ಕರ್ನಾಟಕ

karnataka

ETV Bharat / business

ಟ್ವಿಟರ್​ ಬ್ಲ್ಯೂಟಿಕ್​ಗೆ ಶುಲ್ಕ: ದೇಶದ ಮೊದಲ ಬಳಕೆದಾರ ಮಹಿಳೆ ನೈನಾ ರೆಧು ಏನಂತಾರೆ? - Indias first twitter user

ಟ್ವಿಟರ್​ ಖಾತೆಯ ಬ್ಲ್ಯೂಟಿಕ್​ಗಾಗಿ ಶುಲ್ಕ ಪಾವವತಿಸುವ ನಿರ್ಧಾರ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಭಾರತದ ಮೊದಲ ಮೈಕ್ರೋಬ್ಲಾಗಿಂಗ್​ ಬಳಕೆದಾರ ಎಂಬ ಖ್ಯಾತಿಯ ನೈನಾ ರೆಧು ಕೂಡ ಇದನ್ನು ಪ್ರಶ್ನಿಸಿದ್ದಾರೆ.

blue-tick-fee
ಟ್ವಿಟರ್​ ಬ್ಲ್ಯೂಟಿಕ್​ಗೆ ಶುಲ್ಕ

By

Published : Nov 8, 2022, 7:42 PM IST

ನವದೆಹಲಿ:ಭಾರತದ ಮೊದಲ ಟ್ವಿಟರ್ ಬಳಕೆದಾರರಾದ ಕಲಾವಿದೆ, ಛಾಯಾಗ್ರಾಹಕಿ ನೈನಾ ರೆಧು ಅವರು ಬ್ಲ್ಯೂಟಿಕ್​ ಪಡೆಯಲು 8 ಅಮೆರಿಕನ್​ ಡಾಲರ್(656 ರೂಪಾಯಿ) ಮಾಸಿಕ ಪಾವತಿಗೆ ಆಕ್ಷೇಪಿಸಿದ್ದಾರೆ. ಅಲ್ಲದೇ, ನಾನು 16 ವರ್ಷಗಳಿಂದ ಬಳಕೆ ಮಾಡುತ್ತಿದ್ದೇನೆ. ಈಗೇಕೆ ಹಣ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್​ ಖರೀದಿಸಿದ ವಿಶ್ವದ ನಂ.1 ಶ್ರೀಮಂತ ಎಲಾನ್​ ಮಸ್ಕ್​ ಖಾತೆಯ ಬ್ಲ್ಯೂಟಿಕ್​(ಪರಿಶೀಲಿಸಿದ ಖಾತೆ)ಗೆ ಮಾಸಿಕವಾಗಿ 8 ಡಾಲರ್​ ಶುಲ್ಕ ವಿಧಿಸಿದ್ದಾರೆ. ಇದಕ್ಕೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದೆ. ಇನ್ನೂ ಕೆಲವರು ಪರಿಶೀಲಿಸಿದ ಖಾತೆ ಉಳಿದು ನಕಲಿ ಖಾತೆಗಳು ಅಳಿಯಲಿವೆ ಎಂದು ಬೆಂಬಲ ನೀಡಿದ್ದಾರೆ.

ಭಾರತದಲ್ಲೂ ಇದನ್ನು ಶೀಘ್ರವೇ ಶುಲ್ಕ ನಿಯಮ ಜಾರಿ ಮಾಡಲು ಉದ್ದೇಶಿಸಿರುವ ಎಲಾನ್​ ​ಮಸ್ಕ್​ಗೆ ಭಾರತದ ಮೊದಲ ಟ್ವಿಟರ್​ ಖಾತೆ ಪಡೆದ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಉದ್ಯೋಗಿಯಾಗಿರುವ ನೈನಾ ರೆಧು ಅವರು ಶುಲ್ಕ ಪಾವತಿಗೆ ಆಕ್ಷೇಪವೆತ್ತಿದ್ದಾರೆ. 16 ವರ್ಷಗಳಿಂದ ಖಾತೆ ಬಳಸುತ್ತಿದ್ದು, ಈಗೇಕೆ ಶುಲ್ಕ ಎಂದು ಪ್ರಶ್ನಿಸಿದ್ದಾರೆ.

