ಕರ್ನಾಟಕ

karnataka

ETV Bharat / business

ಕೀಪ್ಯಾಡ್ ಫೋನ್‌ಗಳಲ್ಲೂ ಯುಪಿಐ ಲಭ್ಯವಾಗುವಂತೆ ಮಾಡಲು ಉಪಕ್ರಮ: ಶಕ್ತಿಕಾಂತ ದಾಸ್ - UPI system

''ಸರ್ಕಾರದ ಬೆಂಬಲದೊಂದಿಗೆ, ಆರ್‌ಬಿಐ ಯುಪಿಐ ಅನ್ನು ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯನ್ನಾಗಿ ಮಾಡಲು ಸಾಧ್ಯವಾಗಿದೆ'' ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

RBI Governor Shaktikanta Das
ಕೀಪ್ಯಾಡ್ ಫೋನ್‌ಗಳಲ್ಲಿ ಯುಪಿಐ ಲಭ್ಯವಾಗುವಂತೆ ಮಾಡಲು ಉಪಕ್ರಮ: ಶಕ್ತಿಕಾಂತ ದಾಸ್

By ETV Bharat Karnataka Team

Published : Sep 2, 2023, 9:54 AM IST

ಇಂದೋರ್ (ಮಧ್ಯಪ್ರದೇಶ): ''ಫೀಚರ್ ಫೋನ್‌ಗಳಲ್ಲಿ (ಕೀಪ್ಯಾಡ್ ಮೊಬೈಲ್ ಫೋನ್‌ಗಳು) ಯುಪಿಐ ಪಾವತಿ ವ್ಯವಸ್ಥೆಯನ್ನು ಸಹ ಕಾರ್ಯನಿರ್ವಹಿಸುವಂತೆ ಮಾಡಲು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ'' ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ದೇವಿ ಅಹಲ್ಯಾ ವಿಶ್ವವಿದ್ಯಾಲಯದಲ್ಲಿ (ಡಿಎವಿವಿ) ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. "ಯುಪಿಐ ಪಾವತಿ ವ್ಯವಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಯಶಸ್ಸಿಗಾಗಿ ಸರ್ಕಾರದ ಬೆಂಬಲವಿದ್ದು, ಇದು ರಿಸರ್ವ್ ಬ್ಯಾಂಕ್‌ನ ಉಪಕ್ರಮಗಳಲ್ಲಿ ಒಂದಾಗಿದೆ. ಸರ್ಕಾರದ ಬೆಂಬಲದೊಂದಿಗೆ, ಆರ್‌ಬಿಐ ಯುಪಿಐ ಅನ್ನು ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯನ್ನಾಗಿ ಮಾಡಲು ಸಾಧ್ಯವಾಗಿದೆ'' ಎಂದು ಆರ್‌ಬಿಐ ಗವರ್ನರ್ ಹೇಳಿದರು.

10 ಬಿಲಿಯನ್ ಡಾಟಿದ ಯುಪಿಐ ವಹಿವಾಟು: ಶುಕ್ರವಾರ ನಡೆದ ತಮ್ಮ ಕೇಂದ್ರ ಮಂಡಳಿ ಸಭೆಯಲ್ಲಿ ಅವರು, ವಹಿವಾಟುಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, ಯುಪಿಐನಲ್ಲಿನ ಆಗಸ್ಟ್ ತಿಂಗಳಲ್ಲಿ 10 ಬಿಲಿಯನ್ ಮೀರಿದೆ. ಯುಪಿಐ ಅನ್ನು ಸೆಪ್ಟೆಂಬರ್ 2016 ರಲ್ಲಿ ಪ್ರಾರಂಭಿಸಲಾಯಿತು. ನಂತರ ಬೆಳವಣಿಗೆ ತುಂಬಾ ಸ್ಥಿರವಾಗಿದೆ. ಪ್ರಸ್ತುತ ಯುಪಿಐ ವಹಿವಾಟು 10 ಬಿಲಿಯನ್ ದಾಟಿದೆ. ಆದರೆ, ಇದು ಇಲ್ಲಿಗೆ ನಿಲ್ಲೋದಿಲ್ಲ. ಅದು ಮತ್ತಷ್ಟು ಬೆಳೆಯುತ್ತದೆ.

