ಕರ್ನಾಟಕ

karnataka

ETV Bharat / business

ಭಾರತದ ಜಿಡಿಪಿ ಶೇ 6ರ ದರದಲ್ಲಿ ಬೆಳವಣಿಗೆ: ಕ್ರಿಸಿಲ್ ಅಂದಾಜು - ಭಾರತದ ಜಿಡಿಪಿ ಶೇ 6ರ ದರದಲ್ಲಿ ಬೆಳವಣಿಗೆ

ಭಾರತದ ಜಿಡಿಪಿ ಶೇ 6 ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಅಂದಾಜು ಮಾಡಿದೆ. ಎನ್​ಎಸ್​​ಒಗೆ ಹೋಲಿಸಿದರೆ ಕ್ರಿಸಿಲ್ ಶೇ 1 ರಷ್ಟು ಕಡಿಮೆ ಬೆಳವಣಿಗೆ ದರ ಅಂದಾಜು ಮಾಡಿದೆ.

India's GDP to grow at 6% in FY24: CRISIL
India's GDP to grow at 6% in FY24: CRISIL

By

Published : Mar 16, 2023, 6:12 PM IST

ಮುಂಬೈ: 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 6 ರಷ್ಟು ದರದಲ್ಲಿ ವೃದ್ಧಿಯಾಗಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ಹೇಳಿದೆ. ರಾಷ್ಟ್ರೀಯ ಅಂಕಿ ಅಂಶ ಸಂಸ್ಥೆ ಎನ್​ಎಸ್​ಒ, ಹಣಕಾಸು ವರ್ಷ 2023 ರಲ್ಲಿ ಶೇ 7 ರಷ್ಟು ಜಿಡಿಪಿ ವೃದ್ಧಿಯಾಗುವ ಅಂದಾಜು ಮಾಡಿತ್ತು. ಎನ್​ಎಸ್​ಒಗೆ ಹೋಲಿಸಿದರೆ ಕ್ರಿಸಿಲ್ ಶೇ 1 ರಷ್ಟು ಕಡಿಮೆ ಬೆಳವಣಿಗೆ ದರ ಅಂದಾಜು ಮಾಡಿದೆ.

ಭೌಗೋಳಿಕ ರಾಜಕೀಯ ಘಟನೆಗಳ ಸಂಕೀರ್ಣತೆ, ಹೆಚ್ಚಿನ ಹಣದುಬ್ಬರ ಮತ್ತು ಹಣದುಬ್ಬೆ ಕಡಿಮೆ ಮಾಡಲು ಬಡ್ಡಿದರ ಹೆಚ್ಚಿಸುವಿಕೆ ಮುಂತಾದ ವಿಷಯಗಳಿಂದ ಜಾಗತಿಕ ಆರ್ಥಿಕ ಮುನ್ನೋಟ ಕೊಂಚ ವಿಷಾದಕರವಾಗಿದೆ ಎಂದು ಕ್ರಿಸಿಲ್ ವರದಿ ಹೇಳಿದೆ. ದೇಶೀಯವಾಗಿ ನೋಡುವುದಾದರೆ, ಮೇ 2022 ರಿಂದ 250 ಮೂಲಾಂಕಗಳಷ್ಟು ಬಡ್ಡಿದರ ಹೆಚ್ಚಳವಾಗಿದ್ದು, ಇದರಿಂದ ಕೋವಿಡ್​-19 ಪೂರ್ವದಲ್ಲಿರುವುದಕ್ಕಿಂತ ಬಡ್ಡಿದರಗಳು ಹೆಚ್ಚಾಗಿವೆ ಹಾಗೂ ಇದರ ಪರಿಣಾಮಗಳು 2024ರ ಹಣಕಾಸು ವರ್ಷದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಕ್ರಿಸಿಲ್ ತನ್ನ 'ಇಂಡಿಯಾ ಔಟ್‌ಲುಕ್ ವರದಿ 2023' ರಲ್ಲಿ ಹೇಳಿದೆ.

ಬಂಡವಾಳ ಮತ್ತು ಉತ್ಪಾದಕತೆಯ ಹೆಚ್ಚಳದಿಂದ ಮುಂದಿನ ಐದು ಹಣಕಾಸು ವರ್ಷಗಳಲ್ಲಿ ಭಾರತದ ಜಿಡಿಪಿ ವಾರ್ಷಿಕವಾಗಿ 6.8 ರಷ್ಟು ಬೆಳವಣಿಗೆಯಾಗಲಿದೆ ಎಂದು ವರದಿ ಹೇಳಿದೆ. ಕ್ರಿಸಿಲ್ ಮುನ್ಸೂಚನೆಯ ಪ್ರಕಾರ, ಭಾರತದ ಗ್ರಾಹಕ ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದಲ್ಲಿರುವ ಶೇ 6.8 ರಿಂದ ಹಣಕಾಸು ವರ್ಷ 2023-24 ರಲ್ಲಿ ಸರಾಸರಿ ಶೇ 5 ರಲ್ಲಿ ಸ್ಥಿರವಾಗಲಿದೆ. ಕಚ್ಚಾ ತೈಲ ಮತ್ತು ಸರಕುಗಳ ಬೆಲೆಗಳಲ್ಲಿ ಇಳಿಕೆಯಾಗುವ ಕಾರಣದಿಂದ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಗಳಿವೆ.

