ನವದೆಹಲಿ:ದೇಶದ ಅತ್ಯಂತ ದೊಡ್ಡದಾದ ಎಲ್‌ಐಸಿ ಐಪಿಒ ಪ್ರಕ್ರಿಯೆ ನಡೆಯುತ್ತಿದೆ. ಎಲ್‌ಐಸಿ ಐಪಿಒದ ಚಿಲ್ಲರೆ ವಿಭಾಗವು ಮೂರನೇ ದಿನದ ಬಿಡ್ಡಿಂಗ್‌ನ ಮೊದಲ ಗಂಟೆಯಲ್ಲಿ ಪೂರ್ಣಗೊಂಡಿದೆ. ಶುಕ್ರವಾರ ಬೆಳಗ್ಗೆ 11:36ಕ್ಕೆ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿನ ಮಾಹಿತಿಯ ಪ್ರಕಾರ, ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ (Retail Individual Investor -RII) ವಿಭಾಗಕ್ಕೆ 6.9 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು. ಆದರೆ, ಈಗ ಅದು 7.2 ಕೋಟಿ ಬಿಡ್ ಗಳಿಸಿದೆ. ಅಂದರೆ ಅದು ಸಂಪೂರ್ಣವಾಗಿ ಚಂದಾದಾರಿಕೆಯಾಗಿದೆ.
ಅರ್ಹ ಸಾಂಸ್ಥಿಕ ಖರೀದಿದಾರ (Qualified Institutional Buyer-QIB) ಮತ್ತು ಸಾಂಸ್ಥಿಕವಲ್ಲದ ಹೂಡಿಕೆದಾರರ (Non-Institutional Investor-NII) ವಿಭಾಗವು ನೀರಸ ಪ್ರತಿಕ್ರಿಯೆ ಪಡೆಯುತ್ತಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರ ಭಾಗವು ಶೇಕಡಾ 50ರಷ್ಟು ಚಂದಾದಾರಿಕೆ ಪಡೆದುಕೊಂಡಿದ್ದರೆ, ಅರ್ಹ ಸಾಂಸ್ಥಿಕ ಖರೀದಿದಾರ ವಿಭಾಗವು ಇನ್ನೂ ಶೇಕಡಾ 40ರಷ್ಟು ಖಾಲಿಯಿದೆ.
ಪಾಲಿಸಿದಾರರ ಭಾಗವು ಮೂರು ಪಟ್ಟು ಹೆಚ್ಚು ಚಂದಾದಾರರಾಗಿದ್ದರೆ, ಕಾಯ್ದಿರಿಸಿದ ಉದ್ಯೋಗಿಗಳ ವಿಭಾಗವು ಸುಮಾರು ಎರಡೂವರೆ ಪಟ್ಟು ಹೆಚ್ಚು ಚಂದಾದಾರಿಕೆಯಾಗಿದೆ. ಒಟ್ಟಾರೆಯಾಗಿ, ಐಪಿಒದಲ್ಲಿ 16,20,78,067 ಷೇರುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗಾಗಲೇ 17,98,42,980 ಬಿಡ್‌ಗಳನ್ನು ಸ್ವೀಕರಿಸಿರುವುದರಿಂದ ಸಂಪೂರ್ಣ ಚಂದಾದಾರಿಕೆ ಪಡೆದಿದೆ. ಎಲ್‌ಐಸಿ ಐಪಿಒ ಮೇ 9ರಂದು ಮುಕ್ತಾಯಗೊಳ್ಳಲಿದೆ. ವಿಮಾ ಭೀಮ್‌ನಲ್ಲಿ ತನ್ನ ಶೇಕಡಾ 3.5ರಷ್ಟು ಪಾಲನ್ನು ಹಂಚುವ ಮೂಲಕ ಸುಮಾರು 21,000 ಕೋಟಿ ರೂಪಾಯಿಗಳನ್ನು ಗಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.