“ನಾವು ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಿದ್ದೇವೆ. ಆದರೆ, ಯುಪಿಐನಲ್ಲಿನ ಪ್ರಮುಖ ಸವಾಲು ಎಂದರೆ ಅದಕ್ಕೆ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಅಗತ್ಯವಿದೆ. ಆದರೆ, ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಫೀಚರ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಯುಪಿಐ ಸಿಸ್ಟಂ ಅನ್ನು ಕಾರ್ಯನಿರ್ವಹಿಸಲು ಫೀಚರ್ ಫೋನ್‌ಗಳನ್ನು ತಯಾರಿಸಲು ನಾವು ಕೆಲವು ವಿಶಿಷ್ಟತೆಗಳನ್ನು ಪ್ರಾರಂಭಿಸಿದ್ದೇವೆ. ಕಳಪೆ ಸಂಪರ್ಕವಿರುವ ಪ್ರದೇಶಗಳಲ್ಲಿ ವಾಲೆಟ್ ರೀತಿಯ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅದರ ಮೂಲಕ ಯುಪಿಐನಲ್ಲಿ ವಹಿವಾಟು ಮಾಡಬಹುದು” ಎಂದು ಅವರು ತಿಳಿಸಿದ್ದಾರೆ.

ಇ-ರೂಪಾಯಿ ಯೋಜನೆ ಮೇಲೆ ಸಾಕಷ್ಟು ಪ್ರಯೋಗ: “ಸಿಬಿಡಿಸಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಮೇಲೆ ಪ್ರಾಯೋಗಿಕ ಯೋಜನೆ ಪ್ರಾರಂಭಿಸಿದ ಕೆಲವೇ ದೇಶಗಳಲ್ಲಿ ನಾವು ಕೂಡ ಒಬ್ಬರು. ಇ-ರೂಪಾಯಿ ಇದು ಕಾಗದದ ಕರೆನ್ಸಿಯಂತೆಯೇ ಬೇರೇನೂ ಅಲ್ಲ. ಇದು ಕರೆನ್ಸಿಯ ಡಿಜಿಟಲ್ ಘಟಕವಾಗಿದೆ. ಪ್ರಾಯೋಗಿಕ ಯೋಜನೆಯು ಈಗಾಗಲೇ ಕಾರ್ಯಾಚರಣೆಯಲ್ಲಿದೆ. ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ'' ಎಂದು ಗವರ್ನರ್ ದಾಸ್ ಮಾಹಿತಿ ನೀಡಿದ್ದಾರೆ.

ಹಣದುಬ್ಬರ ಕುರಿತು ಮಾತನಾಡಿದ ಅವರು, ''ಆಗಸ್ಟ್ 14ರಂದು ಜುಲೈ ತಿಂಗಳಿಗೆ ಬಿಡುಗಡೆಯಾದ ಇತ್ತೀಚಿನ ಹಣದುಬ್ಬರ ಸಾಕಷ್ಟು ಹೆಚ್ಚಾಗಿದ್ದು, ಅದು ಶೇಕಡಾ 7.4 ರಷ್ಟಿತ್ತು. ಇದು ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಆದರೆ, ಮುಖ್ಯವಾಗಿ ತರಕಾರಿ ಬೆಲೆಗಳಿಂದಾಗಿ ಹಣದುಬ್ಬರ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿತ್ತು. ಟೊಮೆಟೊ ಬೆಲೆಯು ಶೇಕಡಾ 200 ರಷ್ಟು ಏರಿಕೆಯಾಯಿತು. ನಂತರ ಟೊಮೆಟೊ ಬೆಲೆ ಏರಿಕೆಯ ಪರಿಣಾಮವು ನೇರವಾಗಿ ಇತರ ತರಕಾರಿಗಳಿಗೆ ಮೇಲೆ ಆಗಿದೆ. ತರಕಾರಿ ಬೆಲೆಗಳ ಪರಿಣಾಮವು ಹೆಚ್ಚಾಗಿದೆ. ಸೆಪ್ಟೆಂಬರ್‌ನಿಂದ ಅದನ್ನು ಮಾಡರೇಟ್ ಮಾಡಲು ಪ್ರಾರಂಭಿಸಲಾಗುತ್ತದೆ'' ಎಂದಿದ್ದಾರೆ.

