷದಿಂದ 12.79 ಲಕ್ಷ ಬೆಲೆಗೆ ಸಿಗಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಲಭ್ಯವಿದೆ.

ಈ ಹೊಸ ಮಾದರಿಯು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದ್ದು, ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸುಧಾರಿತ ಆರು ಸ್ಪೀಡ್​ ಆಟೊಮೆಟಿಕ್​ ಟ್ರಾನ್ಸ್​ಮಿಷನ್​ನಿಂದ ಚಲಿಸುತ್ತದೆ. ಪೆಟ್ರೋಲ್ ಮತ್ತು ಸಿಎನ್​ಜಿ ಆಯ್ಕೆಗಳಲ್ಲಿ ಲಭ್ಯವಿರುವ ಈ ಕಾರು, ಪ್ರತಿ ಲೀಟರ್​ ಪೆಟ್ರೋಲ್​ಗೆ 20.51 ಕಿಲೋ ಮೀಟರ್​ ಆದರೆ, ಸಿಎನ್​ಜಿಗೆ 26.11 ಕಿ.ಮೀ ಮೈಲೇಜ್ ನೀಡುತ್ತದೆ.

10 ವರ್ಷಗಳ ಹಿಂದೆ ಎರ್ಟಿಗಾ ಬಿಡುಗಡೆಯು ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಮಹತ್ವದ್ದಾಗಿದೆ. ಕಾರಣ 4.7 ಶೇಕಡಾ ಸಿಎಜಿಆರ್​ ದರದಲ್ಲಿ ಹೊಸ ವಿಭಾಗವನ್ನೇ ಸೃಷ್ಟಿಸಿದೆ. ಗ್ರಾಹಕರ ಅಚ್ಚುಮೆಚ್ಚಿನ ಕಾರಾಗಿ ಇದು ಸ್ಥಾನ ಪಡೆದಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟೇಕುಚಿ ಹೇಳಿದರು.

ಉತ್ತಮ ಸೌಕರ್ಯ, ತಂತ್ರಜ್ಞಾನ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಸ ಮಾದರಿಯ ಗ್ರಾಹಕರಿಗೆ ಆವೃತ್ತಿ ನೀಡುತ್ತದೆ. ಝೆನ್ ಎರ್ಟಿಗಾ ಖಂಡಿತವಾಗಿಯೂ ಭಾರತದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಲಿದೆ. ಹೊಸ ಮಾದರಿಯ ಎರ್ಟಿಗಾವನ್ನು ನಮ್ಮ ಗ್ರಾಹಕರು ವ್ಯಾಪಕವಾಗಿ ಸ್ವೀಕರಿಸುತ್ತಾರೆ ಎಂಬ ಭಾವನೆ ನನ್ನದು ಎಂದು ಟೇಕುಚಿ ಹೇಳಿದ್ದಾರೆ.

ಇದನ್ನೂ ಓದಿ:ಕಳಪೆ ಆಹಾರ ಪೂರೈಸಿದರೆ ಆರ್ಡರ್​ ಬಂದ್: ಜೊಮ್ಯಾಟೋದಿಂದ 'ಆಹಾರ ಗುಣಮಟ್ಟ ದೂರು' ನೀತಿ

ABOUT THE AUTHOR

...view details