ಕರ್ನಾಟಕ

karnataka

ETV Bharat / business

ಯುದ್ಧದ ನಡುವೆಯೂ ಡಾಲರ್​ ಎದುರು ಜಿಗಿತ ಕಂಡ ಇಸ್ರೇಲ್​​​​ ಕರೆನ್ಸಿ ಮೌಲ್ಯ

Israeli shekel: ಯುದ್ಧ ಆರಂಭವಾದ ವಾರದ ಬಳಿಕ ಮೌಲ್ಯ ತಗ್ಗಿಸಿಕೊಂಡಿದ್ದ ಶಕೆಲ್​ ಇದೀಗ ಮತ್ತೆ ತನ್ನ ಲಯಕ್ಕೆ ಮರಳಿದೆ.

israel-shekel-maintained-its-value-against-the-dollar-during-the-war
israel-shekel-maintained-its-value-against-the-dollar-during-the-war

By ETV Bharat Karnataka Team

Published : Nov 18, 2023, 11:25 AM IST

Updated : Nov 18, 2023, 1:36 PM IST

ಜೇರುಸೆಲಂ: ಹಮಾಸ್​ ವಿರುದ್ಧದ ಯುದ್ಧ ಸಂದರ್ಭದಲ್ಲೂ ಇಸ್ರೇಲ್​​ನ ಕರೆನ್ಸಿಯು​ ಷೇರು ಮಾರುಕಟ್ಟೆಯಲ್ಲಿ ತನ್ನ ಮೌಲ್ಯವನ್ನು ಕಾಯ್ದುಕೊಂಡಿದೆ. ಅಮೆರಿಕದ ಡಾಲರ್​ ಎದುರು ಶಕೆಲ್​ ಅತ್ಯಧಿಕ ಮೌಲ್ಯವನ್ನು ದಾಖಲಿಸುವ ಮೂಲಕ ದಾಖಲೆ ಕಾಯ್ದುಕೊಂಡಿದೆ.

ದೇಶದ ಸೆಂಟ್ರಲ್​ ಬ್ಯಾಂಕ್​ ನೀಡಿರುವ ಅಧಿಕೃತ ದರದ ಅನುಸಾರ, ಗ್ರೀನ್ ಬ್ಯಾಂಕ್ ವಿರುದ್ಧ ಇಸ್ರೇಲಿ ಕರೆನ್ಸಿಯಾದ ಶಕೆಲ್​ ಶುಕ್ರವಾರ ಅಮೆರಿಕದ ಡಾಲರ್​ ಎದುರು ಯುಎಸ್​ ಡಾಲರ್​ ಎದುರು ಶಕೆಲ್​ 3.728 ಮೌಲ್ಯವನ್ನು ಕಾಯ್ದುಕೊಂಡಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಕ್ಟೋಬರ್​ 7ರಂದು ಹಮಾಸ್​ ಪಡೆಗಳು ಇಸ್ರೇಲ್​ ವಿರುದ್ಧ ಅನೀರಿಕ್ಷಿತ ದಾಳಿ ಆರಂಭಿಸಿದವು. ಈ ವೇಳೆ ಇಸ್ರೇಲ್​ ಕರೆನ್ಸಿ ಶಕೆಲ್​ ಕರೆನ್ಸಿ ಮೌಲ್ಯ ಡಾಲರ್​ ಎದುರು 3.863 ಇತ್ತು. ಎರಡು ದೇಶಗಳ ನಡುವೆ ಯುದ್ಧ ಮುಂದುವರೆದ ಬಳಿಕ ಅಂದರೆ ಅಕ್ಟೋಬರ್​ 26ರಂದು ಶಕೆಲ್​ ಮೌಲ್ಯ ಕುಸಿತಗೊಂಡು 4.097ಕ್ಕೆ ನಿಂತಿತ್ತು. 11 ವರ್ಷದಲ್ಲೇ ಶಕೆಲ್​ ಕಡಿಮೆ ಮೌಲ್ಯಕ್ಕೆ ಇಳಿದಿತ್ತು.

