ಕರ್ನಾಟಕ

karnataka

By

Published : Jan 9, 2023, 10:17 AM IST

ETV Bharat / business

ಇಂದು ಮಾರುಕಟ್ಟೆಗೆ ಅಗ್ಗದ ಮಹೀಂದ್ರಾ ಥಾರ್ ಲಗ್ಗೆ​! ಬೆಲೆ, ವಿಶೇಷತೆ ಹೀಗಿದೆ..

ಮಹೀಂದ್ರ ಕಂಪನಿ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಕಂಪೆನಿಯು ಕಡಿಮೆ ಬೆಲೆಯ ಹೊಚ್ಚ ಹೊಸ ಥಾರ್‌ ವಾಹನವನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Mahindra Thar  Latest model of Mahindra Thar  Mahindra Thar 4x2  new mahindra thar price  ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮಹೇಂದ್ರ  ಇಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ ಅಗ್ಗದ ಥಾರ್​ ಮಹೀಂದ್ರ ಥಾರ್‌ನ ಅತ್ಯಂತ ಕಡಿಮೆ ಬೆಲೆ  ಹೊಸ ಥಾರ್‌ನಲ್ಲಿ ಈ ಬದಲಾವಣೆಗಳ  ಥಾರ್‌ನ ಪ್ರಸ್ತುತ ಬೆಲೆ
ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮಹೇಂದ್ರ

ಮಹೀಂದ್ರ ಥಾರ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ. ಮಹೀಂದ್ರ ಥಾರ್‌ನ ಅತ್ಯಂತ ಕಡಿಮೆ ಬೆಲೆಯ ರೂಪಾಂತರ ಬಿಡುಗಡೆಯಾಗುತ್ತಿದೆ. ಹೊಸ ಮಾದರಿಯು ವಿಭಿನ್ನ ಬಣ್ಣಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಗ್ಲಾಮರ್ ಮತ್ತು ಪ್ಯಾಶನ್ ಹೊಂದಿರುವ ಜನರ ಅಚ್ಚುಮೆಚ್ಚಿನ ಥಾರ್ ಈಗ ಇನ್ನೂ ಕಡಿಮೆ ಬೆಲೆಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇತ್ತೀಚೆಗೆ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಮಹೀಂದ್ರ ಥಾರ್‌ನ 4×2 ಆವೃತ್ತಿಯ ಆಫ್ ರೋಡರ್ ಬ್ರೋಷರ್ ಬಿಡುಗಡೆ ಮಾಡಿತ್ತು. ಇದರಲ್ಲಿ ಮಹೀಂದ್ರ ಥಾರ್ 4x2 ಅನ್ನು ಹೊಸ ಬಣ್ಣಗಳು ಮತ್ತು ಹಲವು ವೈಶಿಷ್ಟ್ಯಗಳನ್ನು ವಿವರಿಸಲಾಗಿದೆ.

ಮಹೀಂದ್ರ ಥಾರ್ 4x2 ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ ಮಹೀಂದ್ರ ಥಾರ್‌ಗಿಂತ ಅಗ್ಗವಾಗಲಿದೆ. ನೂತನ ಆವೃತ್ತಿಯ ವಿನ್ಯಾಸವು 4x4 ರೂಪಾಂತರದ ವಿನ್ಯಾಸ ಹೋಲುತ್ತದೆ. ಮಹೀಂದ್ರ ಥಾರ್ ಆರ್‌ಡಬ್ಲ್ಯೂಡಿ 4×4 ಮಾದರಿಯಂತೆ ಅದೇ ರೀತಿಯ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆಯುತ್ತದೆ. ಒಳಾಂಗಣದ ಇತರೆ ಅಂಶಗಳು ಹೆಚ್ಚಾಗಿ ಒಂದೇ ಆಗಿರುತ್ತವೆ. ಹೊಸ ಥಾರ್‌ನಲ್ಲಿ ನೀವು 2 ರಿಂದ 4 ಹೊಸ ಬಣ್ಣಗಳನ್ನು ಪಡೆಯಬಹುದು.

