ನವದೆಹಲಿ:ಕಾರು ಅಪಘಾತದಲ್ಲಿ ದೇಶದ ದಿಗ್ಗಜ ಉದ್ಯಮಿ ಸೈರಸ್ ಮಿಸ್ತ್ರಿ ಅವರು ದಾರುಣ ಸಾವಿಗೀಡಾಗಿದ್ದರು. ಸೀಟ್ಬೆಲ್ಟ್, ಏರ್‌ಬ್ಯಾಗ್ ಧರಿಸದಿರುವುದೇ ಇದಕ್ಕೆ ಕಾರಣ ಎಂದು ಗೊತ್ತಾಗಿತ್ತು. ಬಳಿಕ ವಾಹನ ಸುರಕ್ಷತೆ ಭಾರೀ ಸದ್ದು ಮಾಡಿತ್ತು. ಕೇಂದ್ರ ಸರ್ಕಾರ ಇದೀಗ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ಅಳವಡಿಕೆ ಕಡ್ಡಾಯ ಮಾಡಿದೆ. ಈ ನಿಯಮ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ ಎಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಮುಂದಿನ ವರ್ಷದಿಂದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು 8 ಸೀಟುಗಳ ಕಾರಿನಲ್ಲಿ 6 ಏರ್ಬ್ಯಾಗ್ಗಳ ಅಳವಡಿಕೆ ಕಡ್ಡಾಯವಾಗಲಿದೆ. ಈ ವರ್ಷವೇ ಈ ನಿಯಮ ಜಾರಿಗೆ ಬರಬೇಕಿತ್ತು. ಆದರೆ, ಉತ್ಪಾದನಾ ಕೊರತೆಯಿಂದ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
6 ಏರ್‌ಬ್ಯಾಗ್ ಕಡ್ಡಾಯದ ಬಗ್ಗೆ ಟ್ವೀಟ್ ಮಾಡಿರುವ ಗಡ್ಕರಿ ಅವರು, 6 ಏರ್‌ಬ್ಯಾಗ್ ನಿಯಮ 2022 ರಲ್ಲೇ ಜಾರಿಗೆ ಬರಬೇಕಿತ್ತು. ಆದರೆ, ಜಾಗತಿಕ ಪೂರೈಕೆ ಕೊರತೆ, ನಿರ್ಬಂಧಗಳ ಕಾರಣ ಈ ನಿಯಮದ ಅನುಷ್ಠಾನವನ್ನು ಸರ್ಕಾರ ಒಂದು ವರ್ಷದವರೆಗೆ ಮುಂದೂಡಬೇಕಾಯಿತು ಎಂದು ತಿಳಿಸಿದ್ದಾರೆ.