ಹೈದರಾಬಾದ್: ಟಿವಿಯಲ್ಲಿ ಟಿ20 ಕ್ರಿಕೆಟ್ ನೋಡಿ, ಪಂದ್ಯಗಳನ್ನು ಆಡೋದು ಸುಲಭ ಎಂದೇ ನಾವು ಭಾವಿಸುತ್ತೇವೆ. ಆದರೆ ನೈಜ ಪರಿಸ್ಥಿತಿಯೇ ಬೇರೆ ಇರುತ್ತದೆ. ಇದೊಂದು ವಿಭಿನ್ನವಾದ ಚೆಂಡಿನ ಆಟವಾಗಿದ್ದು, ದೈಹಿಕ ಕಸರತ್ತಿನೊಂದಿಗೆ ಆತ್ಮವಿಶ್ವಾಸ ಮತ್ತು ನಿಖರತೆ ಅತ್ಯಂತ ಅಗತ್ಯ ಇರುತ್ತದೆ.
ಪಂದ್ಯಗಳನ್ನು ಗೆಲ್ಲಲು ಬ್ಯಾಟಿಂಗ್ ಮತ್ತು ಬೌಲಿಂಗ್‌ನ ಬಲಿಷ್ಠ ಲೈನ್‌ಅಪ್ ಅತ್ಯಗತ್ಯವಾಗಿರುತ್ತದೆ. ಅಂತೆಯೇ ಯಶಸ್ಸು ಸಾಧಿಸಲು ಹಾಗೂ ಜೀವನದ ಗುರಿ ಮುಟ್ಟಲು ಸರಿಯಾದ ಹಣಕಾಸು ಯೋಜನೆ ಬದುಕಿನಲ್ಲಿ ಬೇಕಾಗುತ್ತದೆ. ಸರಿಯಾದ ಗುರಿಗಳನ್ನು ಹೊಂದುವ ಮೂಲಕ ಸೂಕ್ತ ಹೂಡಿಕೆ ಯೋಜನೆಗಳೊಂದಿಗೆ ಆರ್ಥಿಕ ಶಿಸ್ತು ಹಾಗೂ ಹಣ ಗಳಿಕೆ ಮಾಡಬೇಕಾಗುತ್ತದೆ.
ಗೆಲುವಿಗೆ ವೈವಿಧ್ಯತೆ ಅಗತ್ಯ.. ಹೂಡಿಕೆಗೆ ಯೋಜನೆ ಮುಖ್ಯ:ಕ್ರಿಕೆಟ್‌ನಲ್ಲಿರುವಂತೆ ನಮ್ಮ ಹೂಡಿಕೆ ಪೋರ್ಟ್‌ಫೋಲಿಯೊದಿಂದ ಹೆಚ್ಚಿನದನ್ನು ಗಳಿಸಲು ನಮಗೆ ತಂತ್ರಗಳು ಮತ್ತು ಯೋಜನೆಗಳ ಅಗತ್ಯವಿದೆ. ತಂಡದ ಎಲ್ಲಾ 11 ಆಟಗಾರರು ಬಲಿಷ್ಠವಾಗಿದ್ದರೆ ಮಾತ್ರ ತಂಡವೂ ಬಲಿಷ್ಟವಾಗಿರುತ್ತದೆ ಮತ್ತು ಗೆಲುವಿನ ಅವಕಾಶವನ್ನೂ ಹೆಚ್ಚಿಸಕೊಳ್ಳಬಹುದು. ಒಂದು ನಿರ್ದಿಷ್ಟ ತಂಡದಲ್ಲಿ ಎಲ್ಲ ಹನ್ನೊಂದು ಮಂದಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಅಥವಾ ಶ್ರೇಷ್ಠ ಬೌಲರ್‌ಗಳಾಗಿದ್ದರೆ ಅದು ಸಹಾಯ ಮಾಡುವುದಿಲ್ಲ. ಸರಿಯಾದ ಸಮತೋಲನದ ಅಗತ್ಯ ಇರುತ್ತದೆ. ಅದರಂತೆಯೇ ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಹೂಡಿಕೆ ಮಾಡುವಾಗ ಯೋಜನೆಗಳ ಆಯ್ಕೆಯಲ್ಲಿ ಇಂತಹದ್ದೇ ವೈವಿಧ್ಯತೆ ಇರಬೇಕಾಗುತ್ತದೆ.