ಹೊಸ ಥಾರ್‌ನಲ್ಲಿ ಈ ಬದಲಾವಣೆಗಳು..: ಹೊಸ ಥಾರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ, ಹಿಂಭಾಗದಲ್ಲಿ 4×4 ಬ್ಯಾಡ್ಜ್ ಸೇರಿಸಲಾಗಿಲ್ಲ. ಅಲ್ಲದೇ, 4-ವೀಲ್ ಡ್ರೈವರ್ ಲಿವರ್ ಇರಲ್ಲ. ಇದರ ಬದಲಿಗೆ ಕ್ಯೂಬಿ ಹೋಲ್ ನೀಡಲಾಗಿದೆ. SUVಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದೆ. ಸ್ಟ್ಯಾಂಡರ್ಡ್​ ಮಾಡೆಲ್​ ಥಾರ್​ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ ಹೊಂದಿದೆ. ಆದರೆ ಹೊಸ ಥಾರ್ ಅನ್ನು ಕೈಗೆಟುಕುವಂತೆ ಮಾಡಲು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಮಹೀಂದ್ರ ಕಂಪನಿ ನೀಡಬಹುದು. ಇದಲ್ಲದೇ, SUV ಅದೇ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಸಹ ಪಡೆಯಬಹುದು. ಮಹೀಂದ್ರಾ ಥಾರ್ 2WD ಯೊಂದಿಗೆ ಎರಡು ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಬ್ಲೇಜಿಂಗ್ ಬ್ರೋಂಜ್ ಮತ್ತು ಎವರೆಸ್ಟ್ ವೈಟ್ ಆಯ್ಕೆಗಳಿವೆ.

ಥಾರ್‌ನ ಬೆಲೆ ಏನು?: ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 13.59 ಲಕ್ಷ ರೂಪಾಯಿಗಳಾಗಿದ್ದು, ವಿವಿಧ ಮಾದರಿಗಳೊಂದಿಗೆ 16.29 ಲಕ್ಷ ರೂಪಾಯಿಗಳಿಗೆ ಏರುತ್ತದೆ. ಇಂದು ಬಿಡುಗಡೆಯಾಗಲಿರುವ ಆವೃತ್ತಿಯು ಪ್ರಸ್ತುತ ಥಾರ್‌ಗಿಂತ ಕಡಿಮೆ ಬೆಲೆ ಹೊಂದಲಿದೆ. ಹೊಸ ಥಾರ್ ಈಗಿನ ಥಾರ್ ಬೆಲೆಗಿಂತ ಒಂದು ಲಕ್ಷ ರೂಪಾಯಿ ಕಡಿಮೆ ಆಗಬಹುದು ಎನ್ನುತ್ತಾರೆ ತಜ್ಞರು.

ಮಹೀಂದ್ರಾ ಶೀಘ್ರದಲ್ಲೇ 5-ಬಾಗಿಲಿನ SUV ಥಾರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದರ ಬೆಲೆ ಪ್ರಸ್ತುತ ಮಾದರಿಗಿಂತ 60 ರಿಂದ 80 ಸಾವಿರ ರೂ ಹೆಚ್ಚಾಗಿರುತ್ತದೆ. 5 ಬಾಗಿಲುಗಳ ಮಹೀಂದ್ರ ಥಾರ್ ಈ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:2024ರಲ್ಲಿ ಬಿಡುಗಡೆ ಮಾಡಬೇಕಿದ್ದ ಐಫೋನ್ ಎಸ್​ಇ 4ರ ಉತ್ಪಾದನೆ ಸ್ಥಗಿತ ಮಾಡಿದ ಆ್ಯಪಲ್?

ABOUT THE AUTHOR

...view details