ಕರ್ನಾಟಕ

karnataka

ETV Bharat / business

ಥರ್ಡ್​ ಪಾರ್ಟಿ ಏಜೆಂಟರಿಂದ ಸಾಲ ವಸೂಲಾತಿ ನಿಲ್ಲಿಸಿದ ಮಹೀಂದ್ರಾ ಫೈನಾನ್ಸ್​ - ದುರಂತರದ ಬಳಿಕ ಎಚ್ಚೆತ್ತುಕೊಂಡ ಮಹಿಂದ್ರಾ

ಕಳೆದ ವಾರ ಮಹೀಂದ್ರಾ ಫೈನಾನ್ಸ್​ ಕಂಪನಿಯ ಥರ್ಡ್ ಪಾರ್ಟಿ ಏಜೆಂಟರು ಸಾಲ ವಸೂಲಾತಿಗೆ ಹೋಗಿದ್ದಾಗ ಅವರು ಭೀಕರ ಕೃತ್ಯವೊಂದನ್ನು ಎಸಗಿದ್ದರು. ಜಾರ್ಖಂಡ್​ನ ಹಜಾರಿಬಾಗ್​ ಜಿಲ್ಲೆಯಲ್ಲಿ ಸಾಲ ವಸೂಲಾತಿಗೆ ಹೋಗಿದ್ದ ಮಹಿಂದ್ರಾ ಥರ್ಡ್ ಪಾರ್ಟಿ ಏಜೆಂಟರು ಗರ್ಭಿಣಿಯೊಬ್ಬರ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಅವಳನ್ನು ಕೊಲೆ ಮಾಡಿದ್ದರು.

ಥರ್ಡ್​ ಪಾರ್ಟಿ ಏಜೆಂಟರಿಂದ ಸಾಲ ವಸೂಲಾತಿ ನಿಲ್ಲಿಸಿದ ಮಹಿಂದ್ರಾ ಫೈನಾನ್ಸ್​
mahindra-financial-services-from-loan-recovery

By

Published : Sep 23, 2022, 1:42 PM IST

ನವದೆಹಲಿ: ಡಿಫಾಲ್ಟ್​ ಆದ ಸಾಲಗಳನ್ನು ವಸೂಲಿ ಮಾಡಲು ಥರ್ಡ್​ ಪಾರ್ಟಿ ರಿಕವರಿ ಎಜೆಂಟ್​ರುಗಳನ್ನು ನೇಮಿಸಿಕೊಳ್ಳದಂತೆ ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್​ಗೆ ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದ ಹಿನ್ನೆಲೆಯಲ್ಲಿ, ಸಾಲ ವಸೂಲಾತಿಗೆ ಥರ್ಡ್ ಪಾರ್ಟಿ ಏಜೆಂಟ್​ರ ನೇಮಕವನ್ನು ನಿಲ್ಲಿಸಿರುವುದಾಗಿ ಕಂಪನಿ ತಿಳಿಸಿದೆ.

ಸಾಲ ಬಾಕಿ ತೀರಿಸದ ವಾಹನಗಳನ್ನು ಜಪ್ತಿ ಮಾಡಲು ತಾವು ವಿಸ್ತೃತವಾದ ಮಾರ್ಗಸೂಚಿಗಳನ್ನು ಹೊಂದಿರುವುದಾಗಿ ಕಳೆದ ರಾತ್ರಿ ಹೊರಡಿಸಿದ ಪ್ರಕಟಣೆಯಲ್ಲಿ ಮಹೀಂದ್ರಾ ತಿಳಿಸಿದೆ.

ದುರಂತರದ ಬಳಿಕ ಎಚ್ಚೆತ್ತುಕೊಂಡ ಮಹಿಂದ್ರಾ:ಇತ್ತೀಚೆಗೆ ನಡೆದ ದುರಂತದ ಘಟನೆಯ ಹಿನ್ನೆಲೆಯಲ್ಲಿ ನಾವು ಥರ್ಡ್​ ಪಾರ್ಟಿಗಳಿಂದ ಸಾಲ ವಸೂಲಾತಿಯನ್ನು ನಿಲ್ಲಿಸಿದ್ದೇವೆ ಮತ್ತು ಭವಿಷ್ಯದಲ್ಲಿ ಥರ್ಡ್ ಪಾರ್ಟಿ ಏಜೆಂಟ್​ರನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ ಎಂದು ಮಹಿಂದ್ರಾ ಪೈನಾನ್ಸ್​ನ ವೈಸ್ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ ಐಯ್ಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಮಹೀಂದ್ರಾ ಫೈನಾನ್ಸ್​ ಕಂಪನಿಯ ಥರ್ಡ್ ಪಾರ್ಟಿ ಏಜೆಂಟರು ಸಾಲ ವಸೂಲಾತಿಗೆ ಹೋಗಿದ್ದಾಗ ಅವರು ಭೀಕರ ಕೃತ್ಯವೊಂದನ್ನು ಎಸಗಿದ್ದರು. ಜಾರ್ಖಂಡ್​ನ ಹಜಾರಿಬಾಗ್​ ಜಿಲ್ಲೆಯಲ್ಲಿ ಸಾಲ ವಸೂಲಾತಿಗೆ ಹೋಗಿದ್ದ ಮಹಿಂದ್ರಾ ಥರ್ಡ್ ಪಾರ್ಟಿ ಏಜೆಂಟರು ಗರ್ಭಿಣಿಯೊಬ್ಬರ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಅವಳನ್ನು ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆರ್​ಬಿಐ, ಇನ್ನು ಮುಂದೆ ಸಾಲ ವಸೂಲಾತಿಗೆ ಯಾವುದೇ ಥರ್ಡ್ ಪಾರ್ಟಿ ಏಜೆಂಟರನ್ನು ಬಳಸುವಂತಿಲ್ಲ ಎಂದು ಮಹಿಂದ್ರಾ ಫೈನಾನ್ಸ್​​ಗೆ ಆದೇಶಿಸಿತ್ತು.

ಬ್ಯಾಂಕಿಂಗೇತರ ಹಣಕಾಸು ಕಂಪನಿಯಾಗಿರುವ (ಎನ್‌ಬಿಎಫ್‌ಸಿ) ಮಹೀಂದ್ರಾ ತನ್ನ ಸ್ವಂತ ಉದ್ಯೋಗಿಗಳ ಮೂಲಕ ವಸೂಲಾತಿಗಳನ್ನು ಮುಂದುವರಿಸಬಹುದು ಎಂದು ಆರ್‌ಬಿಐ ಹೇಳಿದೆ.

ಸಾವಿಗೆ ಸಂತಾಪ ಸೂಚಿಸಿದ ಸಂಸ್ಥೆ:ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಮಹೀಂದ್ರಾ ಫೈನಾನ್ಸ್‌ನಿಂದ ನೇಮಕಗೊಂಡ ಟೀಮ್ ಲೀಸ್‌ನ ಉದ್ಯೋಗಿ ರೋಷನ್ ಎಂಬಾತನನ್ನು ಬಂಧಿಸಿದ್ದಾರೆ. ಮಹೀಂದ್ರಾ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನೀಶ್ ಶಾ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಘಟನೆಯನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: 'ಭಾರತಿ ಡ್ರೈವಿಂಗ್​ ಸ್ವರಾಜ್'.. ಮದುವೆ ಮಂಟಪಕ್ಕೆ ಟ್ರ್ಯಾಕ್ಟರ್​ನಲ್ಲಿ ಬಂದ ಯುವತಿ ನಡೆಗೆ ಆನಂದ್ ಮಹೀಂದ್ರಾ ಫಿದಾ!

ABOUT THE AUTHOR

...view details