ಉತ್ತಮ ರಾಬಿ ಸುಗ್ಗಿಯು ಆಹಾರ ಹಣದುಬ್ಬರವನ್ನು ಕಡಿಮೆ ಮಾಡಬಹುದು. ಆದರೆ, ನಿಧಾನಗತಿಯಲ್ಲಿರುವ ಆರ್ಥಿಕತೆ ಮೂಲ ಹಣದುಬ್ಬರವನ್ನು ಕಡಿಮೆ ಮಾಡಬೇಕಿದೆ ಎಂದು ವರದಿ ಹೇಳಿದೆ. ಜಾಗತಿಕವಾಗಿ ಕಂಡು ಬರುತ್ತಿರುವ ಶಾಖದ ಅಲೆ, ಎಲ್ ನಿನೋ ತಾಪಮಾನ ಏರಿಕೆಯ ವಿಶ್ವ ಹವಾಮಾನ ಸಂಸ್ಥೆಯ ಮುನ್ಸೂಚನೆ ಮುಂತಾದುವುಗಳ ಕಾರಣದಿಂದ ಹಣದುಬ್ಬರ ಮೇಲ್ಮುಖವಾಗಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಭಾರತದ ಮಧ್ಯಮ ಅವಧಿಯ ಬೆಳವಣಿಗೆಯ ನಿರೀಕ್ಷೆಗಳು ಉತ್ತಮವಾಗಿವೆ. ಮುಂದಿನ ಐದು ಹಣಕಾಸು ವರ್ಷಗಳಲ್ಲಿ, ಜಿಡಿಪಿ ವಾರ್ಷಿಕವಾಗಿ 6.8 ಪರ್ಸೆಂಟ್‌ನಲ್ಲಿ ಬೆಳೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಬಂಡವಾಳ ಮತ್ತು ಉತ್ಪಾದಕತೆಯ ಹೆಚ್ಚಳದಿಂದ ಈ ಬೆಳವಣಿಗೆಯಾಗಲಿದೆ ಎಂದು ಕ್ರಿಸಿಲ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಸಿಒ ಅಮಿಶ್ ಮೆಹ್ತಾ ಹೇಳಿದರು. ಕೇಪೆಕ್ಸ್​ನ ಹೆಚ್ಚುತ್ತಿರುವ ಸುಸ್ಥಿರತೆ ಉತ್ತಮವಾಗಿದೆ. ಪ್ರಸ್ತುತ, ಮೂಲಸೌಕರ್ಯ ಮತ್ತು ಕೈಗಾರಿಕಾ ಕೇಪೆಕ್ಸ್​ನಲ್ಲಿ ಸುಮಾರು ಶೇ 9 ರಷ್ಟು ಪಾಲು ಪರಿಸರ ಪೂರಕವಾಗಿದೆ. 2027 ರ ಹಣಕಾಸು ವರ್ಷದಲ್ಲಿ ಈ ಪ್ರಮಾಣವು ಶೇ 15 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ಅಪಾಯ ತಗ್ಗಿಸುವಿಕೆಯ ಪರಿಣಾಮವು ಆದಾಯ, ಸರಕುಗಳ ಬೆಲೆಗಳು, ರಫ್ತು ಮಾರುಕಟ್ಟೆಗಳು ಮತ್ತು ಬಂಡವಾಳ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ ಎಂದು ಮೆಹ್ತಾ ಹೇಳಿದರು.

ಬಂಡವಾಳ ಹೂಡಿಕೆಗಳು, ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಖಾಸಗಿ ವಲಯದಿಂದ ನಿರೀಕ್ಷಿತ ಹೊಸ ಹೂಡಿಕೆಗಳು ಮಧ್ಯಮ ಅವಧಿಯ ಬೆಳವಣಿಗೆಗೆ ಚಾಲನೆ ನೀಡುತ್ತವೆ. ಡಿಜಿಟಲೀಕರಣ ಮತ್ತು ದಕ್ಷತೆಯನ್ನು ಹೆಚ್ಚಿಸುವ ಸುಧಾರಣೆಗಳು ಉತ್ಪಾದಕತೆಗೆ ಕೊಡುಗೆಯನ್ನು ಹೆಚ್ಚಿಸುತ್ತವೆ ಎಂದು ವರದಿ ಹೇಳಿದೆ. ಸರಕು ಮತ್ತು ಸೇವಾ ತೆರಿಗೆ ಮತ್ತು ದಿವಾಳಿತನ ಮತ್ತು ದಿವಾಳಿತನ ಸಂಹಿತೆಯಂತಹ ರಚನಾತ್ಮಕ ಸುಧಾರಣೆಗಳಿಂದ ಆರ್ಥಿಕತೆಯು ದಕ್ಷತೆಯ ಲಾಭ ಪಡೆಯುತ್ತದೆ ಎಂದು ವರದಿಯಲ್ಲಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ :ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ: ಕೇಂದ್ರದ ಅಧಿಸೂಚನೆ

ABOUT THE AUTHOR

...view details