ನವದೆಹಲಿ:ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇದೀಗ ತನ್ನೆಲ್ಲಾ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೊಳ್ಳಲಿದೆ. ಇನ್ಪುಟ್ ವೆಚ್ಚದಲ್ಲಿನ ಏರಿಕೆ ಸರಿದೂಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಕಂಪನಿ ಕಳೆದ ತಿಂಗಳ ಘೋಷಣೆ ಮಾಡಿತ್ತು. ಅದರಂತೆ ಇದೀಗ ಬೆಲೆ ಏರಿಕೆ ಹೆಚ್ಚಿಸಿದೆ.
ಕೋವಿಡ್ ಹಾಗೂ ಹಣದುಬ್ಬರ ಕಾರಣದಿಂದಾಗಿ ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿರುವ ಕಾರಣ, ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಕಂಪನಿಯಲ್ಲಿ ತಯಾರುಗೊಳ್ಳುತ್ತಿರುವ ಅಲ್ಟೋದಿಂದ ಹಿಡಿದು ಎಸ್ ಕ್ರಾಸ್ ಮಾಡೆಲ್ವರೆಗಿನ ಎಲ್ಲ ಕಾರುಗಳ ಮಾರಾಟ ಬೆಲೆಯೂ ಏರಿಕೆಯಾಗಿವೆ.