ಕರ್ನಾಟಕ

karnataka

ETV Bharat / business

LIC ಐಪಿಒ ಬಿಡ್ಡಿಂಗ್​: ಮೊದಲ ದಿನವೇ ಶೇ.67 ರಷ್ಟು ಹೂಡಿಕೆ - ಎಲ್​ಐಸಿಯ ಐಪಿಒ ಮಾರಾಟಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ

ಎಲ್​ಐಸಿ ಐಪಿಒ ಮಾರಾಟಕ್ಕೆ ಎರಡು ದಿನ ನಿಗದಿ ಮಾಡಿದ್ದರೂ ಮಾರಾಟದ ಮೊದಲ ದಿನವೇ ಶೇ.67 ರಷ್ಟು ಹೂಡಿಕೆಯಾಗಿದೆ. ಈ ಮೂಲಕ ಎಲ್​ಐಸಿಯ ಸಾರ್ವಜನಿಕ ಕೊಡುಗೆ ಭರ್ಜರಿಯಾಗಿಯೇ ಆರಂಭವಾಗಿದೆ.

lic-ipo-subscribed
ಎಲ್​ಐಸಿ ಐಪಿಒ ಬಿಡ್ಡಿಂಗ್​

By

Published : May 4, 2022, 9:36 PM IST

ನವದೆಹಲಿ:ಬಹುನಿರೀಕ್ಷಿತ ಎಲ್​ಐಸಿ ಐಪಿಒ ಮಾರಾಟದ ಮೊದಲ ದಿನವೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಜೆ 7 ಗಂಟೆಯ ವೇಳೆಗೆ ಹೂಡಿಕೆದಾರರು ಮಾರಾಟಕ್ಕಿರುವ 16,20,78,067 ಈಕ್ವಿಟಿ ಷೇರುಗಳಲ್ಲಿ 10,86,91,770 ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅಂದರೆ ಇದು ಶೇ.67ರಷ್ಟು ಹೂಡಿಕೆ ಮಾಡಿದಂತಾಗಿದೆ.

ಎಲ್​ಐಸಿ ಐಪಿಒ ಐದು ವಿಭಾಗಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ನೌಕರರು ಮತ್ತು ಪಾಲಿಸಿದಾರರ ಕೋಟಾದಲ್ಲಿನ ಈಕ್ವಿಟಿ ಷೇರು ಸಂಪೂರ್ಣವಾಗಿ ಹೂಡಿಕೆ ಮಾಡಲಾಗಿದೆ. ಚಿಲ್ಲರೆ ಕೋಟಾದಲ್ಲಿ ಶೇಕಡಾ 60 ರಷ್ಟು ಗ್ರಾಹಕರು ಹೂಡಿಕೆ ಮಾಡಿದ್ದರೆ, ಸಾಂಸ್ಥಿಕವಲ್ಲದ ಹೂಡಿಕೆದಾರರ ಕೋಟಾವು ಶೇಕಡಾ 27 ರಷ್ಟು, ಸಾಂಸ್ಥಿಕ ಖರೀದಿದಾರರ ಕೋಟಾದಲ್ಲಿ ಇದುವರೆಗೆ 33 ಪ್ರತಿಶತ ಬಿಡ್‌ ಕಂಡಿದೆ.

ಎಲ್‌ಐಸಿಯ ಐಪಿಒ ಮಾರಾಟ ದೇಶದ ಅತಿದೊಡ್ಡ ಸಾರ್ವಜನಿಕ ಕೊಡುಗೆಯಾಗಿದೆ. ಪಾಲಿಸಿದಾರರ ಕೋಟಾದಲ್ಲಿನ ಈಕ್ವಿಟಿ ಮಾರಾಟ ಐಪಿಒ ಆಫರ್​ ಮುಗಿಯುವ ಒಂದು ದಿನದ ಮುನ್ನವೇ ಭರ್ತಿಯಾಗಿದೆ. ಇದು ನಿಗದಿಗಿಂತಲೂ ಅಧಿಕ ಪ್ರಮಾಣದ ಹೂಡಿಕೆ ಕಂಡು ಬಂದಿದೆ.

ಸಾಂಸ್ಥಿಕವಲ್ಲದ ಹೂಡಿಕೆದಾರರಿಂದ, ಅರ್ಹ ಸಾಂಸ್ಥಿಕ ಖರೀದಿದಾರರು ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ಸಾಂಸ್ಥಿಕವಲ್ಲದ ಹೂಡಿಕೆದಾರರು ಶೇಕಡಾ 0.26 ಚಂದಾದಾರರಾಗಿದ್ದರೆ, ಸಾಂಸ್ಥಿಕ ಖರೀದಿದಾರರು ಶೇ 0.33 ರಷ್ಟು ಹೂಡಿಕೆ ಮಾಡಿದ್ದಾರೆ. ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ಕೋಟಾದಲ್ಲಿ ಮೀಸಲಿಟ್ಟ 6.9 ಕೋಟಿ ಷೇರುಗಳಲ್ಲಿ ಸುಮಾರು 50 ಪ್ರತಿಶತದಷ್ಟು ಹೂಡಿಕೆ ಕಂಡಿದೆ.

ಓದಿ:RBI ರೆಪೊ ದರ ಏರಿಕೆ: ಗೃಹ ಸಾಲ, ಕಾರುಗಳ EMI ಹೊರೆ ಹೆಚ್ಚಳ.. ಎಫ್​ಡಿ ಹೂಡಿಕೆದಾರರಿಗೆ ಅಚ್ಛೇ ದಿನ್​!

ABOUT THE AUTHOR

...view details