ಹೈದರಾಬಾದ್:ನೀವು ಕಷ್ಟಪಟ್ಟು ದುಡಿದ ಹಣಕ್ಕೆ ಭದ್ರತೆ ಮತ್ತು ಪ್ರತಿಫಲವನ್ನು ಬಯಸುವುದು ಸಹಜ. ಆದರೆ ಕುಟುಂಬದ ಹಿರಿಯ ವ್ಯಕ್ತಿಗೆ ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಅಥವಾ ಆತನಿಂದ ಕುಟುಂಬ ಪೋಷಿಸಲು ಸಾಧ್ಯವಾಗದೇ ಇದ್ದರೆ ಅವರ ಜೀವನ ತುಂಬಾ ಕಷ್ಟಕರವಾಗುತ್ತದೆ. ಅದಕ್ಕಾಗಿ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ವಿಮೆ ಮಾಡಿಸುವುದು ಅತಿ ಅಗತ್ಯ. ಸರ್ಕಾರಿ ಸ್ವಾಮ್ಯದ ಜೀವ ವಿಮಾ ಕಂಪನಿ LIC ಈಗಾಗಲೇ ಅನೇಕ ಪಾಲಿಸಿಗಳನ್ನು ಈ ನಿಟ್ಟಿನಲ್ಲಿ ಹೊರತಂದಿದೆ. ಆದರೂ ಹೂಡಿಕೆದಾರರು ಹೆಚ್ಚಿನ ಆದಾಯಕ್ಕಾಗಿ ತಮ್ಮ ಹಣವನ್ನು ಇತರೆ ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಅನುಕ್ರಮದಲ್ಲಿ ಎಲ್ಐಸಿ ಉಳಿತಾಯ, ವಿಮೆ ಮತ್ತು ಗ್ಯಾರೆಂಟಿ ಆದಾಯದೊಂದಿಗೆ ಹೊಸ ಪಾಲಿಸಿ ತಂದಿದೆ. ಅದುವೇ ಜೀವನ ಉತ್ಸವ ಪಾಲಿಸಿ (LIC jeevan utsav).
ಎಲ್ಐಸಿ ಜೀವನ ಉತ್ಸವ ಪ್ಲಾನ್ ನಂಬರ್ 871 ಅನ್ನು ನವೆಂಬರ್ 29ರಿಂದ ಪ್ರಾರಂಭಿಸಲಾಗಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಇಂಡಿವಿಷ್ಯಲ್, ಸೇವಿಂಗ್ಸ್ ಹಾಗು ಜೀವನಪೂರ್ತಿ ವಿಮೆ ನೀಡುವ ಪಾಲಿಸಿ. ಒಮ್ಮೆ ಈ ಪಾಲಿಸಿಯನ್ನು ತೆಗೆದುಕೊಂಡರೆ, ಪ್ರೀಮಿಯಂ ಪಾವತಿ ಅವಧಿ ಮುಗಿದ ನಂತರ ನೀವು ಜೀವಮಾನದ ಆದಾಯವನ್ನು ಪಡೆಯಬಹುದು. ವಿಮಾ ಮೊತ್ತದ ಶೇ 10ನ್ನು ಆದಾಯವಾಗಿ ಪಾವತಿಸಲಾಗುತ್ತದೆ.
ಎಲ್ಐಸಿ ಜೀವನ್ ಉತ್ಸವ- ವೈಶಿಷ್ಟ್ಯತೆಗಳು:
- ಪ್ರೀಮಿಯಂ ಟರ್ಮ್ ಮತ್ತು ವೈಟಿಂಗ್ ಪಿರಿಯಡ್ ನಂತರ ವಾರ್ಷಿಕ ಆದಾಯ.
- ನೀವು ನಿಯಮಿತ ಆದಾಯ ಬಯಸಿದಲ್ಲಿ ಫ್ಲೆಕ್ಸಿ ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ಮೂಲಕ ಚಕ್ರಬಡ್ಡಿಯ ಲಾಭ ಪಡೆಯಬಹುದು.
- ಪಾಲಿಸಿ ಪ್ರಾರಂಭವಾದ ವರ್ಷದಿಂದ ಜೀವನಪೂರ್ತಿ ಈ ವಿಮೆಯ ಸದುಪಯೋಗ ಪಡೆದುಕೊಳ್ಳಬಹುದು.
- ಪ್ರೀಮಿಯಂ ಪಾವತಿಸುವ ಅವಧಿಗೆ ರೂ.1000ಕ್ಕೆ ರೂ.40 ದರದಲ್ಲಿ ಖಾತರಿಪಡಿಸಿದ ಸೇರ್ಪಡೆಗಳಿವೆ.
- 90 ದಿನಗಳ ಮಗುವಿನಿಂದ ಹಿಡಿದು 65 ವರ್ಷ ವಯಸ್ಸಿನವರು ಈ ಪಾಲಿಸಿಗೆ ಅರ್ಹತೆ ಪಡೆದಿದ್ದಾರೆ.
- ವಿವಿಧ ವಾಹನ ಸವಾರರು ಸಹ ಈ ಪಾಲಿಸಿಯನ್ನು ಖರೀದಿಸಬಹುದು. ಅಷ್ಟೇ ಅಲ್ಲ, ಸಾಲ ಸೌಲಭ್ಯವೂ ಇದೆ.
