ಬೆಂಗಳೂರು: ಭಾರತದ ಅತಿದೊಡ್ಡ ಪೂರೈಕೆಯ ಹಣಕಾಸಿನ ಪ್ಲಾಟ್ಫಾರ್ಮ್ ಆಗಿರುವ ಕ್ರೆಡ್ಎಕ್ಸ್ ಇದೀಗ ತನ್ನ 7ನೇ ಆವೃತ್ತಿಯ ಕ್ರೆಡ್ ಎಕ್ಸ್ ಮುಹೂರ್ತ ಟ್ರೇಡಿಂಗ್ ಅನ್ನು ಘೋಷಿಸಿದೆ. ಇದು ಭಾರತದ ಅತಿ ದೊಡ್ಡ ಇನ್ವಾಯ್ಸ್ ರಿಯಾಯಿತಿ ಮತ್ತು ಪರ್ಯಾಯ ಹೂಡಿಕೆ ಕಾರ್ಯಕ್ರಮ ಆಗಿದ್ದು, ಇದೆ ನವೆಂಬರ್ 7ರಂದು ಚಾಲನೆ ಪಡೆಯಲಿದೆ.
ಕ್ರೆಡ್ಎಕ್ಸ್ನ ಈ ಕಾರ್ಯಕ್ರಮವು ಹೂಡಿಕೆದಾರರು ಮತ್ತು ಉದ್ಯಮಿಗಳಿಬ್ಬರಿಗೂ ಉತ್ತಮ ಅವಕಾಶವಾಗಿದೆ. ಇಲ್ಲಿ ಹೂಡಿಕೆದಾರರು ಆಕರ್ಷಣೀಯ ರಿಟರ್ನ್ಸ್ ಮತ್ತು ಪ್ರಿಮಿಯಂ ರಿವಾರ್ಡ್ ಅನ್ನು ಪಡೆಯಬಹುದಾಗಿದೆ. ಜೊತೆಗೆ ಪಾವತಿಸದ ಇನ್‌ವಾಯ್ಸ್‌ಗಳನ್ನು ಸೆಕೆಂಡುಗಳಲ್ಲಿ ಮಾರಾಟ ಮಾಡುವ ಮೂಲಕ ಕಾರ್ಯನಿರತ ಬಂಡವಾಳವನ್ನು ತ್ವರಿತವಾಗಿ ಪಡೆದುಕೊಳ್ಳಬಹುದು. ಕ್ರೆಡ್ ಎಕ್ಸ್ ಮುಹೂರ್ತ ಟ್ರೇಡಿಂಗ್ 2022ರ ಕಾರ್ಯಕ್ರಮದಲ್ಲಿ 1,500ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿಯಾಗಿದ್ದು, 20 ಸಾವಿರ ಇನ್ವಾಯ್ಸ್ಗಳ ಒಟ್ಟಿ ಮಾಡಲಾಗಿತ್ತು. ಇವರು ಒಂದೇ ದಿನದಲ್ಲಿ ರಿಯಾಯಿತಿ ಪಡೆದು, 500ಕ್ಕೂ ಹೆಚ್ಚು ಉದ್ಯಮಿಗಳು ತ್ವರಿತ ಬಂಡಾವಳ ಉತ್ಪಾದಿಸಿದರು. ಇದೊಂದು ಆನ್ಲೈನ್ ಕಾರ್ಯಕ್ರಮವಾಗಿದ್ದು, ಇನ್ವಾಯ್ಸ್ಗಳ ಶೀಘ್ರ ಮಾರಾಟ ನಡೆಸುವ ಭರವಸೆ ನೀಡಿದೆ. ಎಷ್ಟು ವೇಗ ಎಂದರೆ 45 ಸೆಕೆಂಡ್ನಲ್ಲಿ ಉದ್ದಿಮೆ ನಡೆಸಬಹುದಾಗಿದೆ.
ಇತ್ತೀಚಿಗೆ ಹೂಡಿಕೆಯ ಪ್ರವೃತ್ತಿಯಲ್ಲಿ ಬದಲಾವಣೆ ಕಾಣುತ್ತಿದ್ದು, ಪರ್ಯಾಯ ಹೂಡಿಕೆಗೆ ಗಮನಾರ್ಹವಾಗಿದೆ. ಎಚ್ಎನ್ಐಗಳು ಪ್ರಗತಿ ಕಾಣುತ್ತಿದ್ದು, ಪರ್ಯಾಯ ಹಣಕಾಸು ಮಾರ್ಗಗಳನ್ನು ಹುಡುಕಲಾಗುತ್ತಿದೆ. ಇದು ಸುಲಭದಾಯಕವಾಗಿದ್ದು, ಪಾರದರ್ಶಕತೆ ಮತ್ತು ಶೀಘ್ರ ರಿಟರ್ನ್ಗಳನ್ನು ಹೊಂದಿದೆ. ಕ್ರೆಡ್ ಎಕ್ಸ್ ನಡೆಸಿದ ಸಂಶೋಧನೆ ಆಧಾರದ ಮೇಲೆ ಕಡಿಮೆ ಅವಧಿಯ ಪರ್ಯಾಯ ಹೂಡಿಕೆಗಳು ವಿಶೇಷವಾಗಿ ಇನ್ವಾಯ್ಸ್ ರಿಯಾಯಿತಿಗಳು ಚಿಲ್ಲರೆ ಹೂಡಿಕೆ ಸೆಗ್ಮೆಂಟ್ನಲ್ಲಿ ಶೇ 44ರಷ್ಟು ಹೆಚ್ಚಾಗಿದೆ. 2023ರಲ್ಲೇ ಇದು ಎರಡು ಪಟ್ಟು ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ.