ಸುಸ್ಥಿರ ಮತ್ತು ಪರಿಸರ ಸ್ನೇಹಿ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಮುಂಬೈ ಮೂಲದ ಸ್ಟಾರ್ಟಪ್ ಕಂಪನಿಯಾದ ಪಿಎಂವಿ ಎಲೆಕ್ಟ್ರಿಕ್ ದೇಶದ ಮೊದಲ ಅಗ್ಗದ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದು 2 ಸೀಟರ್ ಹೊಂದಿದ್ದು, ಮೊಬೈಲ್ ಮೂಲಕ ನಿಯಂತ್ರಿಸಬಹುದಾಗಿದೆ. ಇದು ಮೈಕ್ರೋ ಎಲೆಕ್ಟ್ರಿಕ್ ಕಾರಾಗಿದ್ದು, EAS-E ಎಂದು ಹೆಸರಿಸಲಾಗಿದೆ.
Eas-E ಮೈಕ್ರೋ ಕಾರು PMSM ಮೋಟಾರ್ ಅನ್ನು ಹೊಂದಿದ್ದು, 10 kW ಪವರ್ ಮತ್ತು 50 Nm ಟಾರ್ಕ್ ಅನ್ನು ಇದು ಉತ್ಪಾದಿಸುತ್ತದೆ. ಗಂಟೆಗೆ 70 ಕಿಮೀ ವೇಗದ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಮೂರು ಎಲೆಕ್ಟ್ರಿಕ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ. 120 ಕಿಮೀ, 160 ಕಿಮೀ ಮತ್ತು 200 ಕಿಮೀ ವರೆಗಿನ ಸಾಮರ್ಥ್ಯದ ಮೂರು ಶ್ರೇಣಿಯ ಕಾರುಗಳನ್ನು ಕಂಪನಿ ಪರಿಚಯಿಸಿದೆ.
4 ಗಂಟೆಯಲ್ಲಿ ಬ್ಯಾಟರಿ ಫುಲ್:ಎಲೆಕ್ಟ್ರಿಕ್ ಕಾರಿನ ಬ್ಯಾಟರಿ 3 ರಿಂದ 4 ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ದೇಶದ ಅತಿ ಚಿಕ್ಕ ಎಲೆಕ್ಟ್ರಿಕ್ ಕಾರು ಎಂದೇ ಹೆಸರಾದ ಇದು, ಇಬ್ಬರು ಮಾತ್ರ ಪ್ರಯಾಣಿಸಬಹುದಾಗಿದೆ. ಕಾರಿನ ನಿರ್ವಹಣಾ ವೆಚ್ಚ ಪ್ರತಿ ಕಿಮೀಗೆ 75 ಪೈಸೆಗಿಂತ ಕಡಿಮೆಯಿದೆ. ಕ್ರೂಸ್ ಕಂಟ್ರೋಲ್, ರಿಮೋಟ್ ಕಂಟ್ರೋಲ್, ರಿಮೋಟ್ ಹಾರ್ನ್, ಫಾಲೋ ಮಿ ಹೋಮ್ ಲೈಟ್‌ಗಳು, ಮತ್ತು ದೈತ್ಯ ಬ್ರೇಕಿಂಗ್ ವ್ಯವಸ್ಥೆಯ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.