ಹೈದರಾಬಾದ್: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಅದೆಂತಹ ತೊಂದರೆಗಳು ಎದುರಾದರೂ, ಅದೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಸಾಗುತ್ತಿದ್ದಾರೆ. ಹೀಗೊಂದು ಉದಾಹರಣೆಯಾಗಿ ಪಾರ್ಲೆ ಆಗ್ರೋದ ಸಿಇಒ ಸೌನಾ ಚೌಹಾಣ್ ಅವರಿದ್ದಾರೆ.
"ನಾವೇನು ಮಾಡುತ್ತಿದ್ದೇವೆ ಅಥವಾ ನಾವೇನು ಮಾಡಬೇಕು ಎಂಬ ಸ್ಪಷ್ಟತೆ ನಮಗಿರಬೇಕು. ಹೀಗಿರುವಾಗಿ ಗುರಿ ಎಷ್ಟೇ ಕಠಿಣವಾಗಿದ್ದರೂ ಅದನ್ನು ಛಲದಿಂದ ಸಾಧಿಸಬಹುದು. ನಾನು 22 ನೇ ವಯಸ್ಸಿನಲ್ಲಿ ಪಾರ್ಲೆ ಆಗ್ರೋ ಕಂಪನಿಗೆ ನಿರ್ದೇಶಕಳಾಗಿ ಸೇರಿಕೊಂಡೆ. ಬಳಿಕ 2006ರಲ್ಲಿ ಕಂಪನಿಯ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡೆ.
ಆಗ ನನಗಿದ್ದ ಸವಾಲುಗಳು ಅನೇಕ. ನನ್ನ ತಂದೆಯಿಂದ ಕಂಪನಿ ಅಧಿಕಾರ ವಹಿಸಿಕೊಳ್ಳುವ ಸಮಯಕ್ಕೆ 600 ಕೋಟಿ ವಹಿವಾಟು ಸಾಧಿಸಿತ್ತು. ಮುಂದೆಯೂ ಇದಕ್ಕಿಂತ ಚೆನ್ನಾಗಿ ನಡೆಸಿಕೊಂಡು ಹೋಗಬೇಕು ಎಂಬ ಜವಾಬ್ದಾರಿ ನನ್ನಲ್ಲಿತ್ತು. ಎಲ್ಲವೂ ಬದಲಾಗುತ್ತಿರಬಹುದು. ಆದರೆ, ಹಿರಿಯರು ಹಾಕಿಕೊಟ್ಟ ತತ್ತ್ವ ಅಥವಾ ಮಾರ್ಗದರ್ಶನ ಏನಿದೆಯೂ ಅದನ್ನು ಮರೆಯಬಾರದು. ಆ ದಿಕ್ಕಿನೆಡೆಗೆ ನನ್ನ ಹೆಜ್ಜೆಯನ್ನಿಟ್ಟೆ."