ಕರ್ನಾಟಕ

karnataka

ETV Bharat / business

ಐಟಿ ಷೇರುಗಳ ಮೌಲ್ಯ ಕುಸಿತ: ಅಲ್ಪ ಏರಿಕೆ ಕಂಡ ಬಿಎಸ್​ಇ, ನಿಫ್ಟಿ - ಬೆಂಚ್ ಮಾರ್ಕ್ ಷೇರು

ಭಾರತೀಯ ಷೇರು ಮಾರುಕಟ್ಟೆಗಳು ಬುಧವಾರ ಅಲ್ಪ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ.

IT stocks fall in value BSE Nifty rise marginally
IT stocks fall in value BSE Nifty rise marginally

By ETV Bharat Karnataka Team

Published : Dec 13, 2023, 7:42 PM IST

ಮುಂಬೈ : ಮಾಹಿತಿ ತಂತ್ರಜ್ಞಾನ (ಐಟಿ) ಷೇರುಗಳ ಮಾರಾಟದ ಮಧ್ಯೆ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರ ಅಲ್ಪ ಏರಿಕೆಯೊಂದಿಗೆ ವಹಿವಾಟು ಮುಗಿಸಿದವು. ಬುಧವಾರ ಬಿಎಸ್ಇ ಸೆನ್ಸೆಕ್ಸ್ 33.57 ಪಾಯಿಂಟ್ಸ್ ಏರಿಕೆಯಾಗಿ 69,584.60 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ-50 19.95 ಪಾಯಿಂಟ್ಸ್ ಏರಿಕೆಯಾಗಿ 20,926.35 ಕ್ಕೆ ತಲುಪಿದೆ. ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಬೆಂಚ್ ಮಾರ್ಕ್ ಸೂಚ್ಯಂಕಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದವು.

ನಿಫ್ಟಿ ಆಟೋ, ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ರಿಯಾಲ್ಟಿ ಶೇಕಡಾ 1 ಕ್ಕಿಂತ ಹೆಚ್ಚು ಲಾಭ ಗಳಿಸಿದವು. ಆದಾಗ್ಯೂ, ನಿಫ್ಟಿ ಐಟಿ ಶೇಕಡಾ 1.28 ರಷ್ಟು ಕುಸಿಯಿತು ಮತ್ತು ವಲಯ ಸೂಚ್ಯಂಕಗಳಲ್ಲಿ ಅಗ್ರ ನಷ್ಟ ಅನುಭವಿಸಿತು. ನಿಫ್ಟಿ-50 ಯಲ್ಲಿ ಎನ್​ಟಿಪಿಸಿ, ಅದಾನಿ ಪೋರ್ಟ್ಸ್, ಹೀರೋ ಮೋಟೊಕಾರ್ಪ್, ಪವರ್ ಗ್ರಿಡ್ ಮತ್ತು ಐಷರ್ ಮೋಟಾರ್ಸ್ ಲಾಭ ಗಳಿಸಿದ ಪ್ರಮುಖ ಐದು ಷೇರುಗಳಾಗಿವೆ. ಮತ್ತೊಂದೆಡೆ, ಟಿಸಿಎಸ್, ಇನ್ಫೋಸಿಸ್, ಎಚ್​ಡಿಎಫ್​ಸಿ ಲೈಫ್, ಆಕ್ಸಿಸ್ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ಹೆಚ್ಚುತ್ತಿರುವ ಚಿಲ್ಲರೆ ಹಣದುಬ್ಬರ ಮತ್ತು ಅಮೆರಿಕ ಫೆಡರಲ್ ರಿಸರ್ವ್ ನೀತಿ ನಿರ್ಧಾರದ ಬಗ್ಗೆ ಕಡಿಮೆ ಆಶಾವಾದದ ಕಾರಣದಿಂದ ಐಟಿ ಷೇರುಗಳು ತೀವ್ರವಾಗಿ ಕುಸಿದವು.

ರೂಪಾಯಿ ಕುಸಿತ: ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿ ಬಲಶಾಲಿಯಾಗಿರುವ ಮಧ್ಯೆ ಭಾರತದ ರೂಪಾಯಿ ಬುಧವಾರ ಅಮೆರಿಕನ್​ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ 83.41 ಕ್ಕೆ (ತಾತ್ಕಾಲಿಕ) ತಲುಪಿದೆ. ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಭಾರತೀಯ ರೂಪಾಯಿ ಡಾಲರ್ ವಿರುದ್ಧ 83.39 ರಲ್ಲಿ ಪ್ರಾರಂಭವಾಯಿತು ಮತ್ತು 83.38-83.41 ರ ಬಿಗಿಯಾದ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಇದು ಅಂತಿಮವಾಗಿ ತನ್ನ ಜೀವಮಾನದ ಕನಿಷ್ಠ 83.41 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಕುಸಿತವಾಗಿದೆ.

ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕಚ್ಚಾತೈಲ ಬೆಲೆ: ಕಚ್ಚಾ ತೈಲ ಬೆಲೆಗಳು ಬುಧವಾರ ಏರಿಕೆಯಾಗಿವೆ. ಆದರೆ ಹಿಂದಿನ ದಿನ ಶೇಕಡಾ 3 ಕ್ಕಿಂತ ಹೆಚ್ಚು ಕುಸಿತದ ನಂತರ ಕಚ್ಚಾ ತೈಲ ಬೆಲೆ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಹತ್ತಿರದಲ್ಲಿದೆ. ಹೂಡಿಕೆದಾರರು ಅತಿಯಾದ ಪೂರೈಕೆ ಮತ್ತು ಬೇಡಿಕೆ ಕ್ಷೀಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಫೆಬ್ರವರಿಯಲ್ಲಿ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್​ಗೆ 30 ಸೆಂಟ್ಸ್ ಅಥವಾ ಶೇ 0.41 ಏರಿಕೆಯಾಗಿ 73.54 ಡಾಲರ್​ಗೆ ತಲುಪಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್​ ಮೀಡಿಯೇಟ್ ಕ್ರೂಡ್ ಫ್ಯೂಚರ್ಸ್ ಜನವರಿಯಲ್ಲಿ 32 ಸೆಂಟ್ಸ್ ಅಥವಾ ಶೇ 0.47 ಏರಿಕೆಯಾಗಿ ಬ್ಯಾರೆಲ್​ಗೆ 68.93 ಡಾಲರ್​ಗೆ ತಲುಪಿದೆ.

ಇದನ್ನೂ ಓದಿ :160 ಬಿಲಿಯನ್​ ಡಾಲರ್​ಗೆ ಏರಿಕೆಯಾಗಲಿದೆ ಭಾರತದ ಇ - ರಿಟೇಲ್ ಮಾರುಕಟ್ಟೆ

ABOUT THE AUTHOR

...view details