ಮತ್ತೆ ಕರೆನ್ಸಿ ಮೌಲ್ಯ ಕಾಪಾಡಿಕೊಂಡ ಇಸ್ರೇಲ್​: ಅಂದಿನಿಂದ ವಾಣಿಜ್ಯ ವಹಿವಾಟು ಮತ್ತೆ ಲಯಕ್ಕೆ ಆರಂಭಿಸಿತು ಇಸ್ರೇಲ್​. ಇಸ್ರೇಲ್​ನ ಆರ್ಥಿಕ ಅಪಾಯ ನಿರ್ವಹಣ ಕಂಪನಿಯ ಸಿಇಒ ಆಫ್​ ಎನರ್ಜಿ ಫೈನಾನ್ಸ್​ ಯೊಸ್ಸಿ ಫ್ರಾಂಕ್​ ಮಾತನಾಡಿ, ಈ ಯುದ್ಧ ಆರಂಭದ ವಾರದ ಬಳಿಕ ಈ ಸಮರವೂ ಗಾಜಾವನ್ನು ಹೊರತುಪಡಿಸಿ, ಉಳಿದ ಕಡೆ ಹರಡುವುದಿಲ್ಲ ಎಂದು ಮಾರುಕಟ್ಟೆಗೆ ಮನವರಿಕೆಯಾಗಯಿತು. ಈ ಹಿನ್ನೆಲೆ ಇಸ್ರೇಲ್​ ತನ್ನ ಕರೆನ್ಸಿ ಮೌಲ್ಯ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ ಎಂದಿದ್ದಾರೆ.

ಇದೆ ವೇಳೆ ಅಮೆರಿಕದ ಸ್ಟಾಕ್​ ಮಾರ್ಕೆಟ್​ ಏರಿಕೆ ಕಂಡಿದ್ದರ ಹಿಂದೆ ಹೊಸ ಹಣದುಬ್ಬರದ ದತ್ತಾಂಶ ಇದೆ. ಇದರಿಂದ ಇಸ್ರೇಲ್​ನ ಸಾಂಸ್ಥಿಕ ಘಟಕಗಳು ತಮ್ಮ ಡಾಲರ್​ ಅನ್ನು ಮಾರಾಟ ಮಾಡಿದವು. ಹೀಗಾಗಿ ಶಕೆಲ್​ ಮತ್ತಷ್ಟು ಬಲವಾಯಿತು ಎಂದು ವಿವರಿಸಿದ್ದಾರೆ.

ಇದೇ ವೇಳೆ ಅಕ್ಟೋಬರ್​ನಲ್ಲಿ ಇಸ್ರೇಲ್​ನಲ್ಲಿ ಅಧಿಕ ಹಣದುಬ್ಬರ ದರ ಕಂಡು ಬಂದಿತ್ತು. ಈ ವೇಳೆ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಸೆಂಟ್ರಲ್​ ಬ್ಯಾಂಕ್​ ತಗ್ಗಿಸಿತು. ಇದು ಕೂಡ ಶಕೆಲ್​ ಬಲಗೊಳ್ಳಲು ಕಾರಣವಾದ ಮತ್ತೊಂದು ಅಂಶ ಎಂದು ತಿಳಿಸಿದರು. ಒಟ್ಟಾರೆ, ಈ ವರ್ಷದ ಶೆಕೆಲ್‌ನ ಮೌಲ್ಯ ಕುಂದಿಸುವ ಹೆಚ್ಚಿನ ಅಂಶಗಳು ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ಫ್ರಾಂಕ್​ ಹೇಳಿದ್ದಾರೆ.

ಇದನ್ನೂ ಓದಿ: Stock Market: ಬಿಎಸ್​ಇ ಸೆನ್ಸೆಕ್ಸ್​ 188 ಪಾಯಿಂಟ್ ಕುಸಿತ & 19,730ಕ್ಕೆ ಇಳಿದ ನಿಫ್ಟಿ

Last Updated : Nov 18, 2023, 1:36 PM IST

ABOUT THE AUTHOR

...view details