ಮುಂಬೈ:ಇಂದು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್ಐಸಿ ಷೇರುಗಳು ಹೂಡಿಕೆದಾರರ ನಿರೀಕ್ಷೆಯನ್ನು ಹುಸಿ ಮಾಡಿದೆ. ದೊಡ್ಡ ಸಾರ್ವಜನಿಕ ಹೂಡಿಕೆಯಾದ ಎಲ್ಐಸಿ ಐಪಿಒ ವಹಿವಾಟಿನ ದಿನದಾಂತ್ಯದ ಕೊನೆಯಲ್ಲಿ ಷೇರು ದರ ಇಳಿಕೆ ಕಂಡಿದೆ.
ಅಧಿಕ ಲಾಭ ಗಿಟ್ಟಿಸಿಕೊಳ್ಳಲು ಭಾರಿ ಆಸೆಯೊಂದಿಗೆ ಎಲ್ಐಸಿ ಷೇರುಗಳನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಮಾತ್ರ ನಿರಾಸೆ ಉಂಟಾಗಿದೆ. ಲಿಸ್ಟಿಂಗ್ ಕಂಡ ಮೊದಲ ದಿನದ ವಹಿವಾಟಿನಲ್ಲೇ ಬೆಲೆ ಇಳಿಕೆ ಕಂಡು ಷೇರುಗಳು ತತ್ತರಿಸಿವೆ. ಇಂಟ್ರಾಡೇ ಯಾವುದೇ ಹಂತದಲ್ಲಿ ನಿಗದಿತ ಬೆಲೆಯನ್ನೂ ತಲುಪವಲ್ಲಿ ಸಾಧ್ಯವಾಗಿಲ್ಲ.
ಲಿಸ್ಟ್ ಆದ ಮೊದಲ ದಿನದಂದು 949 ರೂ. ನಿಗದಿತ ಇಶ್ಯೂ ಬೆಲೆಯ ಮೇಲಿನ ವಹಿವಾಟಿನಲ್ಲಿ ಬಿಎಸ್ಇಯಲ್ಲಿ ಶೇ. 8.62ರಷ್ಟು ಮೌಲ್ಯ ಕಳೆದುಕೊಂಡು 867.20 ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಶೇ.8.11ರಷ್ಟು ಕುಸಿದು 872 ರೂ.ಗೆ ಇಳಿದಿದೆ. ಅಂತಿಮವಾಗಿ ನಿಗದಿತ ಇಶ್ಯೂ ಬೆಲೆಗಿಂತ ಶೇ.7.75 ಕಳೆದುಕೊಂಡು 875.45ಕ್ಕೆ ಸ್ಥಿರವಾಗಿದೆ.