ನೈನಾ ರೆಧು ಖಾತೆ ಪಡೆದದ್ದೇಗೆ?:ಮೈಕ್ರೋ ಬ್ಲಾಗಿಂಗ್ ಸೈಟ್​ ಟ್ವಿಟರ್​ನಿಂದ 2006 ರಲ್ಲಿ ಮೊದಲ ಬಾರಿಗೆ ನೈನಾ ರೆಧು ಅವರಿಗೆ ಇ-ಮೇಲ್​ ಮೂಲಕ ಖಾತೆ ತೆರೆಯಲು ಕೋರಿಕೆ ಬಂದಿತ್ತು. TWTTR ಎಂದಿದ್ದ ಲಿಂಕ್​ ಅನ್ನು ಪ್ರವೇಶಿಸಿ ಖಾತೆ ತೆರೆದೆ. ಭಾರತದಲ್ಲಿ ತೆರೆದ ಮೊದಲ ಖಾತೆ ಇದೇ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದೊಂದು ಕಾಕತಾಳೀಯ ಎಂಬಂತೆ ಮೊದಲ ಬಳಕೆದಾರಳಾದೆ. ಬಳಿಕ ಟ್ವಿಟರ್​ ಇಷ್ಟರಮಟ್ಟಿಗೆ ಸಕ್ಸಸ್​ ಕಾಣುತ್ತದೆ ಎಂದೂ ನಾನು ಅಂದುಕೊಂಡಿರಲಿಲ್ಲ ಎಂದು ನೈನಾ ಹೇಳಿದ್ದಾರೆ.

ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ನಾನು ಆರಂಭದಲ್ಲಿ ಹೆಚ್ಚಾಗಿ ಆ್ಯಪ್​ ಬಳಕೆ ಮಾಡುತ್ತಿರಲಿಲ್ಲ. ಬಳಿಕ ಸ್ನೇಹಿತರಿಂದ, ಉದ್ಯೋಗಿಗಳಿಂದ ಸಂದೇಶ ಬರಲಾರಂಭಿಸಿದವು. ಮೊದಲು ನಾನು ಒಂದೂವರೆ ವರ್ಷ ಟ್ವಿಟರ್​ ಬಳಕೆ ಮಾಡಿರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಬಳಿಕ ಅವರು ತಮ್ಮನ್ನು ಟ್ವಿಟ್ಟರ್​ನಲ್ಲಿ "ಛಾಯಾಗ್ರಾಹಕಿ, ಕಲಾವಿದೆ ಮತ್ತು ಅನುಭವ ಸಂಗ್ರಾಹಕಿ ಎಂದು ಪರಿಚಯಿಸಿಕೊಂಡೆ. ಮೊದಲ ಭಾರತೀಯ ಟ್ವಿಟರ್ ಬಳಕೆದಾರೆ ಎಂಬ ದಾಖಲೆ ಇಲ್ಲದಿದ್ದರೂ, ಅಮೆರಿಕದ ವರದಿಯೊಂದು ನನ್ನನ್ನು ಮೊದಲ ಭಾರತೀಯ ಟ್ವಿಟರ್​ ಬಳಕೆದಾರರು ಎಂದು ಉಲ್ಲೇಖಿಸಿದ್ದು ಕಾಕತಾಳೀಯವಷ್ಟೇ ಎಂದು ಹೇಳುತ್ತಾರೆ.

ಈವರೆಗೂ 22 ಸಾವಿರ ಅನುಯಾಯಿಗಳನ್ನು ಹೊಂದಿರುವ, 16 ವರ್ಷಗಳಿಂದ 1 ಲಕ್ಷ 75 ಸಾವಿರ ಟ್ವೀಟ್​ ಮಾಡಿರುವ ನೈನಾ ಅವರು, ಬ್ಲ್ಯೂಟಿಕ್​ ಶುಲ್ಕ ಕುರಿತು ಮಾತನಾಡಿ, ಏಕೆ ಶುಲ್ಕ ವಿಧಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಶುಲ್ಕ ಪಾವತಿಸಿದ ಬಳಿಕ ಬ್ಲ್ಯೂಟಿಕ್‌ ಹಾಗೆಯೇ ಉಳಿಯುತ್ತದೆ ಅಥವಾ ಬದಲಾಗುತ್ತದೆಯೇ?. ಈ ಬಗ್ಗೆ ಸ್ಪಷ್ಟತೆ ಸಿಕ್ಕಾಗಿ ಶುಲ್ಕ ಪಾವತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿಯ ನಿಜವಾದ ಖಾತೆ ಎಂದು ಪರಿಶೀಲಿಸಲು ಅದಕ್ಕೆ ಹಣವನ್ನೇಕೆ ಪಾವತಿಸಬೇಕು. ಕಳೆದ 16 ವರ್ಷಗಳ ನಂತರ ನಾನು ಈಗ ಏಕೆ ಹಣ ನೀಡಬೇಕು ಎಂದು ಎಲಾನ್​ ಮಸ್ಕ್​ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಓದಿ:ಟ್ವಿಟರ್​ ಬ್ಲ್ಯೂಟಿಕ್​ಗೆ ಶುಲ್ಕ: ಎಲೋನ್​ ಮಸ್ಕ್​ ನಿರ್ಧಾರಕ್ಕೆ ನಟಿ ಕಂಗನಾ ಬೆಂಬಲ

ABOUT THE AUTHOR

...view details