ನವದೆಹಲಿ:ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಭಾರತ ಮೂಲದ ಲಾವಾ ದೇಶವಾಸಿಗಳಿಗೆ ಅಗ್ಗದ ಬೆಲೆಯ 5ಜಿ ಬ್ಲೇಜ್ ಮೊಬೈಲ್ ಅನ್ನು ಪರಿಚಯಿಸಿದೆ. ಮೀಡಿಯಾ ಟೆಕ್ 5ಜಿ ಚಿಪ್ ಹೊಂದಿರುವ ಗುಣಮಟ್ಟದ ಮತ್ತು ಕೈಗೆಟುವ ದರದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕಳೆದ ತಿಂಗಳು ನಡೆದ ಕಾರ್ಯಕ್ರಮದಲ್ಲಿ ದೇಶದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಹೊಸ ಮಾದರಿಯ 5ಜಿ ಮೊಬೈಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಲಾವಾ, ಅದರಂತೆ ಬ್ಲೇಜ್ 5ಜಿ ಮೊಬೈಲ್ ಗ್ರಾಹಕರಿಗೆ ಮುಕ್ತ ಮಾಡಿದೆ.
ಮೊಬೈಲ್ನ ಬೆಲೆ, ವೈಶಿಷ್ಟ್ಯಗಳು:Lava Blaze 5G ಬೆಲೆ 9,999 ರೂ.ಗಳಾಗಿದೆ. ಇದು 5 ಜಿ ಮೊಬೈಲ್ಗಳಲ್ಲೇ ಅತಿ ಕಡಿಮೆ ಬೆಲೆಯದ್ದಾಗಿದೆ. 4GB + 128GB ಆಂತರಿಕ ಸಾಮರ್ಥ್ಯವನ್ನು ಇದು ಹೊಂದಿದೆ. ಪ್ರಸ್ತುತ ಒಂದೇ ರೂಪದಲ್ಲಿ ಮೊಬೈಲ್ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತು ಅದರ ಸಾಮರ್ಥ್ಯ ವಿಸ್ತರಿಸುವ ಬಗ್ಗೆ ಕಂಪನಿ ತಿಳಿಸಿದೆ.
ಲಾವಾ ಬ್ಲೇಜ್ 5 ಜಿ ಆಕರ್ಷಕ ವಿನ್ಯಾಸದೊಂದಿಗೆ ರೂಪಿಸಲಾಗಿದ್ದು, ಅಗ್ಗದ ಬೆಲೆ ಕಾರಣ ಗ್ರಾಹಕರ ಗಮನ ಸೆಳೆದಿದೆ. ಸಮತಟ್ಟಾದ ವಿನ್ಯಾಸದಿಂದ ಕೂಡಿರುವ ಬ್ಲೇಜ್ ಪರದೆಯು ವಾಟರ್‌ಡ್ರಾಪ್ ಸೆಕ್ಯೂರಿಟಿ, 90Hz ರಿಫ್ರೆಶ್ ದರವನ್ನು ಇದು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ನಿಂದ ಇದು ಚಾಲಿತವಾಗಿದೆ. 4 GB RAM ಮತ್ತು 128 GB ಆಂತರಿಕ ಸಾಮರ್ಥ್ಯವನ್ನು ಇದು ಹೊಂದಿದೆ. ಆಂತರಿಕ ಮೆಮೊರಿಯೊಂದಿಗೆ ಇದನ್ನು 7 ಜಿಬಿವರೆಗೂ ವಿಸ್ತರಿಸಬಹುದಾಗಿದೆ.