LIC ಜೀವನ್ ಉತ್ಸವ ಪಡೆಯಲು ಅರ್ಹತೆ:ಮಕ್ಕಳು, ವಯಸ್ಕರರು, ಪುರುಷರು ಮತ್ತು ಮಹಿಳೆಯರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಕನಿಷ್ಠ ಪ್ರವೇಶ ವಯಸ್ಸು 90 ದಿನಗಳು. ಗರಿಷ್ಠ ವಯಸ್ಸು 65 ವರ್ಷಗಳು. ಪಾಲಿಸಿ ಪಾವತಿಗೆ ಗರಿಷ್ಠ ವಯಸ್ಸು 75 ವರ್ಷಗಳು. 5 ವರ್ಷದಿಂದ 16 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬೇಕು. ಕನಿಷ್ಠ ವಿಮಾ ಮೊತ್ತ ರೂ.5 ಲಕ್ಷಗಳು. ವೈಟಿಂಗ್ ಪಿರಿಯಡ್ ಆಯ್ಕೆ ಮಾಡಿದ ಅವಧಿಯನ್ನು ಇದು ಅವಲಂಬಿಸಿದೆ.
ನೀವು ಐದು ವರ್ಷಗಳ ಪ್ರೀಮಿಯಂ ಪಾವತಿ ಅವಧಿಯನ್ನು ಆರಿಸಿದರೆ 5 ವರ್ಷಗಳವರೆಗೆ ಕಾಯಬೇಕು. ಅದೇ 6 ವರ್ಷಗಳನ್ನು ಆಯ್ಕೆ ಮಾಡಿದರೆ 4 ವರ್ಷಗಳು, 7 ವರ್ಷ ಆಯ್ಕೆಯಾದರೆ 3 ವರ್ಷ, 8-16 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯನ್ನು ಆರಿಸಿದರೆ 2 ವರ್ಷಗಳವರೆಗೆ ಕಾಯಬೇಕಿರುತ್ತದೆ. ಕಾಯುವ ಅವಧಿಯ ನಂತರ ನೀವು ವಾರ್ಷಿಕವಾಗಿ ವಿಮಾ ಮೊತ್ತದ ಶೇ.10ರ ದರದಲ್ಲಿ LICಯಿಂದ ಜೀವಮಾನದ ಆದಾಯ ಪಡೆಯಬಹುದು. ನೀವು ಬದುಕಿರುವವರೆಗೆ ಜೀವವಿಮೆ ಬರುತ್ತಲೇ ಇರುತ್ತದೆ.
ನಿಮ್ಮ ಗಮನದಲ್ಲಿರಲಿ:ಪ್ರೀಮಿಯಂ ಮತ್ತು ಕಾಯುವ ಅವಧಿಯ ಪಾವತಿಯ ನಂತರ ಪಾಲಿಸಿದಾರನು ತನ್ನ ಜೀವನದುದ್ದಕ್ಕೂ ಈ ಯೋಜನೆಯ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾನೆ. ಇಲ್ಲಿ ಎರಡು ರೀತಿಯ ಆಯ್ಕೆಗಳಿವೆ. ಒಂದು ನಿಯಮಿತ ಆದಾಯ, ಎರಡನೆಯದು ಫ್ಲೆಕ್ಸಿ.
ನೀವು ನಿಯಮಿತ ಆಯ್ಕೆಯನ್ನು ಆರಿಸಿದರೆ ಪ್ರತಿ ವರ್ಷದ ಕೊನೆಯಲ್ಲಿ ಮೂಲ ಮೊತ್ತದಿಂದ 10 ಪ್ರತಿಶತ ಆದಾಯ ಪಡೆಯುವಿರಿ. ಅದೇ ಆಯ್ಕೆ-2 ಅನ್ನು ಆರಿಸಿದರೆ ವಿಮಾ ಮೊತ್ತದ 10 ಪ್ರತಿಶತವನ್ನು ಬಹುಮಾನವಾಗಿ ನೀಡಲಾಗುತ್ತದೆ. ಈ ಮೊತ್ತವನ್ನು ಎಲ್ಐಸಿಯಲ್ಲಿ ಬಿಟ್ಟರೆ, ಚಕ್ರಬಡ್ಡಿಯು ಶೇಕಡಾ 5.5ರ ದರದಲ್ಲಿ ಸೇರಿಕೊಳ್ಳುತ್ತದೆ.
ಈ ಮೊತ್ತವನ್ನು ಡ್ರಾ ಮಾಡದೆ ಹಾಗೆಯೇ ಬಿಟ್ಟರೆ, ಚಕ್ರಬಡ್ಡಿಯ ಪರಿಣಾಮದ ಅಡಿಯಲ್ಲಿ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಲು ಸಹಾಯವಾಗುತ್ತದೆ. ಬಯಸಿದ್ದಲ್ಲಿ ಠೇವಣಿ ಮಾಡಿದ ಮೊತ್ತದ 75 ಪ್ರತಿಶತವನ್ನು ಹಿಂಪಡೆಯಬಹುದು. ಉಳಿದ ಮೊತ್ತಕ್ಕೆ ಬಡ್ಡಿ ಸಿಗುತ್ತದೆ. ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಸಂಚಿತ ಮೊತ್ತ ಮತ್ತು ಮರಣದ ನಂತರ ಈ ಪ್ರಯೋಜನಗಳನ್ನು ನಾಮಿನಿಗೆ ಪಾವತಿಸಲಾಗುತ್ತದೆ.