ಒಬ್ಬನೇ ಒಬ್ಬ ಬ್ಯಾಟ್ಸ್ಮನ್ ಅವಲಂಬನೆ ಉತ್ತಮವಲ್ಲ.. ಒಂದೇ ಹೂಡಿಕೆ ಯೋಜನೆ ಉಚಿತವೂ ಅಲ್ಲ:ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್‌ನ ಮೇಲೆ ಮಾತ್ರ ಅವಲಂಬಿತವಾಗುವುದು ಜಾಣತನವಲ್ಲ. ಅದೇ ರೀತಿ ನಾವು ಒಂದೇ ಒಂದು ಹೂಡಿಕೆ ಯೋಜನೆಯನ್ನು ಅವಲಂಬಿಸಬಾರದು. ಬದಲಾಗಿ ಕಂಪನಿ ಷೇರುಗಳು, ಟರ್ಮ್ ಬಾಂಡ್‌ಗಳು, ಈಕ್ವಿಟಿ ಫಂಡ್‌ಗಳು, ಠೇವಣಿಗಳು, ಚಿನ್ನ ಹೀಗೆ ಹೂಡಿಕೆ ಮಾಡಲು ವಿವಿಧ ಯೋಜನೆಗಳ ಅಗತ್ಯವಿದೆ. ಮೈದಾನದಲ್ಲಿ ಉಳಿಯಲು ವಿಕೆಟ್ ರಕ್ಷಿಸುವುದು ಎಷ್ಟು ಮುಖ್ಯವೋ , ಅತಿಯಾದ ರಕ್ಷಣಾತ್ಮಕ ತಂತ್ರವು ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಬಹುದು. ಆದ್ದರಿಂದ, ಹಣದುಬ್ಬರವು ನಮ್ಮ ಆದಾಯವನ್ನು ನಾಶಪಡಿಸುವುದರಿಂದ ಠೇವಣಿ ಮತ್ತು ಉಳಿತಾಯಗಳಲ್ಲಿನ ಅತಿಯಾದ ರಕ್ಷಣಾತ್ಮಕ ಹೂಡಿಕೆಗಳು ನಮ್ಮ ಯೋಜನೆಗಳನ್ನೆಲ್ಲ ಉಲ್ಟಾ ಮಾಡಬಹುದು.
ಪವರ್ ಪ್ಲೇ ಓವರ್‌ಗಳು ನಿರ್ಣಾಯಕ.. ಆರ್ಥಿಕ ಕುಸಿತದ ವೇಳೆ ಷೇರುಗಳು ನೆರವಿಗೆ ಬರಬಹುದು:20 ಓವರ್‌ಗಳ ಕ್ರಿಕೆಟ್‌ನ ಸಂಕ್ಷಿಪ್ತ ಆವೃತ್ತಿಯಲ್ಲಿ, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆಯಲು ಹೆಚ್ಚಿನ ಅವಕಾಶಗಳು ಇರುವಲ್ಲಿ ಪವರ್ ಪ್ಲೇ ಓವರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಜೀವನದ ಅವಕಾಶಗಳು ಯಾವುದೇ ಹಂತದಲ್ಲಿ ಆಟವನ್ನು ತಿರುಗಿಸುತ್ತವೆ. ಹೂಡಿಕೆ ಮಾಡುವಾಗ ನಾವು ಇದೇ ರೀತಿಯ ಅವಕಾಶಗಳನ್ನು ಪಡೆಯುತ್ತೇವೆ. ಮಾರುಕಟ್ಟೆ ಕುಸಿತದ ಸಮಯದಲ್ಲಿ, ಉತ್ತಮ ಷೇರುಗಳು ನಮ್ಮ ವ್ಯಾಪ್ತಿಯೊಳಗೆ ಬರಬಹುದು ಮತ್ತು ಅವುಗಳನ್ನು ತಪ್ಪಿಸಿಕೊಳ್ಳಬಾರದು. ಸ್ಥಿರ ರೀತಿಯಲ್ಲಿ ರನ್ ಗಳಿಸಬೇಕು. ಅಂತೆಯೇ ಹೂಡಿಕೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು.