ಸಿಂಗಾಪುರ:ಭಾರತೀಯ ಮೂಲದ ಉದ್ಯಮಿಗಳು ಸಿಂಗಾಪುರದಲ್ಲಿ ಪೇಟಿಂ ಮಾದರಿಯ ಇನಿಪೇ(ಇಂಟರ್ನ್ಯಾಷನಲ್ ಪೇಮೆಂಟ್ ಸೊಲ್ಯೂಷನ್) ಆರಂಭಿಸಲು ಸಜ್ಜಾಗಿದ್ದಾರೆ. ಆಗ್ನೇಯ ಏಷ್ಯಾದಲ್ಲಿ ಎರಡನೇ ತ್ರೈಮಾಸಿಕದ ಹೊತ್ತಿಗೆ 1 ಮಿಲಿಯನ್ ಅಮೆರಿಕದ ಡಾಲರ್ನಷ್ಟು ಹೂಡಿಕೆಯಲ್ಲಿ ನಿಯೋಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.
ಆಗ್ನೇಯ ಏಷ್ಯಾದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗುವ ನಿಯೋಬ್ಯಾಂಕ್ ಮೂಲಕ ಮೈಕ್ರೋ ಲೆಂಡಿಂಗ್, ದೇಶೀಯ ಪಾವತಿಗಳು, ಇ-ವ್ಯಾಲೆಟ್‌ಗಳು, ವೈಯಕ್ತಿಕ ಮತ್ತು ಸಾಮೂಹಿಕ ಉಳಿತಾಯ ಖಾತೆಗಳು ತೆರೆಯಲಿವೆ. ಇದು ಪ್ರಮುಖವಾಗಿ ಶ್ರಮಿಕ ವರ್ಗ, ವಿದೇಶಿ ಕಾರ್ಮಿಕರು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡಿರಲಿದೆ. ಇದಕ್ಕಾಗಿ ಫಿನ್‌ಟೆಕ್ ಸ್ಟಾರ್ಟಪ್ ಸಿಂಗಾಪುರ, ಭಾರತ ಮತ್ತು ವಿಯೆಟ್ನಾಂನಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಐದು ದೇಶಗಳಲ್ಲಿ ಇದನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಇದರ ಪ್ರಮುಖ ಸಂಸ್ಥಾಪಕರು ಭಾರತೀಯರಾಗಿದ್ದು, ಅಲ್ಲಿಯೇ ಅವರು ಶಿಕ್ಷಣವನ್ನು ಪಡೆದಿದ್ದಾರೆ. ಬ್ಯಾಂಕಿಂಗ್ ವಲಯದಲ್ಲಿ ವ್ಯಾಪಕವಾದ ಅನುಭವವನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಆರ್‌ಎಚ್‌ಬಿ ಬ್ಯಾಂಕಿಂಗ್ ಗ್ರೂಪ್, ಕ್ಯಾಪ್‌ಜೆಮಿನಿ, ಡಿಬಿಎಸ್ ಬ್ಯಾಂಕ್ ಮತ್ತು ಫಿಲಿಪೈನ್ಸ್‌ನಲ್ಲಿ ಪ್ರಾರಂಭಿಸಲಾದ ಡಿಜಿಟಲ್ ಬ್ಯಾಂಕ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಹಣ ಸಂಗ್ರಹಣೆಯೇ ಸವಾಲಿನ ಕೆಲಸ:ಸದ್ಯದ ವಹಿವಾಟಿನಲ್ಲಿ ಹೂಡಿಕೆಯು ಅಧಿಕ ಸವಾಲಿನದ್ದಾಗಿದೆ. ಹೂಡಿಕೆದಾರರು ಹೆಚ್ಚಿನ ಲಾಭ ಮತ್ತು ಹೂಡಿಕೆಯ ನಿಖರತೆಯನ್ನು ಹೊಂದಿರುವ ಕಾರಣದಿಂದಾಗಿ, ಹೆಚ್ಚಿನ ಬಡ್ಡಿ ದರಗಳು, ಮಾರುಕಟ್ಟೆ ಕುಸಿತದ ಭಯದಿಂದಾಗಿ ಧಾರಾಳ ಹೂಡಿಕೆಗೆ ಮುಂದಾಗುತ್ತಿಲ್ಲ. ಮಾರುಕಟ್ಟೆಯ ದುರ್ಬಲತೆಯಿಂದಾಗಿ ನಿಖರ ಗುರಿ ಸಾಧನೆ ಕಷ್ಟವಾಗುತ್ತಿದೆ.
ಕಳೆದ ವರ್ಷ ನಾಸ್ಡಾಕ್ ಶೇಕಡಾ 33 ರಷ್ಟು ಕುಸಿತ ಕಂಡಿದ್ದರಿಂದ ಟೆಕ್ ಸ್ಟಾಕ್‌ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಡೇಟಾ ಫರ್ಮ್ ಕ್ರಂಚ್‌ಬೇಸ್ ಪ್ರಕಾರ, ಸಾಹಸೋದ್ಯಮ ಬಂಡವಾಳ ಬೆಂಬಲಿತ ಕಂಪನಿಗಳು 2022 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ 369 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಿವೆ. ಇದು 2021 ರ ಸಾಲಿಗಿಂತಲೂ ಕಡಿಮೆಯಾಗಿದೆ. ಈಗ ಜಾಗತಿಕವಾಗಿ 679.4 ಶತಕೋಟಿ ಹೂಡಿಕೆ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 98 ಪ್ರತಿಶತ ಹೆಚ್ಚಳವಾಗಿದೆ ಎಂಬುದು ವಿಶೇಷವಾಗಿದೆ.