ನವದೆಹಲಿ: ಭಾರತದಲ್ಲಿ ಇಂಟರ್ನೆಟ್ ಕ್ರಾಂತಿ ಮಾಡಿ, ಕರೆಗಳ ದರವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿದ ಶ್ರಯಸ್ಸು ಜಿಯೋಗೆ ದೊರೆಯುತ್ತದೆ. ಈಗ ಮತ್ತೊಂದು ಕ್ರಾಂತಿಗೆ ಜಿಯೋ ಮುಂದಾಗಿದೆ. ರಿಲಯನ್ಸ್ ಜಿಯೋ ಸೋಮವಾರ ಭಾರತದ ಅತ್ಯಂತ ಕೈಗೆಟುಕುವ ದರ 4G ಫೋನ್ 'Jio Bharat V2' ಅನ್ನು ಕೇವಲ 999 ರೂಗಳಲ್ಲಿ ಬಿಡುಗಡೆ ಮಾಡಿದೆ. ಇದು ದೇಶದಲ್ಲಿ 4 ಜಿ ಇಂಟರ್ನೆಟ್-ಸಕ್ರಿಯಗೊಳಿಸಿದ ಅತ್ಯಂತ ಕಡಿಮೆ ದರದ ಫೋನ್ ಆಗಿದೆ.
ಹೊಸ 'ಜಿಯೋ ಭಾರತ್' ಸ್ಮಾರ್ಟ್‌ಫೋನ್ ಅಸ್ತಿತ್ವದಲ್ಲಿರುವ 250 ಮಿಲಿಯನ್ ಫೀಚರ್ ಫೋನ್ (2G) ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಮೂಲಕ 4ಜಿ ಇಂಟರ್ನೆಟ್ ಒದಗಿಸುವ ಯೋಜನೆ ಆಗಿದೆ. ಜಿಯೋ ಭಾರತ ವಿ2 ಪ್ರವೇಶ ಮಟ್ಟದ ಫೋನ್‌ಗಳಲ್ಲಿ ಇಂಟರ್ನೆಟ್-ಸಕ್ರಿಯಗೊಳಿಸುವ ಮೂಲಕ ಫೋರ್ ಜಿ ಸೇವೆಗಳನ್ನು ನೀಡಲಿದೆ. 1 ಮಿಲಿಯನ್ ಜಿಯೋ ಭಾರತ್ ಫೋನ್‌ಗಳ ಬೀಟಾ ಪ್ರಯೋಗವು ಜುಲೈ 7 ರಿಂದ ದೇಶದಲ್ಲಿ ಪ್ರಾರಂಭವಾಗಲಿದೆ.
"ಭಾರತದಲ್ಲಿ ಇನ್ನೂ 250 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರು 2G ಫೋನ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಹೀಗೆ 2 ಜಿಯಲ್ಲಿ 'ಬಂಧಿ'ಯಾಗಿರುವ ಬಳಕೆದಾರರನ್ನು ತನ್ನತ್ತ ಸೆಳೆದು ಜಿಯೋ 4 ಜಿ ಸೇವೆ ನೀಡಲು ಮುಂದಾಗಿದೆ. ಜಗತ್ತು ಈಗ 5G ಕ್ರಾಂತಿಯ ತುದಿಯಲ್ಲಿ ನಿಂತಿದೆ. ಈ ಸಮಯದಲ್ಲಿ ಇಂಟರ್ನೆಟ್‌ನ ಮೂಲಭೂತ ವೈಶಿಷ್ಟ್ಯಗಳನ್ನು ಒದಗಿಸಲು ಜಿಯೋ ಮುಂದಾಗಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.