ನದದೆಹಲಿ: ಜಾಗತಿಕ ಆರ್ಥಿಕ ಕುಸಿತದ ನಡುವೆ ನವೋದ್ಯಮ ಕ್ಷೇತ್ರದ ನಿಧಿ 2022 ರ ಮೂರನೇ ತ್ರೈಮಾಸಿಕದಲ್ಲಿ 2.7 ಶತಕೋಟಿ ಅಮೆರಿಕನ್ ಡಾಲರ್ಗೆ ಕುಸಿತ ಕಂಡಿದೆ. ಈ ಮೂಲಕ ಎರಡು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು PwC ಇಂಡಿಯಾ ವರದಿ ತಿಳಿಸಿದೆ.
2022 ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದಲ್ಲಿ ಕೇವಲ ಎರಡು ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಸ್ಥಾನಮಾನ ಪಡೆದುಕೊಂಡಿವೆ. ಇದು ಕಳೆದ ತ್ರೈಮಾಸಿಕದಲ್ಲಿ ಹೊಸ ಯುನಿಕಾರ್ನ್‌ಗಳ ಸಂಖ್ಯೆಯಲ್ಲಿನ ಕುಸಿತದ ಜಾಗತಿಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು 'ಸ್ಟಾರ್ಟ್‌ಅಪ್ ಡೀಲ್ಸ್ ಟ್ರ್ಯಾಕರ್ ಕ್ಯೂ3 ಸಿವೈ22' ವರದಿ ಹೇಳಿದೆ.
ಜಾಗತಿಕವಾಗಿ ಈ ತ್ರೈಮಾಸಿಕದಲ್ಲಿ ಕೇವಕ 20 ಯುನಿಕಾರ್ನ್‌ಗಳು ಸೃಷ್ಟಿಯಾಗಿದ್ದಾರೆ. ಇವುಗಳಲ್ಲಿ ಶೇ 45ರಷ್ಟು SaaS ವಿಭಾಗದಿಂದ ಬಂದವು. ಈ ತ್ರೈಮಾಸಿಕದಲ್ಲಿ ಯಾವುದೇ ಹೊಸ ಡೆಕಾಕಾರ್ನ್ ವಿಭಾಗಕ್ಕೆ ಸೇರ್ಪಡೆಗೊಂಡಿಲ್ಲ. 2022ರ ಮೂರನೇ ತ್ರೈಮಾಸಿಕದಲ್ಲಿ ಸಾರ್ಟ್ಅಪ್ ನಿಧಿಯ 205 ಡೀಲ್‌ಗಳು 2.7 ಶತಕೋಟಿಗೆ ಅಮೆರಿಕನ್ ಡಾಲರ್ಗೆ ತಲುಪುವುದರೊಂದಿಗೆ ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.
ಹೂಡಿಕೆಯ ಎಲ್ಲ ಹಂತಗಳಲ್ಲಿ ನಿಧಿಯ ಕುಸಿತವನ್ನು ಗುರುತಿಸಲಾಗಿದೆ. ಇನ್ನು 2022 ರ ಮೂರನೇ ತ್ರೈಮಾಸಿಕದಲ್ಲಿ ಒಟ್ಟು ನಿಧಿಯ ಶೇಕಡಾ 21 ರಷ್ಟು ಕೊಡುಗೆ ನೀಡಿತ್ತು. ಹಿಂದಿನ ತ್ರೈಮಾಸಿಕದಲ್ಲಿ ಇದು ಸರಿಸುಮಾರು ಶೇಕಡಾ 12 ರಷ್ಟಿತ್ತು.