ಕರ್ನಾಟಕ

karnataka

ETV Bharat / business

ಶೀಘ್ರ ಮಾರುಕಟ್ಟೆಗೆ ಎಲ್​​ಐಸಿ ಐಪಿಒ: 902 ರಿಂದ 949 ರೂ ದರ ನಿಗದಿ ಸಾಧ್ಯತೆ! - ಎಲ್​​​​ಐಸಿಯ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಸಿದ್ಧ

ಬಹುನಿರೀಕ್ಷಿತ ಐಪಿಒ ಮೇ ರಿಂದ ಗ್ರಾಹಕರಿಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮೇ 9 ರವರೆಗೆ ಗ್ರಾಹಕರು ಎಲ್​ಐಪಿ ಐಪಿಒದ ಚಂದಾದಾರಿಕೆ ಪಡೆಯಬಹುದು ಎಂದು ತಿಳಿದು ಬಂದಿದೆ.

LIC IPO: Price band fixed at Rs 902-949, Rs 60 discount for policyholders
ಶೀಘ್ರ ಮಾರುಕಟ್ಟೆಗೆ ಎಲ್​​ಐಸಿ ಐಪಿಒ: 902 ರಿಂದ 949 ರೂ ದರ ನಿಗದಿ ಸಾಧ್ಯತೆ

By

Published : Apr 27, 2022, 6:46 AM IST

ನವದೆಹಲಿ:ಎಲ್​​​​ಐಸಿಯ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಸಿದ್ಧವಾಗಿದೆ. ಬಹುತೇಕ ಐಪಿಒ ಬೆಲೆ ಸುಮಾರು ಅಂದಾಜು 902 ರಿಂದ 949 ರೂ.ಗಳ ನಡುವೆ ನಿಗದಿ ಆಗುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ವಿಶೇಷ ಎಂದರೆ, ಎಲ್​ಐಸಿ ಪಾಲಿಸಿದಾರರಿಗೆ 60 ರೂಪಾಯಿ ರಿಯಾಯಿತಿ ಸಿಗಲಿದೆ. ಇನ್ನು ಚಿಲ್ಲರೆ ಹೂಡಿಕೆದಾರರಿಗೆ 45 ರೂಪಾಯಿ ರಿಯಾಯಿತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಹುನಿರೀಕ್ಷಿತ ಐಪಿಒ ಮೇ 4 ರಿಂದ ಗ್ರಾಹಕರಿಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಮೇ 9 ರವರೆಗೆ ಗ್ರಾಹಕರು ಎಲ್​ಐಪಿ ಐಪಿಒದ ಚಂದಾದಾರಿಕೆ ಪಡೆಯಬಹುದು ಎಂದು ತಿಳಿದು ಬಂದಿದೆ. ಸೋಮವಾರ, ಮಾರುಕಟ್ಟೆಗಳ ನಿಯಂತ್ರಕ SEBI ನವೀಕರಿಸಿದ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗೆ ತನ್ನ ಒಪ್ಪಿಗೆ ನೀಡಿದೆ, ಇದು ಹಿಂದಿನ ಕರಡು ಪ್ರತಿಗಳಲ್ಲಿ ಉಲ್ಲೇಖಿಸಲಾದ 5 ಪ್ರತಿಶತದ ಬದಲಿಗೆ 3.5 ಶೇಕಡಾ ಪಾಲನ್ನು ಸರ್ಕಾರ ಪಟ್ಟಿ ಮಾಡಿದೆ.

ಎಲ್​​​ಐಸಿ ಐಪಿಒ ಮೌಲ್ಯ ಸುಮಾರು 6 ಲಕ್ಷ ರೂಪಾಯಿಗಳಾಗಿದ್ದು, ಸುಮಾರು 21 ಸಾವಿರ ಕೋಟಿ ರೂಪಾಯಿಗಳ ಮಾಪ್​​ - ಅಪ್​ ಇರಲಿದೆ. ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಅತಿದೊಡ್ಡ ಐಪಿಒ ಇದಾಗಿದೆ. ಪಿಂಚಣಿ ಮತ್ತು ಸಾರ್ವಭೌಮ ನಿಧಿಯಿಂದ ಹೆಚ್ಚಿನ ಪಾಲನ್ನು ಪಡೆಯಲು ಸರ್ಕಾರವು ನಿರ್ಧಾರ ಮಾಡಿದೆ.
ಇದನ್ನು ಓದಿ:ನೀವು ಡಿಜಿಟಲ್​ ಪಾವತಿಯನ್ನೇ ಅವಲಂಬಿಸಿದ್ದೀರಾ? ಈ ಎಚ್ಚರಿಕೆಗಳನ್ನು ಕಡ್ಡಾಯ ಪಾಲಿಸಿ..

For All Latest Updates

TAGGED:

ABOUT THE AUTHOR

...view details