ಕರ್ನಾಟಕ

karnataka

ETV Bharat / business

ಎಲ್​ಐಸಿ ಐಪಿಒ ಮಾರಾಟ ಮುಕ್ತಾಯ : ಗ್ರಾಹಕರಿಂದ ಭಾರಿ ಬೇಡಿಕೆ, ದುಪ್ಪಟ್ಟು ಹೂಡಿಕೆ

ಎಲ್​ಐಸಿ ಐಪಿಒ ಮಾರಾಟಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಪನಿ ನಿಗದಿಪಡಿಸಿದ ಷೇರುಗಳಿಗಿಂತಲೂ ದುಪ್ಪಟ್ಟು ಹೂಡಿಕೆಯಾಗಿದೆ. ಇದು ಸರ್ಕಾರ 21 ಸಾವಿರ ಕೋಟಿ ಸಂಗ್ರಹಿಸುವ ಗುರಿಗೆ ಇಂಬು ನೀಡಿದೆ..

lic-ipo-qib
ಎಲ್​ಐಸಿ ಐಪಿಒ ಮಾರಾಟ

By

Published : May 9, 2022, 3:21 PM IST

ನವದೆಹಲಿ :ಭಾರೀ ಬೇಡಿಕೆ ಸೃಷ್ಟಿಸಿದ ಎಲ್​ಐಸಿ ಐಪಿಒ ಮಾರಾಟದಲ್ಲಿ ಅರ್ಹ ಸಾಂಸ್ಥಿಕ ಖರೀದಿದಾರರ(ಕ್ಯೂಐಬಿ) ಕಾಯ್ದಿರಿಸಿದ ಷೇರುಗಳು ಸಂಪೂರ್ಣವಾಗಿ ಹೂಡಿಕೆಯಾಗಿವೆ. ಅಲ್ಲದೇ ಇದು ನಿಗದಿಪಡಿಸಿದ ಗುರಿಗಿಂತಲೂ 2 ಪಟ್ಟು ಹೆಚ್ಚಿನ ಹೂಡಿಕೆ ಕಂಡಿದೆ. 3,95,31,236 ಕ್ಯೂಐಬಿ ಷೇರುಗಳಿಗಿಂತಲೂ ಹೆಚ್ಚಾಗಿ 4,61,62,185 ಬಿಡ್‌ಗಳು ಬಂದಿವೆ. ಇದು ಶೇ.1.17 ಪಟ್ಟು ಹೆಚ್ಚಿನ ಚಂದಾದಾರಿಕೆಯಾಗಿದೆ.

ಇದಲ್ಲದೇ, ಸಾಂಸ್ಥಿಕವಲ್ಲದ ಹೂಡಿಕೆದಾರರ ಷೇರುಗಳ ಮೇಲೆ ಶೇ.1.38ರಷ್ಟು ಹೂಡಿಕೆಯಾದರೆ, ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ವಿಭಾಗಕ್ಕೆ ಮೀಸಲಿಟ್ಟ 6.9 ಕೋಟಿ ಷೇರುಗಳಿಗೆ ಬದಲಾಗಿ 11.89 ಕೋಟಿ ಷೇರುಗಳು ಹೂಡಿಕೆಯಾಗಿವೆ. ಇದೂ ಕೂಡ ಶೇ.1.72 ಪಟ್ಟು ಅಧಿಕ ಚಂದಾದಾರಿಕೆಯಾಗಿದೆ.

ಪಾಲಿಸಿದಾರರ ವಿಭಾಗದಲ್ಲಿ ಶೇ.5.39 ಹೂಡಿಕೆ ಕಂಡರೆ, ನೌಕರರ ವಿಭಾಗದಲ್ಲಿ ಶೇ.4ರಷ್ಟಾಗಿದೆ. ಒಟ್ಟಾರೆಯಾಗಿ ಎಲ್​ಐಸಿ ಐಪಿಒ ಮಾರಾಟಕ್ಕೆ ನಿಗದಿ ಮಾಡಿದ ಮಾರಾಟದ ಷೇರುಗಳ ಮೇಲೆ ಶೇ.2.05 ಪಟ್ಟು ಹೆಚ್ಚಿನ ಹೂಡಿಕೆಯಾಗಿರುವುದು ಇದರ ಬೇಡಿಕೆಯನ್ನು ತೋರಿಸುತ್ತದೆ.

ಎಲ್​ಐಸಿ ಕಂಪನಿ 16,20,78,067 ಪ್ರಮಾಣದ ಐಪಿಒ ಮಾರಾಟಕ್ಕೆ ಇಡಲಾಗಿತ್ತು. 3 ದಿನಗಳಲ್ಲಿ ಗ್ರಾಹಕರಿಂದ 33,19,04,280 ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಎಲ್‌ಐಸಿ ಪ್ರತಿ ಈಕ್ವಿಟಿ ಷೇರಿನ ಬೆಲೆಯನ್ನು 902 ರಿಂದ 949ಕ್ಕೆ ನಿಗದಿಪಡಿಸಿತ್ತು. ಈ ಮೂಲಕ ಸರ್ಕಾರ ಸುಮಾರು 21 ಸಾವಿರ ಕೋಟಿ ರೂಪಾಯಿಗಳನ್ನು ಗಳಿಸುವ ಗುರಿಯನ್ನು ಹೊಂದಿದೆ.

ಓದಿ:ಸಾವಿನ ಬಗ್ಗೆ ಕುತೂಹಲಕಾರಿ ಟ್ವೀಟ್​ ಮಾಡಿದ ಟೆಸ್ಲಾ ಸಿಇಒ ಎಲೋನ್​ ಮಸ್ಕ್​

ABOUT THE AUTHOR

...view details