ನವದೆಹಲಿ :ಈ ವರ್ಷ ಸಕ್ಕರೆ ಉತ್ಪಾದನೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪರಿಷ್ಕೃತ ಅಂದಾಜಿನ ಪ್ರಕಾರ, ಎಥೆನಾಲ್ ಉತ್ಪಾದನೆಗೆ 35 ಲಕ್ಷ ಟನ್ ಸಕ್ಕರೆಯನ್ನು ರಿಯಾಯತಿ ಮಾಡಿದ ನಂತರ ಪ್ರಸ್ತುತ ಸಕ್ಕರೆ ಋತುವಿನಲ್ಲಿ ಇದರ ಉತ್ಪಾದನೆಯು ಸುಮಾರು 350 ಲಕ್ಷ ಟನ್‌ಗಳಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ. 278 ಲಕ್ಷ ಟನ್‌ಗಳಷ್ಟು ಸಕ್ಕರೆ ದೇಶೀಯ ಬಳಕೆಗೆ ಪೂರೈಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಸಕ್ಕರೆ ಋತುವಿನ ಆರಂಭದಲ್ಲಿ (ಅಕ್ಟೋಬರ್-ಸೆಪ್ಟೆಂಬರ್ 2022 ಅವಧಿ) ಸುಮಾರು 85 ಲಕ್ಷ ಟನ್‌ಗಳ ಕ್ಯಾರಿ ಓವರ್ ಸ್ಟಾಕ್ ಇತ್ತು. ದೇಶದ ಸುಮಾರು 95 ಲಕ್ಷ ಟನ್ ಸಕ್ಕರೆ ರಫ್ತು ಆಗುತ್ತದೆ. ಈ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಪ್ರಸಕ್ತ ಸಕ್ಕರೆ ಋತುವಿನ ಮುಕ್ತಾಯದ ಸ್ಟಾಕ್ 60 ಲಕ್ಷ ಟನ್ಗೂ ಹೆಚ್ಚು ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಸಕ್ಕರೆಯ ಲಭ್ಯತೆಯು ದೇಶೀಯ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ. ಹಾಗಾಗಿ, ಸಕ್ಕರೆಯ ಸುಗಮ ಲಭ್ಯತೆ ಇರುತ್ತದೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.