ನವದೆಹಲಿ :ಮುಂದಿನ 6 ರಿಂದ 8 ತಿಂಗಳಲ್ಲಿ ಭಾರತೀಯ ಸ್ಟಾರ್ಟಪ್ಗಳಿಗೆ ಫಂಡಿಂಗ್ ಹರಿವು ಮತ್ತೆ ಪ್ರಾರಂಭವಾಗಬಹುದು ಎಂದು ಮೂವರಲ್ಲಿ ಇಬ್ಬರು (ಶೇ 50ರಷ್ಟು) ಹೂಡಿಕೆದಾರರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಫಂಡಿಂಗ್ ಕೊರತೆಯು ಶೀಘ್ರದಲ್ಲೇ ಕೊನೆಯಾಗಲಿದೆ ಎಂದು ಶೇ 17ರಷ್ಟು ಹೂಡಿಕೆದಾರರು ಹೇಳಿದ್ದರೆ, ಇನ್ನು ಕೆಲವರು ಫಂಡಿಂಗ್ ಮತ್ತೆ ಆರಂಭವಾಗಲು 12 ರಿಂದ 18 ತಿಂಗಳು ಬೇಕಾಗಬಹುದು ಎಂದಿದ್ದಾರೆ ಎಂದು ಬೆಂಗಳೂರು ಮೂಲದ ವಿಶ್ಲೇಷಕ ಸಂಸ್ಥೆ ರೆಡ್ಸೀರ್ ಹೇಳಿದೆ.
ಒಟ್ಟಾರೆಯಾಗಿ ಯುಎಸ್, ಇಯು, ಯುಎಇ ಮತ್ತು ಜಪಾನ್ ದೇಶಗಳು ಭಾರತೀಯ ಸ್ಟಾರ್ಟಪ್ಗಳಿಗೆ ಅತಿದೊಡ್ಡ ಧನಸಹಾಯದ ಮೂಲವಾಗಿವೆ. ಈ ದೇಶಗಳು ಒಟ್ಟು ಜಾಗತಿಕ ಫಂಡಿಂಗ್ ನಿಧಿಯ ಶೇಕಡಾ 5 ಮತ್ತು ಒಟ್ಟು ಎಪಿಎಸಿ ನಿಧಿಯ ಶೇಕಡಾ 20 ರಷ್ಟು ಪಾಲು ಹೊಂದಿವೆ. ವರದಿಯ ಪ್ರಕಾರ, ಮುಂದಿನ ಯುನಿಕಾರ್ನ್ಗಳು (ಸ್ಟಾರ್ಟಪ್ಗಳು) ಡಿ 2 ಸಿ-ಬಿಪಿಸಿ, ಡಿ 2 ಸಿ-ಹೆಲ್ತ್ ಮತ್ತು ವೆಲ್ನೆಸ್, ಡಯಾಗ್ನೋಸ್ಟಿಕ್ಸ್ ಮತ್ತು ಕ್ಲಿನಿಕ್ಗಳು, ಗೇಮಿಂಗ್ ಮತ್ತು ಅಪ್ಲಿಕೇಶನ್ ಸ್ಟುಡಿಯೋಗಳಂತಹ ಕ್ಷೇತ್ರಗಳಿಂದ ಹೊರಹೊಮ್ಮಲಿವೆ.
2017 ರಿಂದ 2020ರವರೆಗಿನ ಕ್ಯಾಲೆಂಡರ್ ವರ್ಷಗಳಲ್ಲಿ ಇದ್ದ ಫಂಡಿಂಗ್ ಮಟ್ಟವು 2023ರಲ್ಲಿ ಮತ್ತೆ ಮರಳಲಿದೆ. ಈ ಫಂಡಿಂಗ್ ಮೌಲ್ಯ 12 ರಿಂದ 15 ಬಿಲಿಯನ್ ಡಾಲರ್ ದಾಟಲಿದೆ. ಇದರ ನಂತರ 2024ರಲ್ಲಿಯೂ ಅತ್ಯಧಿಕ ಸ್ಟಾರ್ಟಪ್ ಫಂಡಿಂಗ್ ಬಂಡವಾಳ ಹರಿದು ಬರಲಿದ್ದು, ಇದು 15 ರಿಂದ 20 ಬಿಲಿಯನ್ ಡಾಲರ್ಗಳಷ್ಟಾಗಬಹುದು ಎಂದು ವರದಿ ತಿಳಿಸಿದೆ.