ಸೆಪ್ಟೆಂಬರ್‌ನಿಂದ ಹಣದುಬ್ಬರ ದರವು ಕಡಿಮೆಯಾಗಲಿದೆ - ಆರ್‌ಬಿಐ ಗವರ್ನರ್:''ಸದ್ಯ ಟೊಮೆಟೊ ಬೆಲೆಗಳು ಕಡಿಮೆಯಾಗಿದೆ. ಸರ್ಕಾರವು ಟೊಮೆಟೊಗಳನ್ನು ಹಲವು ಪ್ರದೇಶಗಳಿಗೆ ಸರಬರಾಜು ಮಾಡುತ್ತಿದೆ. ಕೊರತೆ ನೀಗಿಸಲು ಕ್ರಮಗಳನ್ನು ಪ್ರಾರಂಭಿಸಿದೆ. ಸಮಂಜಸವಾದ ಬೆಲೆಗಳು, ಒಟ್ಟಾರೆ ಹಣದುಬ್ಬರ ದರವು ಸೆಪ್ಟೆಂಬರ್‌ನಿಂದ ಮಧ್ಯಮ ಹಂತಕ್ಕೆ ತಲುಪಲು ಪ್ರಾರಂಭಿಸುತ್ತದೆ ಎಂದು ಅವರು ನಿರೀಕ್ಷಿಸುತ್ತಾರೆ. ಆಗಸ್ಟ್‌ನಲ್ಲಿ ಹಣದುಬ್ಬರ ದರವು ಮತ್ತೆ ತುಂಬಾ ಹೆಚ್ಚಿತ್ತು. ಆದರೆ, ಸೆಪ್ಟೆಂಬರ್‌ನಿಂದ ಹಣದುಬ್ಬರ ದರವು ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗುತ್ತದೆ'' ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಎನ್‌ಪಿಎ ಈಗ ಶೇ.3.9ಕ್ಕೆ ಇಳಿಕೆ:ಜಿಡಿಪಿ ಬಗ್ಗೆ ಮಾತನಾಡಿದ ದಾಸ್ ಅವರು, ''ಭಾರತವು ಈಗ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಇದು ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಡುವಿನ ಸುಸಂಘಟಿತ ಕ್ರಮದಿಂದಾಗಿ ಸಾಧ್ಯವಾಗಿದೆ. 2023- 24ರ ಹಣಕಾಸು ವರ್ಷದ ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಜಿಡಿಪಿ ಇತ್ತು. 11ರಷ್ಟು ಇದ್ದ ಅನುತ್ಪಾದಕ ಆಸ್ತಿ (ಎನ್‌ಪಿಎ) ಈಗ ಶೇ. 3.9ಕ್ಕೆ ಇಳಿದಿದೆ'' ಎಂದು ಅವರು ವಿವರಿಸಿದ್ದಾರೆ. (ಎಎನ್​ಐ)

ಇದನ್ನೂ ಓದಿ:ಆಗಸ್ಟ್​​ ಜಿಎಸ್​​​ಟಿ ಆದಾಯ 1,59,069 ಕೋಟಿ ರೂ.; ಕಳೆದ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚಳ

ABOUT THE AUTHOR

...view details