ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಬುಧವಾರವೂ ಹಸಿರು ಬಣ್ಣದಿಂದಲೇ ಆರಂಭಗೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಅಲ್ಪ ಮಟ್ಟದ ಕುಸಿತ ಕಂಡಿದ್ದ ಷೇರು ಮಾಡುಕಟ್ಟೆ, ಮಂಗಳವಾರ ಚೇತರಿಕೆ ಕಂಡಿತ್ತು. ಬುಧವಾರ ಸಹ ಭಾರತೀಯ ಷೇರುಗಳು ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿವೆ. ನಾಳೆ ಷೇರು ಮಾರುಕಟ್ಟೆಯಲ್ಲಿ ಅಲ್ಪ ಮಟ್ಟಿಗೆ ಬದಲಾವಣೆಯಾಗುವ ಸಾಧ್ಯತೆಗಳಿವೆ
ಕಾರಣ, ಭಾರತೀಯ ರಿಸರ್ವ್ ಬ್ಯಾಂಕ್ನ ಎರಡನೇ ಹಣಕಾಸು ನೀತಿ ಪರಿಶೀಲನಾ ಸಭೆ ನಡೆಯುತ್ತಿದ್ದು ಎಲ್ಲ ಹೂಡಿಕೆದಾರರು ಈ ಸಭೆಯ ನಿರ್ಧಾರಗಳತ್ತ ಚಿತ್ತ ನೆಟ್ಟಿದ್ದಾರೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಈ ನೀತಿ ಪರಿಶೀಲನಾ ಸಭೆ ನಡೆಯುತ್ತಿದ್ದು, ಗುರುವಾರ ಆರ್‌ಬಿಐ ರೆಪೋದರದ ಬಗ್ಗೆ ತನ್ನ ನಿರ್ಧಾರ ಪ್ರಕಟಿಸಲಿದೆ.
ಈ ಸಭೆಯಲ್ಲಿ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳು ಹಾಗೂ ಆರ್‌ಬಿಐ ಗವರ್ನರ್ ಸುದ್ದಿಗೋಷ್ಠಿ ಮೇಲೆ ಎಲ್ಲರ ಚಿತ್ತ ನೆಟ್ಟಿದು, ಶಕ್ತಿಕಾಂತ್ ದಾಸ್ ಘೋಷಿಸುವ ಹೊಸ ನೀತಿಗಳ ಮೇಲೆ ಷೇರುಪೇಟೆ ತನ್ನ ವ್ಯವಹಾರ ನಡೆಸಲಿದೆ. ಹಾಗಾಗಿ ನಾಳಿನ ಆರ್‌ಬಿಐ ನಿರ್ಧಾರದ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಹೂಡಿಕೆದಾರರು ಇಟ್ಟುಕೊಂಡಿದ್ದಾರೆ.
ಪ್ರಸ್ತುತ ಷೇರು ಮಾರುಕಟ್ಟೆ ಅಂದರೆ ಸಮಯ 2.25 ರ ವೇಳೆ 261 ಅಂಕಗಳ ಏರಿಕೆಯೊಂದಿಗೆ 63053 ಅಂಕಗಳಲ್ಲಿ ವ್ಯವಹಾರ ನಿರತವಾಗಿತ್ತು. ಆರ್‌ಬಿಐ ತನ್ನ ಹಣಕಾಸು ನೀತಿಗಳ ಬಗ್ಗೆ ಮಂಗಳವಾರದಿಂದ ಎರಡನೇ ಹಣಕಾಸು ನೀತಿ ಪರಿಶೀಲನಾ ಸಭೆ ನಡೆಯುತ್ತಿದ್ದು ಗುರುವಾರ ರೆಪೋ ದರ ಏರಿಕೆ ಮಾಡುತ್ತಾ ಇಲ್ಲವೇ ಯಥಾಸ್ಥಿತಿಯಲ್ಲೇ ಮುಂದುವರಿಸುತ್ತಾ ಎಂಬುದು ಗೊತ್ತಾಗಲಿದೆ.
'ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ನೀತಿ ರೆಪೋ ದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸುವ ಸಾಧ್ಯತೆ ಇದೇ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಏಪ್ರಿಲ್ ತಿಂಗಳಿನಲ್ಲಿ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆ ಹಾಗೂ ಮುಖ್ಯ ಹಣದುಬ್ಬರ ಬರುವ ದಿನಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಲಕ್ಷಣಗಳು ಗೋಚರಿಸಿರುವುದರಿಂದ ಆರ್‌ಬಿಐ ಜೂನ್ 8ರಂದು ಘೋಷಿಸಲಿರುವ ನೂತನ ಬಡ್ಡಿ ದರ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಯಥಾಸ್ಥಿತಿ ಮುಂದುವರಿಸುವ ಸಾಧ್ಯ ಇದೆ' ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2022ರ ಮೇ ತಿಂಗಳಿನಿಂದ ಸಂಚಿತ ಬಡ್ಡಿ ದರವನ್ನು 250 ಮೂಲಾಂಕಗಳಷ್ಟು ಹೆಚ್ಚಳ ಮಾಡಿತ್ತು. ಕಳೆದ ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು ಗಣನೀಯ ಇಳಿಕೆಯಾಗಿತ್ತು. ಇದು ಕಳೆದ 18 ತಿಂಗಳಿನಲ್ಲೇ ಅತ್ಯಂತ ಕನಿಷ್ಠವಾಗಿತ್ತು. ಇನ್ನು ಏಪ್ರಿಲ್ ತಿಂಗಳಲ್ಲಿ ನಡೆದ ಸಭೆಯಲ್ಲಿ, RBI ಬಡ್ಡಿದರಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಿರಲಿಲ್ಲ. ಏಪ್ರಿಲ್‌ನಲ್ಲಿ ನಡೆದ ನೀತಿ ಪರಿಶೀಲನಾ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಪಾಲಸಿ ರೇಟ್ ಹೆಚ್ಚಿಸುವ ಪ್ರಕ್ರಿಯೆಯನ್ನು ನಿಲ್ಲಿಸಿತ್ತು.
ಏಪ್ರಿಲ್ ಹೊರತುಪಡಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಮೇ 2022 ರಿಂದ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಿಂದ 6.5 ಶೇಕಡಾಕ್ಕೆ ಏರಿಸಿದೆ. ಬಡ್ಡಿದರಗಳನ್ನು ಹೆಚ್ಚಿಸುವುದು ವಿತ್ತೀಯ ನೀತಿ ಸಾಧನವಾಗಿದೆ. ರಾಷ್ಟ್ರೀಯ ಅಂಕಿ- ಅಂಶಗಳ ಕಚೇರಿ (NSO) ಇತ್ತೀಚೆಗೆ ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜಿನ ಪ್ರಕಾರ, 2022-23ರ ಪ್ರಸ್ತುತ GDP ಬೆಳವಣಿಗೆಯು 7.2 ಪ್ರತಿಶತದಷ್ಟಿದೆ. ಇದು 7 ಶೇಕಡಾ ಯೋಜಿತಕ್ಕಿಂತ ಹೆಚ್ಚಾಗಿದೆ
ಇದನ್ನು ಓದಿ:ಡಿಸೆಂಬರ್ಗೆ ಬಿಎಸ್‌ಇ ಸೆನ್ಸೆಕ್ಸ್ 68,500 ಅಂಶಕ್ಕೇರುವ ಸಾಧ್ಯತೆ: ಮಾರ್ಗನ್ ಸ್ಟಾನ್ಲಿ ಅಂದಾಜು