ನವದೆಹಲಿ:ಭಾರತದ ರಾಸಾಯನಿಕಗಳ ರಫ್ತು ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ಶೇ 100 ಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ರಾಸಾಯನಿಕ ರಫ್ತು ದಾಖಲೆಯ ಗರಿಷ್ಠ 29 ಶತಕೋಟಿ ಡಾಲರ್ ತಲುಪಿದೆ ಎಂದು ಮೂಲಗಳು ತಿಳಿಸಿವೆ. 2021-22 ರಲ್ಲಿ, ಭಾರತದ ಸರಕು ರಫ್ತುಗಳು ಸಾರ್ವಕಾಲಿಕ ದಾಖಲೆಯ ಗರಿಷ್ಠ $418 ಶತಕೋಟಿ ತಲುಪಿದೆ. ಇದು 2013-14 ರ ಸಮಯದಲ್ಲಿದ್ದ $ 14.21 ಶತಕೋಟಿ ರಫ್ತು ಪ್ರಮಾಣಕ್ಕಿಂತ ಶೇ 106ರಷ್ಟು ಹೆಚ್ಚಾಗಿದೆ.
ಅಧಿಕಾರಿಗಳ ಪ್ರಕಾರ, ಸಾವಯವ, ಅಜೈವಿಕ ರಾಸಾಯನಿಕಗಳು, ಕೃಷಿ ರಾಸಾಯನಿಕಗಳು, ಬಣ್ಣಗಳು ಮತ್ತು ವಿಶೇಷ ರಾಸಾಯನಿಕಗಳ ಸಾಗಣೆಯಲ್ಲಿನ ಬೇಡಿಕೆ ಹೆಚ್ಚಳದಿಂದಾಗಿ ರಾಸಾಯನಿಕಗಳ ರಫ್ತು ಬೆಳವಣಿಗೆಯನ್ನು ಸಾಧಿಸಲಾಗಿದೆ. ಇತ್ತೀಚಿನ ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಭಾರತೀಯ ರಾಸಾಯನಿಕ ಉದ್ಯಮವು ಜಾಗತಿಕ ಪ್ರಾಮುಖ್ಯತೆ ಪಡೆದುಕೊಂಡಿದೆ.
ಏಕೆಂದರೆ ದೇಶವು ಆರನೇ ಅತಿದೊಡ್ಡ ರಾಸಾಯನಿಕಗಳ ಉತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಏಷ್ಯಾದಲ್ಲಿ ರಾಸಾಯನಿಕಗಳ ಮೂರನೇ ಅತಿದೊಡ್ಡ ಉತ್ಪಾದಕವಾಗಿದೆ. ರಾಸಾಯನಿಕಗಳ ರಫ್ತುದಾರರಾಗಿ, ಭಾರತವು ಪ್ರಸ್ತುತ ರಾಸಾಯನಿಕಗಳ ಜಾಗತಿಕ ರಫ್ತಿನಲ್ಲಿ 14ನೇ ಸ್ಥಾನದಲ್ಲಿದೆ. ಪ್ರಸ್ತುತ, ಭಾರತವು ಪ್ರಪಂಚದ ಪ್ರಮುಖ ಬಣ್ಣಗಳ ಉತ್ಪಾದಕವಾಗಿದೆ ಮತ್ತು ಸರಕುಗಳ ಜಾಗತಿಕ ರಫ್ತಿನ ಸುಮಾರು 16 -18ಗೆ ಕೊಡುಗೆ ನೀಡುತ್ತದೆ. ಭಾರತೀಯ ಬಣ್ಣವನ್ನು 90 ದೇಶಗಳಿಗೆ ರಫ್ತು ಮಾಡಲಾಗುತ್ತದೆ.