ನವದೆಹಲಿ:ಭಾರತದ ಉತ್ಪಾದನಾ ವಲಯದ ಚಟುವಟಿಕೆ ಮಾರ್ಚ್‌ನಲ್ಲಿ ಮಧ್ಯಮವಾಗಿತ್ತು. ಈ ಸಮಯದಲ್ಲಿ ಕಂಪನಿಗಳ ಹೊಸ ಆರ್ಡರ್ ಮತ್ತು ಉತ್ಪಾದನೆ ಸ್ವಲ್ಪ ಹೆಚ್ಚಾಗಿತ್ತು. ಆದ್ರೆ ಹಣದುಬ್ಬರ ಎಂಬುದು ವ್ಯಾಪಾರ ಕುಂಠಿತಗೊಳಿಸಿದೆ ಎಂದು ಮಾಸಿಕ ಸಮೀಕ್ಷೆಯೊಂದು ಸೋಮವಾರ ಹೇಳಿದೆ.
ಮಾರ್ಚ್‌ನಲ್ಲಿ ಭಾರತದ ಉತ್ಪಾದನಾ ಚಟುವಟಿಕೆ ಶೇ 54.0ರಷ್ಟಿದ್ದು, ಇದು ಫೆಬ್ರವರಿಯಲ್ಲಿ 54.9ರಷ್ಟಾಗಿದೆ. ಸೆಪ್ಟೆಂಬರ್ 2021 ರಿಂದ ಉತ್ಪಾದನೆ ಮತ್ತು ಮಾರಾಟದ ವಲಯದಲ್ಲಿ ಬೆಳವಣಿಗೆಯೂ ದುರ್ಬಲ ದರವನ್ನು ಎತ್ತಿ ತೋರಿಸುತ್ತಿದೆ ಎಂದು ಎಸ್ & ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಹೇಳಿದೆ.
ಸತತ ಒಂಬತ್ತು ತಿಂಗಳ ಒಟ್ಟಾರೆ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಸುಧಾರಣೆಯಾಗಿದೆ ಎಂದು ಮಾರ್ಚ್ PMI ಡೇಟಾವು ಸೂಚಿಸಿದೆ. ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸಿದ್ದರೂ, ಇತ್ತೀಚಿನ ಫಲಿತಾಂಶಗಳು ಕಾರ್ಖಾನೆಯ ಆರ್ಡರ್‌ಗಳು ಮತ್ತು ಉತ್ಪಾದನೆಯಲ್ಲಿ ನಿಧಾನವಾದ ವಿಸ್ತರಣೆಗಳನ್ನು ತೋರಿಸಿದೆ ಹಾಗೂ ಹೊಸ ರಫ್ತು ಆರ್ಡರ್‌ಗಳಲ್ಲಿ ನವೀಕೃತ ಕುಸಿತ ತೋರಿಸಿದೆ ಎಂದು ವರದಿ ಹೇಳಿದೆ. ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ವ್ಯಾಪಾರ ಕುಸಿದಿದೆ. ರಾಸಾಯನಿಕ, ಶಕ್ತಿ, ಬಟ್ಟೆ, ಆಹಾರ ಪದಾರ್ಥಗಳು ಮತ್ತು ಲೋಹದ ವೆಚ್ಚಗಳು ಫೆಬ್ರವರಿಗಿಂತ ಹೆಚ್ಚಿವೆ ಎಂದು ವರದಿಯಾಗಿದೆ.