ಮುಂಬೈ:ಮಕ್ಕಳ ತ್ವಚೆಗೆ ಮುದ ನೀಡಲಿ ಎಂದು ಬಳಸುವ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್ನ ಉತ್ಪಾದನೆಗೆ ನೀಡಿದ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಇಲಾಖೆ ರದ್ದು ಮಾಡಿದೆ. ಇದಕ್ಕೆ ಕಾರಣ ಜಾನ್ಸನ್ ಅಂಡ್ ಜಾನ್ಸನ್ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ಕಂಪನಿಯ ಪೌಡರ್ ಅನ್ನು ಪ್ರಯೋಗಾಲಯಲ್ಲಿ ನಡೆಸಿದ ಪರೀಕ್ಷೆಯ ವೇಳೆ ಪಿಎಚ್ ಮಾನದಂಡ ನಿಗದಿಗಿಂತಲೂ ಕಡಿಮೆ ಇರುವುದು ಕಂಡು ಬಂದಿದೆ. ಕೋಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ ಈ ವರದಿ ನೀಡಿದೆ.