ಕರ್ನಾಟಕ

karnataka

ETV Bharat / business

ಮನೆ, ಫ್ಲಾಟ್​, ಅಪಾರ್ಟ್​ಮೆಂಟ್​ಗಳಲ್ಲಿ ಇದೀಗ ಐಷಾರಾಮಿ​ ಡೆಮೊ ಥಿಯೇಟರ್​ ಅನುಭವ - ನಿಮ್ಮ ನೆಚ್ಚಿನ ಸಿನಿಮಾ

ಮನೆಗಳು, ಫ್ಲಾಟ್‌ಗಳು, ಅಪಾರ್ಟ್‌ಮೆಂಟ್ ಸಮುದಾಯಗಳು ಇತ್ಯಾದಿಗಳಲ್ಲಿ ಐಷಾರಾಮಿ ಥಿಯೇಟರ್‌ಗಳ 'ಡೆಮೊ' ಥಿಯೇಟರ್ ಅನುಭವವನ್ನು ಕಂಪನಿ ನೀಡುತ್ತಿದೆ.

ಮನೆ, ಫ್ಲಾಟ್​, ಅಪಾರ್ಟ್​ಮೆಂಟ್​ಗಳಲ್ಲಿ ಇದೀಗ ಲಕ್ಷುರಿಯಸ್​ ಡೆಮೊ ಥಿಯೇಟರ್​ ಅನುಭವ
luxurious-demo-theater-experience-now-in-homes-flats-apartments

By

Published : Nov 19, 2022, 4:42 PM IST

ಹೈದರಾಬಾದ್​: ಥಿಯೇಟರ್​ನಲ್ಲಿ ಹೆಚ್ಚಿನ ಪ್ರೇಕ್ಷಕರು ಇಲ್ಲದಿದ್ದರೂ ನಿಮ್ಮ ನೆಚ್ಚಿನ ಸಿನಿಮಾವನ್ನು ಕುಟುಂಬ ಸದಸ್ಯರೊಂದಿಗೆ ಮಾತ್ರವೇ ವೀಕ್ಷಿಸುವುದು ವಿಭಿನ್ನ ಅನುಭವ. ಇಂತಹ ಅನುಭವವನ್ನೂ ಇದೀಗ ನೀವು ಯಾವಾಗ ಬೇಕಾದರೂ ಪಡೆಯಬಹುದಾಗಿದೆ. ಸಿನಿಮಾ ಮಾತ್ರವಲ್ಲದೇ ಕ್ರಿಕೆಟ್ ಪಂದ್ಯಗಳು, ಮದುವೆಯ ವಿಡಿಯೋಗಳು, ಹುಟ್ಟುಹಬ್ಬದ ಪಾರ್ಟಿಗಳು, ಔತಣ ಕೂಟಗಳು, ಒಟಿಟಿ ಚಲನಚಿತ್ರಗಳು ಮತ್ತು ಇನ್ನೂ ಅನೇಕ ಸೌಲಭ್ಯ ನಗರದ ಜನರಿಗೆ ಸಿಗಲಿದೆ. 'ಸ್ಟಾರ್ ಟ್ರ್ಯಾಕ್' ಸಂಸ್ಥೆ ಈ ಅವಕಾಶವನ್ನು ನೀಡುತ್ತಿದೆ

ಮನೆಗಳು, ಫ್ಲಾಟ್‌ಗಳು, ಅಪಾರ್ಟ್‌ಮೆಂಟ್ ಸಮುದಾಯಗಳು ಇತ್ಯಾದಿಗಳಲ್ಲಿ ಐಷಾರಾಮಿ ಥಿಯೇಟರ್‌ಗಳ 'ಡೆಮೊ' ಥಿಯೇಟರ್ ಅನುಭವವನ್ನು ಕಂಪನಿ ನೀಡುತ್ತಿದೆ. ಸುಮಾರು 143 ಇಂಚಿನ ಪರದೆ, 15 ಸ್ಪೀಕರ್ ಸಿಸ್ಟಮ್‌ಗಳು, ಐಷಾರಾಮಿ ರಿಕ್ಲೈನರ್‌ಗಳು ಮತ್ತು ಭದ್ರತಾ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ.

ಡೆಮೊವನ್ನು ಅನುಭವಿಸಲು ಬಯಸುವವರು ತಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬಂದು ತಮ್ಮ ನೆಚ್ಚಿನ ಒಟಿಟಿಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು. ಎಲ್ಲ ಏಳು ಜನರು ಒಂದೇ ಸಮಯದಲ್ಲಿ ಕುಳಿತು ಮಿನಿ ಥಿಯೇಟರ್ ಅನುಭವವನ್ನು ಪಡೆಯಬಹುದು. ಬೆಳಗಿನ ಹೊತ್ತು ಇದರ ಅನುಭವ ಪಡೆಯಲು 1500 ರೂ. ಶುಲ್ಕ ವಿಧಿಸಲಾಗುತ್ತಿದೆ. ವಾರಾಂತ್ಯದಲ್ಲಿ 1700 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ.

ನೀವು ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ, ಸಂಜೆ 6 ರಿಂದ ರಾತ್ರಿ 10 ರವರೆಗೆ ಬುಕ್ ಮಾಡಲು ಬಯಸಿದರೆ, 1700 ರೂ. ಮತ್ತು ವಾರಾಂತ್ಯದಲ್ಲಿ 1900 ರೂ. ವರೆಗೆ ಶುಲ್ಕ ವಿಧಿಸಲಾಗುತ್ತದೆ. ನಿಮ್ಮ ಇಷ್ಟದಂತೆ ಆರ್ಡರ್ ಮಾಡಿದರೆ ಅವುಗಳಲ್ಲೂ ಆ ರೀತಿಯೇ ವಿನ್ಯಾಸ ಮಾಡಿಕೊಡಲಾಗುವುದು.

ಇದನ್ನೂ ಓದಿ:ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ABOUT THE AUTHOR

...view details