ಸ್ಯಾನ್ ಫ್ರಾನ್ಸಿಸ್ಕೋ :ಪ್ರಸ್ತುತ ದೇಶದಲ್ಲಿ ಸುಮಾರು 65 ಲಕ್ಷ ಚಂದಾದಾರರನ್ನು ಹೊಂದಿರುವ ಸ್ಟ್ರೀಮಿಂಗ್ ದೈತ್ಯ ನೆಟ್ ಫ್ಲಿಕ್ಸ್ ತನ್ನ ಪ್ರಮುಖ ಮಾರುಕಟ್ಟೆಯಾಗಿರುವ ಭಾರತದಲ್ಲಿ ವ್ಯವಹಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ವರದಿಯಾಗಿದೆ. ಭಾರತದಲ್ಲಿ ನೆಟ್ಫ್ಲಿಕ್ಸ್ ನ ನಿಧಾನಗತಿಯ ಬೆಳವಣಿಗೆಗೆ ಮುಖ್ಯವಾಗಿ ಸ್ಥಳೀಯ ಕಂಟೆಂಟ್ (ಲೋಕಲ್ ಕಂಟೆಂಟ್) ಕೊರತೆಯೇ ಕಾರಣ ಎಂದು ಜಾಗತಿಕ ಆಸ್ತಿ ನಿರ್ವಹಣಾ ಸಂಸ್ಥೆ ಅಲಯನ್ಸ್ ಬರ್ನ್ ಸ್ಟೀನ್ ವಿಶ್ಲೇಷಕರನ್ನು ಉಲ್ಲೇಖಿಸಿ ಟೆಕ್ ಕ್ರಂಚ್ ಶುಕ್ರವಾರ ವರದಿ ಮಾಡಿದೆ.
ಭಾರತದಲ್ಲಿ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿರುವ ಕಂಟೆಂಟ್ ಅಥವಾ ವೀಡಿಯೊಗಳ ಪೈಕಿ ಕೇವಲ 12 ರಷ್ಟು ಮಾತ್ರ ಲೋಕಲ್ ಕಂಟೆಂಟ್ ಆಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇದಕ್ಕೆ ಹೋಲಿಸಿದರೆ, ಅಮೆಜಾನ್ ಪ್ರೈಮ್ ವಿಡಿಯೋದ ಸುಮಾರು ಶೇಕಡಾ 60 ರಷ್ಟು ಕಂಟೆಂಟ್ ದೇಶದ ಸ್ಥಳೀಯ ಭಾಷೆಗಳಲ್ಲಿವೆ. ಪ್ರೈಮ್ ವಿಡಿಯೋ ಭಾರತದಲ್ಲಿ ಸುಮಾರು 2 ಕೋಟಿ ಚಂದಾದಾರರನ್ನು ಹೊಂದಿದೆ ಮತ್ತು ಡಿಸ್ನಿ + ಹಾಟ್ಸ್ಟಾರ್ 40 ದಶಲಕ್ಷಕ್ಕೂ ಹೆಚ್ಚು ಚಂದಾದಾರರೊಂದಿಗೆ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರಿಸಿದೆ ಎಂದು ವರದಿ ತಿಳಿಸಿದೆ.
ಹಾಲಿವುಡ್ ಮುಷ್ಕರದ ಸಮಯದಲ್ಲಿ ಕಳೆದುಹೋದ ಆದಾಯವನ್ನು ಸರಿದೂಗಿಸಲು ಸ್ಟ್ರೀಮಿಂಗ್ ದೈತ್ಯ ನೆಟ್ ಫ್ಲಿಕ್ಸ್ ತನ್ನ ಸ್ಟ್ರೀಮಿಂಗ್ ಸೇವೆಯ ಬೆಲೆಯನ್ನು ಮತ್ತೆ ಹೆಚ್ಚಿಸಲು ಯೋಜಿಸುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.